ಜಿಲ್ಲಾ ಸುದ್ದಿಗಳು
ಹೊನ್ನಾವರ
ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಜಲವಳ್ಳಿ ಗ್ರಾಮದ ಕಾನಗೋಡದಲ್ಲಿರುವ ಶ್ರೀ ಚನ್ನಕೇಶವ ದೇವಾಲಯದಲ್ಲಿ ಹಾಡಹಗಲೇ ಎರಡು ಕಾಣಿಕೆ ಹುಂಡಿ, ದೇವಾಲಯದಲ್ಲಿನ ಘಂಟೆ ದೋಚಿ ಕಳ್ಳರು ಪರಾರಿಯಾದ ಘಟನೆ ನಡೆದಿದೆ. ಅನಂತ ಚತುರ್ಥಿ ಉತ್ಸವ ರವಿವಾರ ನಾಡೆನೆಲ್ಲೆಡೆ ನಡೆದಿದ್ದು ಸಹಸ್ರಾರು ಭಕ್ತರು ಭೇಟಿ ನೀಡಿದ್ದರು. ಉತ್ಸವ ನಡೆದ ಒಂದು ದಿನದ ನಂತರ ಅಂದರೆ ಮಂಗಳವಾರ ಹಾಡಹಗಲೇ ಕಳ್ಳತನ ನಡೆದಿದೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ದೇವಾಲಯದ ಅರ್ಚಕರ ಮನೆ ದೇವಾಲಯದ ಸಮೀಪವೇ ಇದೆ ಆ ಕಾರಣದಿಂದ ಸ್ಥಳೀಯರು ನಿತ್ಯವೂ ಭೇಟಿ ನೀಡುತ್ತರೆ ಎಂದು ಮಧ್ಯಾಹ್ನ ಬೀಗ ಹಾಕುತ್ತಿರಲಿಲ್ಲ. ಈ ಘಟನೆ ಮಧ್ಯಾಹ್ನ 1.30 ರಿಂದ 3 .30 ರ ಅವಧಿಯಲ್ಲಿ ಕಳ್ಳತನ ನಡೆದಿದೆ ಎನ್ನಲಾಗಿದೆ. ನಿತ್ಯವೂ ನೂರಾರು ಭಕ್ತರು ಭೇಟಿ ನೀಡಿತ್ತಿದ್ದರಾದರೂ, ಮಧ್ಯಾಹ್ನ ಪೂಜೆ ನಂತರ ಜನರ ಓಡಾಟ ಕಡಿಮೆ ಇರುತ್ತದೆ . ದೇವಾಲಯ, ಹೆದ್ದಾರಿಯಿಂದ ಸುಮಾರು 2 ಕಿಲೋಮೀಟರ್ ಅಷ್ಟು ದೂರ ಇದ್ದು ದಿಬ್ಬಣಗಲ್ ಇಂದ ಮತ್ತು ಸುಳಗೋಡ ಇಂದ ದೇವಾಲಯಕ್ಕೆ ರಸ್ತೆ ಸಂಪರ್ಕವಿದೆ.
ಅನಂತ ಚತುರ್ಥಿ ದಿನ ಸಾವಿರಾರು ಭಕ್ತರು ಭೇಟಿ ನೀಡಿರುವ ಹಿನ್ನೆಲೆಯಲ್ಲಿ , ಕಾಣಿಕೆ ಹುಂಡಿಯಲ್ಲಿ ಸಾಕಷ್ಟು ಹಣ ಸಂಗ್ರಹವಾಗಿದೆ ಎಂದು ತಿಳಿದು ಕಳ್ಳರು ಹುಂಡಿ ಕದ್ದಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. * ಸ್ವಾತಂತ್ರ್ಯ ಸವಿ ನೆನಪಿನ ಘಂಟೆಯ ಕಳವು
1947 ರಲ್ಲಿ ದೇಶ ಸ್ವಾತಂತ್ರ್ಯ ಮರಳಿ ಪಡೆದ ಸವಿ ನೆನಪಿಗಾಗಿ ಜಲವಳ್ಳಿ ಗ್ರಾಮಸ್ಥರು ದೇವಾಲಯಕ್ಕೆ ಘಂಟೆಯೊಂದನ್ನು ಕೊಡುಗೆಯಾಗಿ ಕೊಟ್ಟಿದ್ದರಂತೆ ಇದೂ ಕೂಡ ಕಳ್ಳರ ಪಾಲಾಗಿದೆ. ಇದಲ್ಲದೇ ದೇವಾಲಯದ ಹತ್ತಾರು ಘಂಟೆಗಳನ್ನೂ ಕೂಡ ಕದ್ದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ದೇವಾಲಯದ ಆಡಳಿತ ಕಮಿಟಿ ಕಾರ್ಯದರ್ಶಿ ರಾಜು ಹೆಗಡೆ ಹೊನ್ನಾವರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ . ದೂರು ದಾಖಲಿಸಿಕೊಂಡ ಪೋಲೀಸರು ತನಿಖೆ ಮುಂದುವರೆಸಿದ್ದಾರೆ.
Be the first to comment