ಜಿಲ್ಲಾ ಸುದ್ದಿಗಳು
ಮಸ್ಕಿ
ಪಟ್ಟಣದ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ಶ್ರೀಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಶ್ರೀ ಮಹಾಯೋಗಿ ವೇಮನರವ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.ನಂತರ ಮಾತನಾಡಿದ ನಾರಾಯಣಪ್ಪ ಶಾಸ್ತ್ರಿಮಹಾಯೋಗಿ ಶ್ರೀ ವೇಮನರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಅವರು ಇಡೀ ಮನುಕುಲಕ್ಕೆ ಒಳಿತು ಮಾಡಿದ ಮಹಾನುಭಾವರು ಎಂದರು.ವೇಮನ ಅವರು ತೆಲುಗು ಭಾಷೆಯಲ್ಲಿ 15 ಸಾವಿರಕ್ಕೂ ಅಧಿಕ ಪದ್ಯಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಬಹುತೇಕವನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಲಾಗಿದೆ. ಬ್ರಿಟಿಷ್ ಅಧಿಕಾರಿ ಸಿ.ಟಿ.ಬ್ರೌನ್ ಅವರು ವೇಮನರ ಪದ್ಯಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡುವ ಮೂಲಕ ಇಡೀ ವಿಶ್ಚಕ್ಕೆ ಪರಿಚಯಿಸಿದ್ದಾರೆ,
ವೇಮನರು ಐದು ಸಾವಿರ ವಚನಗಳನ್ನು ಬರೆದಿದ್ದಾರೆ. ಅವರು ಬರೆದ ವಚನಗಳು ಮತ್ತು ಪದ್ಯಗಳು ಇಡೀ ಜಗತ್ತಿಗೆ ಬೆಳಕು ನೀಡಿವೆ. ಆಂಧ್ರಪ್ರದೇಶದ ಕಡಪ ಜಿಲ್ಲೆಯ ವಿಶ್ವವಿದ್ಯಾಲಯ ಒಂದಕ್ಕೆ ವೇಮನ ಅವರ ಹೆಸರಿಡಲಾಗಿದೆ. ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಹೇಮರೆಡ್ಡಿ ಮಲ್ಲಮ್ಮ ಅವರ ಅಧ್ಯಯನ ಪೀಠ ಸ್ಥಾಪಿಸಿದ್ದರೆ, ಎಂದರು.ಕೃಷ್ಣಾ ಡಿ ಚಿಗರಿ ಮಾತನಾಡಿ, ಮಹಾಯೋಗಿ ವೇಮನರು ಒಂದು ಸಮುದಾಯದ ಆಸ್ತಿಯಲ್ಲ, ಅವರು ಇಡೀ ಭಾರತದ ಆಸ್ತಿ. ಸರ್ಕಾರ ಮಹಾನ್ ನಾಯಕರ ಜಯಂತಿಗಳನ್ನು ಆಚರಿಸುವ ಮೂಲಕ ಮುಂದಿನ ಪೀಳಿಗೆಗೆ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುವಂತೆ ತಿಳಿಸುತ್ತಿದೆ.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪಂಪನಗೌಡ ಗುಡದೂರು, ದುರುಗೇಶ ವಕೀಲರು, ಮಹಾತೇಶ ಹೂವಿನಭಾವಿ, ದೊಡ್ಡ ಕರಿಯಪ್ಪ, ನಾರಾಯಣಪ್ಪ ಕಾಸ್ಲಿ, ನಾಗನಗೌಡ, ಮಲ್ಲಯ್ಯ ಮುರಾರಿ, ಬಸನಗೌಡ ಮಾರಲದಿನ್ನಿ, ಭದ್ರಿ ಕೋಠಾರಿ, ಆನಂದ ವಿರುಪೂರ, ಚಾಂದ್ ಸ್ಮೇಡ್ಮಿ, ಸುರೇಶ್ ಕೈಲವಾಡಗಿ, ರಾಜು ನಧಾಪ್, ಪಂಪಣ್ಣ ಪರಡ್ಡಿ, ಹಾಗೂ ಇನ್ನಿತರ ಉಪಸ್ಥಿತರು ಇದ್ದರು.
Be the first to comment