ಜಿಲ್ಲಾ ಸುದ್ದಿಗಳು
ಶಿರಸಿ
ಅರಣ್ಯ ದೌರ್ಜನ್ಯದ ವಿರುದ್ಧ ಅರಣ್ಯ ಇಲಾಖೆ ಪರವಾಗಿ ಮನವಿ ಸ್ವೀಕರಿಸಲು ಬಂದ ಉನ್ನತ ಮಟ್ಟದ ಅರಣ್ಯಾಧಿಕಾರಿಗೆ ತೀವ್ರ ತರಾಟೆಗೆ ತೆಗೆದುಕೊಂಡು, ಜಿಲ್ಲೆಯ ಅರಣ್ಯ ಅಧಿಕಾರಿಗಳು ದೌರ್ಜನ್ಯವೆಸಗುವ ಕುರಿತು ಕಾನೂನು ಕ್ರಮ ಜರುಗಿಸುವಂತೆ ಅಗ್ರಹಿಸಿ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡ ಪ್ರಸಂಗ ಇಂದು ಬೆಳಗಾವಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಅರಣ್ಯವಾಸಿಗಳಿಂದ ಜರುಗಿದ ಬೃಹತ್ ‘ಬೆಳಗಾವಿ ಚಲೋ’ ಕಾರ್ಯಕ್ರಮದಲ್ಲಿ ಜುರುಗಿದವು. ಇಂದು ಬೆಳಗಾವಿ ಚಲೋ ಪ್ರತಿಭಟನಾ ರ‍್ಯಾಲಿಯಲ್ಲಿ ಅರಣ್ಯ ಇಲಾಖೆಯ ಪರವಾಗಿ ಪ್ರತಿನಿಧಿಸಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯ ಜೀವಿ) ವಿಜಯಕುಮಾರ ಗೋಗಿ ಅವರು ಅರಣ್ಯವಾಸಿಗಳ ಆಕ್ರೋಶಕ್ಕೆ ಒಳಗಾಗಿದ್ದು ಇರುತ್ತದೆ.
ಜಿಲ್ಲಾದ್ಯಂತ ಆಗಮಿಸಿದ ಅರಣ್ಯ ಇಲಾಖೆಯಿಂದ ಅರಣ್ಯನಾಶ, ಕಾನೂನು ಬದ್ಧ ಅರಣ್ಯವಾಸಿಗಳಿಗೆ ಕಿರುಕುಳ, ದೌರ್ಜನ್ಯ, ಮಾನಸಿಕ ಹಿಂಸೆ ನಿಡುವ ಕುರಿತು ಪೋಟೋ, ವಿಡಿಯೋ, ಇನ್ನಿತರ ದಾಖಲೆಗಳನ್ನ ಪ್ರದರ್ಶೀಸಿ ಅರಣ್ಯ ಅಧಿಕಾರಿಗಳ ದೌರ್ಜನ್ಯ ಕ್ರಮವನ್ನ ವಿವಿಧ ತಾಲೂಕಿನಿಂದ ಆಗಮಿಸಿದ ಮುಖಂಡರಾದ ಅಲಿ ಸೈಯದ್, ಸುಭಾಷ್ ಗಾವಡಾ, ಸಂತೋಷ ಗಾವಡಾ, ರಾಘವೇಂದ್ರ ನಾಯ್ಕ, ಹೊನ್ನಪ್ಪ ನಾಯ್ಕ ಶಿವಾನಂದ ಜೋಗಿ ಮುಂತಾದವರು ಪ್ರದರ್ಶೀಸಿದರು.
Be the first to comment