ರಾಜ್ಯ ಸುದ್ದಿ
ಮಂಗಳೂರು-ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಿಂದ ಮಂಗಳೂರು ನಗರದ ಕೆಪಿಟಿಯಲ್ಲಿರುವ ಪೆಟ್ರೋಲ್ ಪಂಪ್ ಎದುರು ವಿನೂತನ ಪ್ರತಿಭಟನೆ ನಡೆಯಿತು. ‘100 ನಾಟೌಟ್’ ಎಂಬ ಹೆಸರಲ್ಲಿ ನಡೆದ ಪ್ರತಿಭಟನೆಯಲ್ಲಿ ಜಾಗಟೆ ಬಾರಿಸುವ ಮೂಲಕ ಇಂಧನ ತೈಲ ಬೆಲೆ ಏರಿಕೆಯನ್ನು ಖಂಡಿಸಲಾಯಿತು. ಇದೇ ವೇಳೆ 100 ನಾಟೌಟ್ ಕೇಕ್ ಕತ್ತರಿಸಿ ಇಂಧನ ತೈಲ ಬೆಲೆ ಏರಿಕೆಯನ್ನು ಪ್ರತಿಭಟನಾಕಾರರು ವ್ಯಂಗ್ಯವಾಡಿದರು. ಇಂಧನ ಬೆಲೆ ಏರಿಕೆ ವಿರುದ್ಧ ಭಿತ್ತಿ ಫಲಕಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರು ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕಾಂಗ್ರೆಸ್ ಮುಖಂಡ ಮಿಥುನ್ ರೈ, ಮಾಜಿ ಶಾಸಕರಾದ ಮೊಯ್ದಿನ್ ಬಾವ, ಜೆ. ಆರ್.ಲೋಬೊ, ಶಶಿಧರ್ ಹೆಗ್ಡೆ, ಸದಾಶಿವ ಉಳ್ಳಾಲ್, ಪಿ.ವಿ.ಮೋಹನ್, ವಿನಯ್ ರಾಜ್, ಪ್ರತಿಭಾ ಕುಳಾಯಿ, ಭಾಸ್ಕರ ಕೆ., ಅಪ್ಪಿ, ನವೀನ್ ಡಿಸೋಜ, ಟಿ.ಕೆ.ಸುಧೀರ್, ಶಬೀರ್, ಸವಾದ್ ಸುಳ್ಯ, ವಿಶ್ವಾಸ್ ಕುಮಾರ್ ದಾಸ್, ಪನಾಮ ವಿವೇಕ್ ರಾಜ್, ಸಂಶುದ್ದೀನ್ ಮೊದಲಾದವರು ಭಾಗವಹಿಸಿದ್ದರು.
Be the first to comment