ರಾಜ್ಯ ಸುದ್ದಿಗಳು
ಮಂಗಳೂರು
ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಬಿ. ಭಾಸ್ಕರ ರಾವ್ ಅವರ ಸ್ವಯಂ ನಿವೃತ್ತಿಗೆ ರಾಜ್ಯ ಸರಕಾರ ಕೊನೆಗೂ ಅನುಮೋದನೆ ನೀಡಿದೆ. ಇದರ ಬೆನ್ನಲ್ಲೇ ಸ್ವಯಂ ನಿವೃತ್ತಿ ಪಡೆದು ಕೊಂಡ ಅವರು ಇದೀಗ ರಾಜಕೀಯ ಪ್ರವೇಶದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಬೆಂಗಳೂರು ಬಸವನಗುಡಿ ಮತಕ್ಷೇತ್ರದಿಂದ ಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಅಥವಾ ಬೇರಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರಾ ಎಂಬ ಬಗ್ಗೆ ಇದೀಗ ರಾಜಕೀಯ ವಿಶ್ಲೇಷಕರ ಚರ್ಚೆ ನಡೆದಿದೆ.
ಭಾಸ್ಕರ ರಾವ್ ಸ್ವಯಂ ನಿವೃತ್ತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿ ಹಾಕಿದ್ದು ಡಿಸೆಂಬರ್ 31 ರಂದು ಅವರು ಸ್ವಯಂನಿವೃತ್ತಿಯಾಗಲಿದ್ದಾರೆ. ಬಸವನಗುಡಿಯಲ್ಲಿ ಹುಟ್ಟಿದ ಭಾಸ್ಕರ ರಾವ್ ಹಿರಿಯ ಐಪಿಎಸ್ ಅಧಿಕಾರಿ. ಬೆಳಗಾವಿ ಮಹಾನಗರ ಪೊಲೀಸ್ ಕಮಿಷನರೇಟ್ ನ ಮೊದಲ ಕಮಿಷನರ್ ಆಗಿ ಸೇವೆಯೂ ಸಲ್ಲಿಸಿದ್ದರು. ಜನಸಾಮಾನ್ಯರ ಜತೆ ಹೊಂದಿಕೊಂಡು ಹೋಗುವ ಸ್ವಭಾವದವರಾದ ಅವರು ಸ್ನೇಹಶೀಲ ಸ್ವಭಾವಕ್ಕೆ ಹೆಸರುವಾಸಿ.
ಸ್ವಯಂ ನಿವೃತ್ತಿ ಪಡೆದು ಕೊಂಡಿರುವ ಹಿಂದೆ ಅವರ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆಗಳು ಇದೀಗ ಮತ್ತೆ ರೆಕ್ಕೆಪುಕ್ಕ ಪಡೆದುಕೊಂಡಿವೆ. ವಿಧಾನಸಭಾ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಇದೆ. ಹೀಗಾಗಿ ಅವರು ರಾಜಕೀಯ ಪ್ರವೇಶ ಮಾಡಲಿದ್ದಾರೆಯೇ ಎಂಬ ಚರ್ಚೆಗಳು ಹರಿದಾಡಿವೆ.
Be the first to comment