ರಾಜ್ಯ ಸುದ್ದಿಗಳು
ದೇವನಹಳ್ಳಿ
ಬಹಳ ಅಪರೂಪದಲ್ಲಿ ಅಪರೂಪವಾದ ಆರೋಗ್ಯಕರ ಗುಣಗಳುಳ್ಳ ಜಪಾನಿ ಗೌಜುಗನ ಹಕ್ಕಿಗಳನ್ನು ಜಿಲ್ಲೆಯ ನಾನಾ ಕಡೆಗಳಲ್ಲಿ ಬೆರಳಣಿಕೆಯಷ್ಟು ಮಾತ್ರ ಸಾಕಾಣಿಕೆ ಮಾಡುತ್ತಾರೆ. ರಾಜ್ಯದ ಪಕ್ಕದ ಕೇರಳ ರಾಜ್ಯದಿಂದ ಸುಮಾರು 1 ಸಾವಿರ ಹಕ್ಕಿಗಳನ್ನು ತಂದು ಯುವ ರೈತ ಹನುಮಂತಗೌಡ ತಮ್ಮ ಹೊಲದಲ್ಲಿ ಗೌಜುಗನ ಹಕ್ಕಿ ಸಾಕಣೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.ಅತಿವೃಷ್ಠಿ-ಅನಾವೃಷ್ಠಿಯಿಂದ ಕೃಷಿ ನಂಬಿಕೊಂಡು ಬದುಕುವುದು ರೈತರಿಗೆ ಕಷ್ಟವಾಗುತ್ತಿದೆ. ಹೀಗಾಗಿ ಉಪಕಸಬು ಮಾಡಬೇಕೆಂದುಕೊಂಡ ರೈತರು ಜಾನುವಾರು ಸಾಕಾಣಿಕೆ, ನಾಟಿಕೋಳಿ ಸಾಕಾಣಿಕೆ ಸೇರಿದಂತೆ ಹೈನುಗಾರಿಕೆಗೆ ಮುಂದಾಗಿ ಒಂದಿಷ್ಟು ಹಣವನ್ನು ಗಳಿಸುತ್ತಿದ್ದಾರೆ. ಅದರಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೊಯಿರ ಗ್ರಾಮದಲ್ಲಿ ರೈತರೊಬ್ಬರು ಜಪಾನಿ ಗೌಜುಗನ ಹಕ್ಕಿ ಸಾಕಾಣಿಕೆ ಮಾಡುವುದರ ಮೂಲಕ ಲಾಭ ಗಳಿಸಲು ಮುಂದಾಗಿದ್ದಾರೆ.
ಕೊಯಿರ ಗ್ರಾಮದಲ್ಲಿ ರೈತ ಹನುಮಂತಗೌಡಎಂಬುವವರು ಕೇರಳ ರಾಜ್ಯದಿಂದ ಸುಮಾರು 1 ಸಾವಿರ ಹಕ್ಕಿಗಳನ್ನು ತಂದು ಸಾಕುತ್ತಿದ್ದಾರೆ. ತಮ್ಮ ಗ್ರಾಮದಲ್ಲಿ ಚಿಕ್ಕ ಜಾಗದಲ್ಲಿ ಗೌಜುಗನ ಹಕ್ಕಿ ಸಾಕುತ್ತಿದ್ದಾರೆ. ಆರಂಭದಲ್ಲಿಯೇ 1 ಸಾವಿರ ಗೌಜುಗ ಹಕ್ಕಿಗಳನ್ನು ತಂದು ಶೇಡ್ ರೂಪಿಸಿ ಅಲ್ಲಿ ಅವುಗಳಿಗೆ ಸಕಾಲದಲ್ಲಿ ನೀರು, ಆಹಾರ ಒದಗಿಸಿ ರಕ್ಷಣೆ ನೀಡುವುದರ ಮೂಲಕ ಸಾಕಾಣಿಕೆ ಪ್ರಾರಂಭಿಸಿದ್ದಾರೆ. ಈಗಾಗಲೇ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಗೌಜುಗ ಮಾಂಸ ಪ್ರಿಯರು ಮತ್ತು ಮೊಟ್ಟೆಗಳನ್ನು ಕೊಂಡುಕೊಂಡು ಹೋಗುತ್ತಿದ್ದಾರೆ. 1 ಹಕ್ಕಿ 500-600ರೂ.ಗಳಿಗೆ ಮಾರಾಟ ಮಾಡುತ್ತಾರೆ. ಒಂದು ಮೊಟ್ಟೆಗೆ 5 ರೂಪಾಯಿಯಂತೆ ಮಾರಾಟ ಮಾಡಿಕೊಂಡು ಕೈತುಂಬ ಆದಾಯ ಪಡೆಯಲು ಮುಂದಾಗಿದ್ದಾರೆ. ರೈತ ಹನುಮಂತೇಗೌಡ ಒಂದು ಹಕ್ಕಿಗೆ 60-70ರೂ.ಗಳಂತೆ 1 ಸಾವಿರ ಚಿಕ್ಕ ಚಿಕ್ಕ ಮರಿಗಳನ್ನು ತಂದು ಸಾಕಾಣಿಕೆ ಆರಂಭಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದೇವನಹಳ್ಳಿ ತಾಲೂಕಿನಲ್ಲಿ ಒಂದು ಕಡೆ, ನೆಲಮಂಗಲ ತಾಲೂಕಿನಲ್ಲಿ ಒಂದು ಕಡೆ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಒಂದು ಕಡೆ ಮಾತ್ರ ಈ ಹಕ್ಕಿಗಳನ್ನು ಸಾಕಾಣಿಕೆ ಮತ್ತು ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಈ ಹಕ್ಕಿಯ ಮೊಟ್ಟೆಯಲ್ಲಿ ಆರೋಗ್ಯ ಸಂಜೀವಿನಿ ಅಡಗಿರುವುದರಿಂದ ಈ ಮೊಟ್ಟೆಗೆ ಕೂಡಾ ಬಾರೀ ಬೇಡಿಕೆಯಿದ್ದು, ಈ ಮೊಟ್ಟೆ ಆರೋಗ್ಯಕ್ಕೆ ತುಂಬ ಒಳ್ಳೆಯದು.
ಮೊಟ್ಟೆ ಮಾಂಸದಲ್ಲಿ ಔಷಧಿ ಗುಣ:- ಜಪಾನಿ ಗೌಜುಗನ ಹಕ್ಕಿಯ ಮಾಂಸ ಹಾಗೂ ಮೊಟ್ಟಿಯಲ್ಲಿ ಔಷಧಿ ಗುಣಗಳಿವೆ. ಅಸ್ತಮಾ, ಅಲರ್ಜಿ, ಬೊಜ್ಜು, ಮಾಸಿಕ ಒತ್ತಡ, ಮಧುಮೇಹ, ರಕ್ತ ಹೀನತೆ, ಶಸ್ತ್ರಚಿಕಿತ್ಸೆಯ ನಂತರ ಗಾಯ ಒಣಗುವಿಕೆಗೆ ಮುಂತಾದ ತೊಂದರೆಗಳಿಗೆ ಇದರ ಮಾಂಸ ಹಾಗೂ ಮೊಟ್ಟೆಯನ್ನು ಸೇವಿಸಬಹುದು. ಇದು ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದಾರ್ಢ್ಯ ಸೌಂದರ್ಯ ವರ್ಧಕ ಎಂಬುವುದು ದೇಶ ವಿದೇಶದಲ್ಲಿ ಮಾಡಿದ ಸಂಶೋಧನೆಯಿಂದ ತಿಳಿಯಬಹುದಾಗಿದೆ. ಇಷ್ಟೋಂದು ಪೌಷ್ಟಿಕ ಹಾಗೂ ಔಷಧಿಯ ಗುಣ ಈ ಗೌಜುಗನ ಹಕ್ಕಿಯ ಮಾಂಸ ಹಾಗೂ ಮೊಟ್ಟೆಗಿದೆಯಂತೆ. ಸಾಕಾಣಿಕೆ ಬಲು ಸುಲಭ:- ನಾಆಟಿ ಕೋಳಿಗೆ ಇರುವ ಬೇಡಿಕೆ ಫಾರಂ ಕೋಳೀಗಿಲ್ಲ. ಆದರೆ ಈ ಜಪಾನಿ ಗೌಜುಗನ ಹಕ್ಕಿಯ ಮಾಂಸಕ್ಕಿರುವ ಬೇಡಿಕೆ ನಾಟಿ ಕೋಳಿಗೂ ಇಲ್ಲ. ರುಚಿಕರ ಮಾಂಸವನ್ನು ಹೊಂದಿರುವುದರಿಂದ ಈ ಹಕ್ಕಿಗೆ ಹೆಚ್ಚು ಜನರು ಇಷ್ಟ ಪಡುತ್ತಾರೆ. ಇತ್ತಿಚೆಗೆ ಗೌಜುಗನ ಹಕ್ಕಿ ಸಾಕಾಣಿಕೆಗೆ ಬೆರಳೆಣಿಕೆಯಷ್ಟು ರೈತರೂ ಮಾತ್ರ ಮುಂದಾಗಿದ್ದು, ಯಾವುದೇ ವಾತಾವರಣದಲ್ಲಿಯೂ ಉತ್ತಮವಾಗಿ ಹೊಂದಿಕೊಳ್ಳುವ ಗುಣವನ್ನು ಈ ಗಾತ್ರದ ಸಣ್ಣ ಪಕ್ಷಿ ಅತೀ ಶೀಘ್ರವಾಗಿ ಬೆಳವಣಿಗೆ ಹೊಂದುತ್ತದೆ.
ಸ್ಥಳೀಯವಾಗಿ ಕಾಡು ಗೌಜುಗನ ಹಕ್ಕಿ ಎಂಬ ಪ್ರಭೇದ ಇದೆ. ಇದನ್ನು ಲಾವಕ್ಕಿ, ಪುರಲಿ ಹಕ್ಕಿ, ಕಾಡು ಪುರಲಿ ಎಂದು ಕರೆಯುತ್ತಾರೆ. ಇದು ಕಾಡಿನಲ್ಲಿ ವಾಸವಾಗಿರುತ್ತದೆ. ಇದನ್ನು ಮಾರಾಟಕ್ಕೆ ಸಾಕುವುದು ವನ್ಯಜೀವಿ ಕಾಯ್ದೆಯ ಪ್ರಕಾರ ನಿಷೇಧಿತ. ಅದಕ್ಕಾಗಿ ಅದೇ ಪ್ರಭೇದಕ್ಕೆ ಸೇರಿದ ಜಪಾನೀಸ್ ಗೌಜುಗನ ಹಕ್ಕಿ ಸಾಕಾಣಿಕೆಗೆ ಒತ್ತು ಕೊಡಲಾಗಿದೆ. ಇದು ಕಾಡುಗಳಲ್ಲಿರುವ ಗೌಜುಗನ ಹಕ್ಕಿಗಿಂದ ಸ್ವಲ್ಪ ದೊಡ್ಡದಾಗಿದ್ದು, ಶೀಘ್ರ ಬೆಳೆವಣಿಗೆ ಮತ್ತು ಹೆಚ್ಚು ಮೊಟ್ಟೆಯನ್ನು ಉತ್ಪಾಧನಾ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಹಕ್ಕಿಯನ್ನು ಮಾಂಸ ಮೊಟ್ಟೆ ಉದ್ದೇಶಕ್ಕಾಗಿ ಪ್ರಪಂಚಾದಾದ್ಯಂತ ವಾಣಿಜ್ಯವಾಗಿ ಸಾಕಾಣಿಕೆ ಮಾಡಲಾಗುತ್ತಿದೆ ಇದರ ಮೂಲ ಯೂರೋಪ್ ಹಾಗೂ ಏಷ್ಯಾ ಖಂಡ. ಹಕ್ಕಿಯ ವಿಶೇಷತೆಗಳು: ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹವಾಮಾನಕ್ಕೆ ಹೊಂದುಕೊಳ್ಳುವಂತಹ ಗುಣವನ್ನು ಹಕ್ಕಿಗಳು ಹೊಂದಿವೆ. ಸಾಕಾಣಿಕೆಗೆ ಕಡಿಮೆ ಬಂಡವಾಳ ಇದ್ದರೆ ಸಾಕು. ಕಾಲಕಾಲಕ್ಕೆ ಕುಡಿಯಲು ನೀರು, ಆಹಾರ (ಫೀಡ್) ಹಾಖಿದರೆ ಸಾಕು. ಹುಟ್ಟಿದ 7 ವಾರದಲ್ಲಿ ಮೊಟ್ಟೆ ಇಡಲು ಪ್ರಾರಂಭಿಸುತ್ತವೆ. ಒಟ್ಟು 500-600ಗ್ರಾಂ. ತೂಕ ಬರುತ್ತದೆ. ಇದು ಕೆಜಿ ಲೆಕ್ಕದಲ್ಲಿ ಮಾರಾಟವಾಗುವುದಿಲ್ಲ. ಪ್ರತಿ ಹಕ್ಕಿಗೆ ಬೆಲೆ ನಿಗಧಿಯಾಗಿರುತ್ತದೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಇರುತ್ತದೆ. ಹೆಚ್ಚಾಗಿ ಮಾಂಸದ ಹೊಟೇಲ್‌ಗಳಲ್ಲಿ ಇದನ್ನು ಉಪಯೋಗಿಸುತ್ತಾರೆ. ಬೇರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ನಮ್ಮ ರಾಜ್ಯದಲ್ಲಿ ಅಷ್ಟೇನು ಸಾಕಾಣಿಕೆದಾರರು ಇಲ್ಲ. ಇತ್ತೀಚೆಗೆ ಕೃಷಿ ಸಂಶೋಧನಾ ಕೇಂದ್ರಗಳಿಂದ ಇದರ ಸಾಕಾಣಿಕೆಯ ಬಗ್ಗೆ ವ್ಯಾಪಕ ಮಾಹಿತಿ ಕೂಡ ನೀಡುತ್ತಿವೆ.
….,…………….,…………..,……………………….ಮೊದಲ ಬಾರಿಗೆ ಗೌಜುಗ ಹಕ್ಕಿ ಸಾಕಾಣಿಕೆ ಮಾಡುತ್ತಿದ್ದೇನೆ. ಉತ್ತಮ ಸ್ಪಂದನೆ ಸಿಗುತ್ತಿದೆ. ಬೇಡಿಕೆಯೂ ಸಹ ಇದೆ. ಮೊಟ್ಟೆಗಳ ವ್ಯಾಪಾರವೂ ಸಹ ಇದೆ. ಸುಲಭವಾಗಿ ಸಾಕಾಣಿಕೆ ಮಾಡಬಹುದು. ಹೆಚ್ಚು ಲಾಭವೂ ಸಹ ಇದೆ. 1 ಸಾವಿರ ಗೌಜುಗ ಹಕ್ಕಿಗಳನ್ನು ಸಾಕಿದ್ದೇನೆ. ಮಾರಾಟವೂ ಸಹ ಮಾಡುತ್ತಿದ್ದೇನೆ.– ಹನುಮಂತ ಗೌಡ | ರೈತ, ಕೊಯಿರ….,…………….,…………..,……………………….
Be the first to comment