ಜಿಲ್ಲಾ ಸುದ್ದಿಗಳು
ಹಳಿಯಾಳ
ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಪಟ್ಟಣದ ಪಿ ಡಬ್ಲ್ಯೂ ಡಿ ಪ್ರವಾಸೀ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಯುಕ್ತ ಕಿಸಾನ್ ಮೋರ್ಚಾದ ರಾಜ್ಯ ಮುಖಂಡ ಹಾಗೂ ಕರ್ನಾಟಕ ರಾಜ್ಯದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬುರು ಶಾಂತಕುಮಾರ್ ರವರು ತಿಳಿಸಿದ್ದಾರೆ.
ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿಸ್ತರಿಸಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗೆ ತರಬೇಕೆಂದು , ಇನ್ನೂ ಕಬ್ಬನ್ನು ಕಸಬಿನ ಬೆಳೆ ವ್ಯಾಪ್ತಿಗೆ ತರಬೇಕು , ಅತೀ ಹೆಚ್ಚು ಬೆಳೆ ನಷ್ಟವಾಗಿರುವ ರೈತರಿಗೆ ಕೂಡಲೇ ಪರಿಹಾರ ನೀಡಬೇಕು. ರೈತರು ಹಳ್ಳಿಗಳಲ್ಲಿ ಸ್ವಯಂ ಪ್ರೇರಿತ ಎತ್ತಿನಗಾಡಿ, ಎಮ್ಮೆ , ಕರು , ದನ ಬಿಟ್ಟು ಪ್ರತಿಭಟನೆ ಮಾಡಿ ಬಂದ್ ಆಚರಿಸುವ ಮೂಲಕ ರೈತರ ಶಕ್ತಿ ಕೇಂದ್ರ ಸರ್ಕಾರಕ್ಕೆ ತೋರಿಸಬೇಕು ಎಂದ ಅವರು ರಾಜ್ಯದಲ್ಲಿ ಎಲ್ಲಾ ಜನರ ಪರ ರೈತ ಸಂಘಟನೆಗಳು ಕರ್ನಾಟಕ ಬಂದ್ ಯಶಸ್ವಿಯಾಗಲು ಸಹಕರಿಸಬೇಕು ಎಂದಿದ್ದಾರೆ. ದಿನಾಂಕ 27 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ವೀರನ್ ಗೌಡ ಪಾಟೀಲ್, ರಾಜ್ಯ ಉಪಾಧ್ಯಕ್ಷ , ಪ್ರತಿಭಟನಾ ಕಾರ್ಯದರ್ಶಿ ಯರದಳ್ಳಿ ದೇವರಾಜ,ಜಿಲ್ಲಾಧ್ಯಕ್ಷ ಕುಮಾರ್ , ಶಂಕರ್ , ಅಶೋಕ್ ರೆಡ್ಡಿ ಮೊದಲಾದವರು ಉಪಸ್ತಿತರಿದ್ದರು.
Be the first to comment