ಗೆಲುವಿನ ನಿರೀಕ್ಷೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳು* ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಬೀಳ್ಕೊಡುಗೆ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಪ್ರತಿ ಹಂತದಲ್ಲೂ ವಿದ್ಯಾರ್ಥಿಗಳು ಯಶಸ್ವಿಗೊಳ್ಳುವುದರ ಮೂಲಕ ಮುಂದಿನ ಶೈಕ್ಷಣಿಕ ಸವಾಲು ಸುಗಮವಾಗಲಿ ಎಂದು ಕುಂದಾಣ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ವಿ.ವೆಂಕಟೇಶ್ ತಿಳಿಸಿದರು.ದೇವನಹಳ್ಳಿ ತಾಲೂಕಿನ ಕುಂದಾಣ ಮೊರಾರ್ಜಿ ದೇಸಾಯಿ ವಸತಿ ಶಾಲಾ ಆವರಣದಲ್ಲಿ ೨೦೨೦-೨೧ನೇ ಸಾಲಿನ ಶೈಕ್ಷಣಿ ವರ್ಷ ಎಸ್ಸೆಸ್ಸೆಲ್ಸಿಯ ಅಂತಿಮ ಘಟ್ಟ ಮುಗಿಸಿದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಪೋಷಕರ ಮತ್ತು ಶಿಕ್ಷಕರ ಸಲಹೆ ಮಾರ್ಗದರ್ಶನ ಪಡೆದು ಮುಂದಿನ ಶೈಕ್ಷಣಿಕ ವರ್ಷಕ್ಕೆ ಕಾಲಿಡಬೇಕು. ಪ್ರತಿ ವಿದ್ಯಾರ್ಥಿ ಶಾಲೆಯ ಕೀರ್ತಿಯನ್ನು ಎತ್ತಿಹಿಡಿಯಬೇಕು. ಕಾಲೇಜು ಹಂತದಲ್ಲಿಯೂ ಸಹ ಶಿಸ್ತು, ಸಂಯಮವನ್ನು ಪಾಲಿಸಬೇಕು. ಗುರುಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು. ನಿಮ್ಮ ಸಮಸ್ಯೆಗಳು ಏನೇ ಇದ್ದರೂ ಯಾವ ಸಮಯದಲ್ಲಾದರೂ ಕರೆ ಮಾಡಿ ನಮ್ಮೊಂದಿಗೆ ಚರ್ಚಿಸಿ, ಸಲಹೆ ಪಡೆಯಬಹುದು. ನೀವು ವ್ಯಾಸಂಗ ಮಾಡಿದ ಶಾಲೆಯನ್ನು ಮರೆಯಬಾರದು. ಭವಿಷ್ಯದಲ್ಲಿ ನೀವು ಗುರಿಯನ್ನಿಟ್ಟುಕೊಂಡು ಉತ್ಸಾಹದಿಂದ ಮುಂದಾಗಬೇಕು. ಇತರೆ ಕೆಟ್ಟ ದಾರಿಯನ್ನು ಹಿಡಿಯಬಾರದು. ಒಳ್ಳೆಯ ಪ್ರಜೆಯಾಗಿ ಸಮಾಜಕ್ಕೆ ನಿಮ್ಮ ಕೊಡಗೆ ಇರುವಂತೆ ಬದುಕು ನಡೆಸುವಂತಾಗಬೇಕು.

CHETAN KENDULI

ಶಾಲೆಯಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಆಗಿದ್ದರೆ, ಅದನ್ನು ಈ ಕೂಡಲೇ ಮರೆತು ಎಲ್ಲರೊಂದಿಗೆ ಉತ್ತಮವಾಗಿ ವರ್ತಿಸಬೇಕು. ಸಮಾಜದಲ್ಲಿ ಉತ್ತಮ ಪ್ರಜೆಯಾಗಿರಬೇಕು. ಕಾಲೇಜು ಸೇರುವ ಮುನ್ನ ತಾವು ಆರಿಸಿಕೊಳ್ಳುವ ಐಚ್ಚಿಕ ವಿಷಯಗಳ ಬಗ್ಗೆ ಜ್ಞಾನ ಹೊಂದಿರಬೇಕು. ವಿಜ್ಞಾನ, ಕಾಮರ್ಸ್ ಮತ್ತು ಆರ್ಟ್ಸ್ ವಿಭಾಗಗಳಿದ್ದು, ಜತೆಯಲ್ಲಿ ಐಟಿಐ, ಡಿಪ್ಲೋಮಾದಂತಹ ಕೌಶಲ್ಯ ತರಬೇತಿಯನ್ನು ಸಹ ಕಾಲೇಜು ಹಂತದಲ್ಲಿ ಪಡೆದುಕೊಳ್ಳಲು ಅವಕಾಶ ಇರುತ್ತದೆ. ತಮ್ಮ ಜ್ಞಾನಕ್ಕೆ ಸರಿಹೊಂದುವ ಹಾಗೂ ತಾವು ಇಚ್ಚಿಸುವ ವಿಭಾಗವನ್ನು ಹಾರಿಸಿಕೊಂಡು ಶೈಕ್ಷಣಿಕವಾಗಿ ಮುಂಬರಬೇಕು ಎಂದು ಸಲಹೆ ಮಾಡಿದರು.ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ತಮ್ಮ ಅನುಭವ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು.ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಯಲ್ಲಪ್ಪ ನಾಯಕ, ಶಿಕ್ಷಕರಾದ ಶ್ರೇತ.ಎಂ.ಎಸ್, ಹಾಜಿರಾಬಾನು, ಅರುಣ.ಎಚ್.ಎನ್, ಮೀನಾಕ್ಷಿ, ಶೈಲಜಾ, ಗಾಯಿತ್ರಿ ಹೆಗಡೆ, ಸಿ.ಡಿ.ಗಾಯಿತ್ರಿ, ಯಶೋಧಮ್ಮ, ಜ್ಯೋತಿ, ನಾರಾಯಣಸ್ವಾಮಿ, ಶಂಕರ್ ಸೇರಿದಂತೆ ಇತರರು ಇದ್ದರು.

Be the first to comment

Leave a Reply

Your email address will not be published.


*