ಬೆಂಗಳೂರು ನವೆಂಬರ್ 15; ಯೋಗಶ್ರೀ ರಾಯಚೂರು ಕಿಂಗ್ಸ್ ಯಾದಗಿರಿ ಯೋಧಾಸ್ ಮ್ಯಾಚ್ ಪ್ರಯುಕ್ತ ಕರ್ನಾಟಕ ರಾಜ್ಯೋತ್ಸವ ಮತ್ತು ಪರಿಸರ ಸಂರಕ್ಷಣೆಗಾಗಿ ಬೆಂಗಳೂರಿನ ಸೋಲದೇವನಹಳ್ಳಿಯ ಆಚಾರ್ಯ ಇಂಜಿನಿಯರಿಂಗ್ ಕ್ರೀಡಾಂಗಣದಲ್ಲಿ ಪಥ ಸಂಚಲನ ಆಯೋಜಿಸಲಾಗಿದ್ದು, ಮುಖ್ಯ ಅತಿಥಿಯಾಗಿ 30ಕೋಟಿ ಮೌಲ್ಯದ ನಾಯಿ ಪಾಂಡ ಪಥ ಸಂಚಲನದಲ್ಲಿ ಪಾಲ್ಗೋಳ್ಳಲಿದೆ.
ಈ ಕುರಿತಂತೆ ಪ್ರೆಸ್ ಕ್ಲಬ್ ಆಪ್ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಈ ವಿಷಯ ತಿಳಿಸಿದ ಕರ್ನಾಟಕ ರಾಜ್ಯ ಸಾಪ್ಟ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಗಂಗಾಧರ ರಾಜು,ಕೆಎಸ್ ಪಿ ಎಲ್ ಕ್ರಿಕೆಟ್ ಪಂದ್ಯಾವಳಿ ಕ್ರಿಕೆಟ್ ಜಗತ್ತಿನಲ್ಲಿ ಮಹತ್ವದ ಪಂದ್ಯವಾಗಿದ್ದು, 31ಜಿಲ್ಲೆಗಳಿಂದ 32ತಂಡಗಳು ಮತ್ತು 699ಆಟಗಾರರನ್ನು ಒಳಗೊಂಡಿದೆ.ನವೆಂಬರ್ ಒಂದರಿಂದ ಡಿಸೆಂಬರ್ ಒಂದರವರೆಗೆ ನಡೆಯಲಿರುವ ಈ ಪಂದ್ಯಾವಳಿ ಮುಂದಿನ ಪೀಳಿಗೆಯ ಕ್ರಿಕೆಟ್ ಪ್ರತಿಭೆಯ ವೇದಿಕೆಯಾಗಿ ಕಾರ್ಯನಿರ್ವಹಿಸುವುದರ ಜತೆಗೆ ರಾಜ್ಯದ್ಯಾಂತ ಕ್ರಿಕೆಟ್ ಕ್ರೀಡೆಯ ಪ್ರಚಾರಕ್ಕೆ ಸಹಾಯ ಮಾಡಲಿದೆ ಎಂದು ಹೇಳಿದರು.
Be the first to comment