ರಾಜ್ಯ ಸುದ್ದಿ
ಮಂಗಳೂರು-ಉದ್ಯೋಗಕ್ಕಾಗಿ ಕೆನಡಾಕ್ಕೆ ಹೋಗುವ ಯತ್ನದಲ್ಲಿ ತಮಿಳುನಾಡು ಮೂಲಕ ಮಂಗಳೂರಿಗೆ ಬಂದು ಅಕ್ರಮವಾಗಿ ಆಶ್ರಯ ಪಡೆದಿದ್ದ ಆರೋಪದಡಿಯಲ್ಲಿ 38 ಮಂದಿ ಶ್ರೀಲಂಕಾದ ಪ್ರಜೆಗಳನ್ನು ಹಾಗೂ ಅವರಿಗೆ ಮಂಗಳೂರಲ್ಲಿ ಆಶ್ರಯ ನೀಡಿದ್ದ ಆರು ಮಂದಿ ಸ್ಥಳೀಯರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಇವತ್ತು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಮಾನವ ಕಳ್ಳ ಸಾಗಾಟದ ಗಂಭೀರ ಪ್ರಕರಣ ಇದಾಗಿದೆ. ವಿದೇಶಿ ಪ್ರಜೆಗಳ ಅಕ್ರಮ ಪ್ರವೇಶ ಹಾಗೂ ವಾಸದ ಅಪರಾಧವೂ ಇದಾಗಿದೆ.
ವಶಕ್ಕೆ ಪಡೆಯಲಾದವರು ಉತ್ತರ ಶ್ರೀಲಂಕಾ ಭಾಗದ ನಿವಾಸಿಗಳೆಂದು ಹೇಳಲಾಗಿದ್ದು, ಇವರ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಅಂದರು. ಇನ್ನು ಶ್ರೀಲಂಕಾದ ಏಜೆಂಟರ ಮೂಲಕ ಕೆನಡಾ ದೇಶದಲ್ಲಿ ಉದ್ಯೋಗದ ಭರವಸೆಯೊಂದಿಗೆ 6ರಿಂದ 10 ಲಕ್ಷ 5ರಿಂದ 10 ಲಕ್ಷ ಶ್ರೀಲಂಕಾ ಕರೆನ್ಸಿಯನ್ನು ನೀಡಿ ಈ ವ್ಯಕ್ತಿಗಳನ್ನು ಖಾಸಗಿ ಬೋಟ್ ಮೂಲಕ ಮಾರ್ಚ್ 17ರಂದು ಚೆನ್ನೈಯ ತೂತುಕುಡಿಗೆ ತರಲಾಗಿತ್ತು. ಆದರೆ ಅಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಬಿಗಿ ತಪಾಸಣೆ ಆರಂಭಗೊಂಡಾಗ ಬಂಧನದ ಭೀತಿಯಲ್ಲಿ ಅವರನ್ನು ಬೆಂಗಳೂರಿಗೆ ಬಸ್‌ನಲ್ಲಿ ಕಳುಹಿಸಿ ಅಲ್ಲಿಂದ ಮಂಗಳೂರಿಗೆ ಸಾಗಿಸಲಾಗಿತ್ತು. ಇವರು ಮಂಗಳೂರಲ್ಲಿ ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ವಾಸವಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದರು.
Be the first to comment