ಮೀನುಗಾರರನ್ನು ಬಂಧಿಸಿರುವ ಶ್ರೀಲಂಕಾ ಸರ್ಕಾರ ಕ್ರಮ ಖಂಡಿಸುತ್ತೆನೆ.ಕೇಂದ್ರ ಸರ್ಕಾರ ಮೀನುಗಾರರ ರಕ್ಷಣೆಗೆ ಧಾವಿಸಬೇಕು.ಬಂಧನಸಿ ವಶಕ್ಕೆ ಪಡೆಯವ ಮೊದಲೆ ರಕ್ಷಣ ಪಡೆಗಳು ನಮ್ಮ ಮೀನುಗಾರರನ್ನು ರಕ್ಷಣೆ ಮಾಡಬೇಕಾಗಿತ್ತು ಕೇಂದ್ರ ಸರ್ಕಾರ ಮೀನುಗಾರರನ್ನು ನಿರ್ಲಕ್ಷ್ಯ ಮಾಡುತ್ತಿದೆ.ಇದೆ ಮುಂದುವರೆದ ಮೀನುಗಾರರ ತಮ್ಮ ಶಕ್ತಿ ದೇಶಾದ್ಯಂತ ತೋರಿಸುತ್ತಾರೆ ಎಚ್ಚರ ಎಂದು ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು
ಯೋಗೇಶ್ ಶಿರೂರು ರಾಷ್ಟ್ರೀಯ ಮೀನುಗಾರರ ರಕ್ಷಣಾ ಸಮಿತಿ ಸದಸ್ಯ
ಚೆನ್ನೈ: ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ 12 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ವಶಕ್ಕೆ ಪಡೆದಿದೆ ಮೀನುಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಗಡಿ ಪ್ರದೇಶದಲ್ಲಿ ಮೀನುಗಾರಿಕೆ ಮಾಡುತ್ತಿದ್ದರು ಎನ್ನುವ ಆರೋಪದ ಮೇಲೆ ನ.11ರ ರಾತ್ರಿ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ವಶಕ್ಕೆ ಪಡೆದಿದೆ ಎಂದು ಇಲಾಖೆ ತಿಳಿಸಿದೆ.
ಲಂಕಾ ನೌಕಾಪಡೆಯಿಂದ ಬಂಧನಕ್ಕೊಳಗಾದ ಮೀನುಗಾರರನ್ನು ಆದಷ್ಟು ಬೇಗ ಬಿಡುಗಡೆಗೊಳಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ರಾಮೇಶ್ವರಂನಲ್ಲಿರುವ ಇತರ ಮೀನುಗಾರರು ಪ್ರತಿಭಟನೆ ನಡೆಸಿದ್ದಾರೆ.
ಇದೇ ವೇಳೆ ತಮಿಳುನಾಡಿನ ಮೀನುಗಾರರನ್ನು ಹೀಗೆ ಪದೇ ಪದೇ ಬಂಧಿಸದಂತೆ ಹಾಗೂ ಹಡಗುಗಳನ್ನು ವಶಪಡಿಸಿಕೊಳ್ಳದಂತೆ ತಡೆಯಬೇಕು ಎಂದು ಬೇಡಿಕೆಯಿಟ್ಟಿದ್ದಾರೆ.
Be the first to comment