ಜಿಲ್ಲಾ ಸುದ್ದಿಗಳು
ಭಟ್ಕಳ
ರಾಜ್ಯದಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಠ ರೀತಿಯಲ್ಲಿ ನಾಡಿನ ಪರಂಪರೆ, ಸಂಸ್ಸೃತಿಗಳ ಅನಾವರಣದೊಂದಿಗೆ, ಶಾಲಾ ಕಾಲೇಜು, ಸರಕಾರಿ ಕಚೇರಿಗಳಲ್ಲಿ ಗೀತ ಗಾಯನ ಕಾರ್ಯಕ್ರಮಗಳನ್ನು ಆಯೋಜಿಸಿ ಹೆಚ್ಚಿನ ಮೆರಗನ್ನು ನೀಡಿದ್ದೇವೆ ಎಂದು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ. ಅವರು ಹೇಳಿದರು.ಅವರು ಸೋಮವಾರದಂದು ಭಟ್ಕಳ ತಾಲೂಕಾ ಕ್ರೀಡಾಂಗಣದಲ್ಲಿ ೬೬ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಈ ಬಾರಿ ಕನ್ನಡ ರಾಜ್ಯೊತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹೆಚ್ಚಿನ ಮಹತ್ವ ನೀಡಿ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅದರಂತೆ ತಾಲೂಕಿನಲ್ಲಿಯೂ ಸಹ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸರಕಾರಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಂತಸದಿAದ ನಡೆಸಿದ್ದೇವೆ. ನಮ್ಮ ನಾಡಿನ ಪಾರಂಪರಿಕ ದೃಷ್ಟಿಕೋನದಿಂದ ಈ ರಾಜ್ಯೋತ್ಸವವೂ ಈ ಬಾರಿ ಹೆಚ್ಚಿನ ಮೆರಗನ್ನು ಪಡೆದುಕೊಂಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಸುನೀಲ ನಾಯ್ಕ ಮಾತನಾಡಿ ಕನ್ನಡದ ಬಗ್ಗೆ ಮಾತನಾಡಲು ನಾವೆಲ್ಲರು ಪುಣ್ಯ ಮಾಡಿದ್ದೇವೆ. ಅದರಲ್ಲು ಪ್ರತಿ ವರ್ಷ ರಾಜ್ಯೋತ್ಸವವನ್ನು ಆಚರಿಸುವುದೇ ಒಂದು ಸಂತಸ ತರಲಿದೆ. ರಾಜ್ಯೋತ್ಸವವನ್ನು ಕಾರ್ಯಕ್ರಮದ ದೃಷ್ಠಿಯಿಂದ, ಮನರಂಜನೆ ಭಾವದಿಂದ ನೋಡಬಾರದು ಕಾರಣ ಕನ್ನಡದಿಂದ ನಾವು ಗುರುತಿಸಿಕೊಂಡಿದ್ದೇವೆ. ಈ ಕನ್ನಡ ಉತ್ಸವವನ್ನು, ಅದರ ಇತಿಹಾಸವನ್ನು ನಮ್ಮ ಜೀವನದ ಪರಿಪಾಠವನ್ನಾಗಿ ಅಳವಡಿಸಿಕೊಳ್ಳಬೇಕು.ಧರ್ಮಸ್ಥಳ ಕ್ಷೇತ್ರದ ಪೂಜ್ಯ ಡಾ.ಡಿ. ವಿರೇಂದ್ರ ಹೆಗ್ಗಡೆ ಅವರ ಭಟ್ಕಳವನ್ನು ಆಳಿದ ರಾಣಿ ಚೆನ್ನಭೈರಾದೇವಿ ಆಢಳಿತ ವೈಭವದ ಇತಿಹಾಸವನ್ನು ಮೆಲುಕು ಹಾಕುವ ಚಿಂತನೆ ಯೊಂದಿಗೆ ಹೊನ್ನಾವರದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಗೆ ಅಧ್ಯಕ್ಷನಾಗಿರುವುದು ನನ್ನ ಪುಣ್ಯವೆಂದುಕೊAಡಿದ್ದೇನೆ. ರಾಣಿ ಚೆನ್ನಭೈರಾಧೇವಿ ಪುತ್ಥಳಿಕೆಯನ್ನು ಹೊನ್ನಾವರದಲ್ಲಿ ಸ್ಥಾಪಿಸುವ ಚಿಂತನೆ ಯೊಂದಿಗೆ ಜಾಗವನ್ನು ನಿಗದಿ ಮಾಡಲಾಗಿದೆ. ಅಂದಿನ ಇತಿಹಾಸದ ಹಿರಿಮೆ ನಾವೆಲ್ಲರು ತಿಳಿದುಕೊಂಡು ಉಳಿಸಬೇಕಿದೆ ಎಂದರು.
ಇನ್ನು ನಮ್ಮಲ್ಲಿ ಕನ್ನಡ ಭಾಷೆಯ ಉಚ್ಚಾರವೂ ಕಡಿಮೆಯಾಗುತ್ತಿದ್ದು, ನಗರ, ಪಟ್ಟಣ, ಮಹಾನಗರದಲ್ಲಿ ಕನ್ನಡ ಮಾಯವಾಗುತ್ತಿರುವದು ಬೇಸರ ತಂದಿದೆ. ಇದರಲ್ಲಿ ಭಾಷೆಯ ಉಳಿವಿಕೆ ಸರಕಾರವನ್ನು ಅವಲಂಬಿಸದೇ ನಾವುಗಳೇ ಭಾಷೆಯ ಬಳಕೆಗೆ ಹೋರಾಟ ಮಾಡಬೇಕು. ಇನ್ನು ರಾಷ್ಟ್ರೀಕೃತ ಬ್ಯಾಂಕನಲ್ಲಿ ಕನ್ನಡ ಬದಲು ಅಲ್ಲಿನ ಸಿಬ್ಬಂದಿಗಳು ಹಿಂದಿ, ಇಂಗ್ಲೀಷ್ ಹೇರಿಕೆ ನಿಲ್ಲಿಸಬೇಕಿದೆ. ಇದು ಗ್ರಾಮೀಣ ಭಾಗದಲ್ಲಿ ಸಮಸ್ಯೆಯಾಗುತ್ತಿದೆ. ಕಾರಣ ನಮ್ಮ ತನವನ್ನು ನಾವು ಗಟ್ಟಿಗೊಳಿಸಿಕೊಳ್ಳಬೇಕು ಎಂದ ಅವರು ಕನ್ನಡ ಪರ ಹೋರಾಟಗಾರರಿಂದ ಕನ್ನಡ ಬಳಕೆ ದಿನದಿಂದ ದಿನಕ್ಕೆ ವೃದ್ದಿಸುತ್ತಿದ್ದು, ನಾಮಫಲಕವೆಲ್ಲವೂ ಕನ್ನಡಲ್ಲಿ ರಾರಾಜಿಸಬೇಕಿದೆ ಎಂದರು.ಕನ್ನಡ ಮೇರು ನಟ ಪುನೀತ ರಾಜ್ ಕುಮಾರ ಅವರ ಅಗಲಿಕೆ ಕನ್ನಡಕ್ಕೆ ಭಾರಿ ಆಘಾತ ಮತ್ತು ನಷ್ಟ ತಂದಿದೆ. ಕೇವಲ ನಟರಾಗಿರದೇ ತಮ್ಮ ಕುಟುಂಬದ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವಂತೆ ಸಾಮಾಜಿಕವಾಗಿ ಅನಾಥಾಶ್ರಮ, ವಿದ್ಯಾರ್ಥಿಗಳಿಗೆ ಅವರ ಕಲಿಕೆಗೆ ದತ್ತು ತೆಗೆದುಕೊಂಡಿದ್ದು ಅವರ ವೆಚ್ಚ ವಹಿಸಿಕೊಂಡು ಓರ್ವ ವ್ಯಕ್ತಿಗಿಂತ ವ್ಯಕ್ತಿತ್ವಕ್ಕೆ ಹೆಚ್ಚಿನ ಬೆಲೆ ಸಿಗುವಂತೆ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು.ಇದಕ್ಕೂ ಪೂರ್ವದಲ್ಲಿ ಕನ್ನಡ ಮೇರು ನಟ ಪುನೀತ ರಾಜ್‌ಕುಮಾರ ಅವರ ಅಗಲಿಕೆಗೆ ಒಂದು ನಿಮಿಷ ಮೌನಾಚರಣೆ ಸಲ್ಲಿಸ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡದ ಬಗ್ಗೆ, ಭಟ್ಕಳದ ಇತಿಹಾಸ ಕುರಿತಾಗಿ ಸಾಹಿತಿ, ಶಿಕ್ಷಕರಾದ ಶ್ರೀಧರ ಶೇಟ್ ಅವರು ಉಪನ್ಯಾಸ ನೀಡಿದರು.ಇದೇ ಸಂಧರ್ಭದಲ್ಲಿ ತಾಲೂಕಿನಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೆಂಗಿನ ಗುಂಡಿ ಶಿಕ್ಷಕ ಚಂದ್ರಶೇಖರ ಡಿ. ಪಡುವಣಿ, ಸಂಗೀತ ಕ್ಷೇತ್ರದಲ್ಲಿ ಅನಂತ ಹೆಬ್ಬಾರ, ಜನಪದ ಕಲೆಯಲ್ಲಿ ಕುಪ್ಪಾ ನಾಯ್ಕ, ಯಕ್ಷಗಾನ ಕಲೆಯಲ್ಲಿ ಸುಬ್ರಾಯ ಭಟ್, ಕ್ರೀಡಾ ಕ್ಷೇತ್ರದಲ್ಲಿ ರಂಗ ಪಟಗಾರ, ಆಡಳಿತದಲ್ಲಿ ಕನ್ನಡ ವಿಭಾಗದಲ್ಲಿ ಪ್ರಶಾಂತ ಪಟಗಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಇದಕ್ಕೂ ಪೂರ್ವದಲ್ಲಿ ನಗರ ಠಾಣೆ ಪಿಎಸೈ ಸುಮಾ ಬಿ. ಅವರ ನೇತೃತ್ವದಲ್ಲಿ ಪರೇಡ್ ನಡೆಸಲಾಗಿದ್ದು ಇದರಲ್ಲಿ ಪೋಲೀಸರು, ಎನ್.ಸಿ.ಸಿ., ಸ್ಕೌಟ್ ಎಂಡ ಗೈಡ್ಸ, ಭಾರತ ಸೇವಾದಳ ಪಾಲ್ಗೊಂಡಿದ್ದರು.ನತರ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಶ್ರೀ ಗುರು ಸುಧೀಂದ್ರ ಪಿಯು ಕಾಲೇಜಿನ ವಿದ್ಯಾರ್ಥಿಗಳು ಪ್ಲಾಸ್ಟಿಕ್ ನಿರ್ಮೂಲನೆ ಕುರಿತಾದ ಕಿರು ನಾಟಕವನ್ನು ಪ್ರದರ್ಶಿಸಿದರು.ವೇದಿಕೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ರಾಧಿಕಾ ಎಸ್.ಎಸ್., ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೋಗೇರ, ರಾಜ್ಯ ಸರಕಾರಿ ನೌಕರರ ಭಟ್ಕಳ ಘಟಕದ ಅಧ್ಯಕ್ಷ ಮೋಹನ ನಾಯ್ಕ ಉಪಸ್ಥಿತರಿದ್ದರು.ತಹಸೀಲ್ದಾರ್ ರವಿಚಂದ್ರ ಸ್ವಾಗತಿಸಿದರು. ಶಿಕ್ಷಕರಾದ ಪರಮೇಶ್ವರ ನಾಯ್ಕ ಮುರ್ಡೇಶ್ವರ, ಸುರೇಶ ಮುರ್ಡೇಶ್ವರ ಕಾರ್ಯಕ್ರಮವನ್ನು ನಿರೂಪಿಸಿದರು.
Be the first to comment