ರಾಜ್ಯ ಸುದ್ದಿಗಳು
ಕುಮಟಾ
ಕುಮಟಾ ತಾಲೂಕಿನ ಗುಡಬಳ್ಳಿಯ ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದಲ್ಲಿ ವರ್ಷಂಪ್ರತಿ ಜರುಗುವ ವರ್ಧಂತಿ ಉತ್ಸವವು ಮಾ. 21 ರಂದು ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ವಿಜ್ರಂಭಣೆಯಿಂದ ನೆರವೇರಿತು.ಅಂದು ಬೆಳಿಗ್ಗೆ 8:00 ಗಂಟೆಗೆ ಶ್ರೀ ದೇವಿಗೆ ಫಲ ಪಂಚಾಮೃತ ಅಭಿಷೇಕ, ಹವನಾದಿ ಕಾರ್ಯಕ್ರಮಗಳು ನಡೆಯಿತು.
ಬೆಳಿಗ್ಗೆ 9:30ಕ್ಕೆ ಶ್ರೀ ದೇವಿಯ ಪಲ್ಲಕ್ಕಿ ಉತ್ಸವದ ಮೆರವಣಿಗೆಯು ಶ್ರೀ ಕ್ಷೇತ್ರ ಗುಡಬಳ್ಳಿಯಿಂದ ಹೊರಟು ಶ್ರೀ ಕ್ಷೇತ್ರ ಗೋರೆ ಸನ್ನಿಧಿಯವರೆಗೆ ಸಂಚಾರ ನಡೆಸಿತು.ನಂತರ ಪರಿವಾರ ದೇವರುಗಳ ಹವನ, ಬಲಿದಾನ, ಮಹಾ ಪೂರ್ಣಾಹುತಿ ನಡೆಯಿತು. ನಂತರ ಶ್ರೀ ದೇವರಿಗೆ ಕಲಶಾಭಿಷೇಕ, ಕನ್ನಿಕಾ ಸೇವೆ, ಸುಹಾಸಿನಿ ಸೇವೆ, ಉಡಿ ಸೇವೆ ಮತ್ತು ಕ್ಷೇತ್ರಪಾಲ ದೇವರಿಗೆ ಉಪಹಾರ ಸೇವೆ ನಡೆಯಿತು.
ಮಧ್ಯಾಹ್ನ 12:30ಕ್ಕೆ ಅಮ್ಮ ನವರಿಗೆ ವಿಶೇಷ ಹೂವಿನ ಅಲಂಕಾರ, ಮಹಾಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಬಳಿಕ ಮಹಾ “ಅನ್ನಸಂತರ್ಪಣೆ” ಕಾರ್ಯಕ್ರಮ ನಡೆಯಿತು.ಸಂಜೆ 6:00 ಗಂಟೆಗೆ ಶ್ರೀ ಲಲಿತಾ ಸಹಸ್ರನಾಮ ಪಠಣ ಹಾಗೂ ಶ್ರೀ ಮಹಿಷಾಸುರ ಮರ್ದಿನಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿಯಯವರು, ದೈವಜ್ಞ ಬ್ರಾಹ್ಮಣ ಸಮಾಜದವರು,ಹಾಗೂ ಊರ-ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.
Be the first to comment