ಜಿಲ್ಲಾ ಸುದ್ದಿಗಳು
ಭಟ್ಕಳ್
ಇಲ್ಲಿನ ಶ್ರೀ ಭುವನೇಶ್ವರಿ ಕನ್ನಡ ಸಂಘದ ವತಿಯಿಂದ ಕನ್ನಡನಾಡಿನ 66ನೇ ಹಾಗೂ ಶ್ರೀ ಭುವನೇಶ್ವರಿ ಸಂಘದ 24ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಸರಕೇರಿಯ ತಿರುಮಲ ಶ್ರೀ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ಕನ್ನಡ ಘನತೆಗೆ ಧಕ್ಕೆ ಬಾರದಂತೆ ಸರಳವಾಗಿ ಆಚರಿಸಲಾಯಿತು. ಸಾಹಿತಿಗಳು, ಅರ್ಬನ್ ಬ್ಯಾಂಕಿನ ನಿವೃತ್ತ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಶಂಭು ಹೆಗಡೆಯವರು (ಮಾನಾಸುತ )ಸಂಘದ 24ನೇ ಧ್ವಜಾರೋಹಣವನ್ನು ನೆರವೇರಿಸಿದರು. ಆನಂತರ ಮಾತನಾಡಿದ ಅವರು ಕನ್ನಡನಾಡಿನ ಘನ ವೈಭವದ ಇತಿಹಾಸವನ್ನು ವಿವರಿಸಿದರಲ್ಲದೆ, ರಾಜ್ಯೋತ್ಸವ ಕಾರ್ಯಕ್ರಮದ ಮಹತ್ವ, ಕನ್ನಡದ ಘನತೆಯನ್ನು ಎತ್ತಿಹಿಡಿಯುವಲ್ಲಿ ನಮ್ಮೆಲ್ಲರ ಪಾತ್ರವನ್ನು ವಿವರಿಸಿದರು. ಅಲ್ಲದೆ ಒಂದು ಪುಟ್ಟ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಅಚ್ಚುಕಟ್ಟಾಗಿ ಆಚರಿಸುತ್ತಿರುವ ಶ್ರೀ ಭವನೇಶ್ವರಿ ಕನ್ನಡ ಸಂಘದ ಬಗ್ಗೆ ತಮ್ಮ ಚುಟುಕು ಕವನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ತಾಯಿ ಕನ್ನಡಾಂಬೆಗೆ ಪುಷ್ಪಾರ್ಚನೆಯನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಾಮಧಾರಿ ಸಮಾಜ ಗುರುಮಠ ಆಸರಕೇರಿ ಭಟ್ಕಳ ಇದರ ಅಧ್ಯಕ್ಷರಾದ ಶ್ರೀಕೃಷ್ಣ ಎನ್ ನಾಯ್ಕ, ಗೌರವಾಧ್ಯಕ್ಷರಾದ ಶ್ರೀ ಮಧುಕರ ಆರ್ ನಾಯ್ಕ, ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಭಟ್ಕಳ ಇದರ ನಿರ್ದೇಶಕರಾದ ಶ್ರೀ ಶ್ರೀಧರ ಬಿ ನಾಯ್ಕ, ಗುರುಕೃಪಾ ಬ್ಯಾಂಕ್ ಭಟ್ಕಳ ಇದರ ನಿರ್ದೇಶಕರಾದ ಶ್ರೀ ವೆಂಕಟೇಶ ಎಸ್ ನಾಯ್ಕ, ಶ್ರೀ ವೆಂಕಟೇಶ್ವರ ಯುವಕ ಸಂಘದ ಅಧ್ಯಕ್ಷರಾದ ಶ್ರೀ ಶ್ರೀಕಾಂತ ನಾಯ್ಕ, ಮಹಾಲೆ ಸಮಾಜ ಭಟ್ಕಳ ಇದರ ಸದಸ್ಯರಾದ ಶ್ರೀ ಸಚಿನ್ ಜಗನ್ನಾಥ್ ಮಹಾಲೆ, ಶ್ರೀ ವಿರೂಪಾಕ್ಷ ಕಲಾ ಮಿತ್ರಮಂಡಳಿಯ ಕಲಾವಿದರಾದ ಶ್ರೀ ಹರಿದಾಸ ರಾಮಚಂದ್ರ ಮಡಿವಾಳ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷರಾದ ಭಾಸ್ಕರ ಜಿ ನಾಯ್ಕ, ಸದಸ್ಯರಾದ ದೀಪಕ ನಾಯ್ಕ ಮುರುಡೇಶ್ವರ, ಪಾಂಡುರಂಗ ನಾಯ್ಕ ಕೋಕ್ತಿ, ಮೊದಲಾದವರು, ಶಾಲಾ ವಿದ್ಯಾರ್ಥಿಗಳು, ಶ್ರೀ ಭುವನೇಶ್ವರಿ ಕನ್ನಡ ಸಂಘದ ಸದಸ್ಯರು ಹಾಜರಿದ್ದರು.ಶ್ರೀ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ರಮೇಶ ಪಿ ನಾಯ್ಕ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಭುವನೇಶ್ವರಿ ಕನ್ನಡ ಸಂಘದ ಕಾರ್ಯದರ್ಶಿಯಾದ ಶ್ರೀ ಪಾಂಡುರಂಗ ಇವರು ಸರ್ವರನ್ನು ಸ್ವಾಗತಿಸಿ, ನಿರೂಪಿಸಿದರು. ಸದಸ್ಯರಾದ ಪ್ರಕಾಶ ಎನ್ ನಾಯ್ಕ ಸರ್ವರನ್ನೂ ವಂದಿಸಿದರು. ಸದಸ್ಯರಾದ ಮಣಿ ಪೂಜಾರಿಯವರು ಕವಾಯತು ನಿರ್ವಹಣೆ ಮಾಡಿದರು.
Be the first to comment