ಜಿಲ್ಲಾ ಸುದ್ದಿಗಳು
ಶಿರಸಿ
ಕಾನೂನಿಗೆ ವ್ಯತಿರಿಕ್ತವಾಗಿ ಕಾನೂನಿನ ವಿಧಿ-ವಿಧಾನ ಅನುಸರಿಸದೇ, ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದಲ್ಲಿ ರಾಜ್ಯ ಸರಕಾರವು ಸಂಪೂರ್ಣ ವೈಫಲ್ಯತೆ ಹೊಂದಿರುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕಿನ ಸಮಸ್ಯೆ ಅರಣ್ಯರೋಧನವಾಗಿದೆ. ಈ ಹಿನ್ನೆಲೆಯಲ್ಲಿ ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳಿಗೆ ಭೂಮಿ ಹಕ್ಕಿಗೆ ಸಂಬAಧಿಸಿ ಸರಕಾರವು ಧೃಢ ನಿರ್ಧಾರವನ್ನು ಪ್ರಕಟಿಸಬೇಕು ಎಂದು ರಾಜ್ಯ ಅರಣ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆದ್ಯಕ್ಷ ರವೀಂದ್ರ ನಾಯ್ಕ ಸರಕಾರಕ್ಕೆ ಅಗ್ರಹಿಸಿದ್ದಾರೆ.ಅವರು ಇಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು.
ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿದ್ದು, ಕಾಯಿದೆ ಅನುಷ್ಟಾನದಲ್ಲಿನ ವೈಪಲ್ಯದಿಂದ ಮಂದಿನ ದಿನಗಳಲ್ಲಿ ಅರಣ್ಯವಾಸಿಗಳು ಅತಂತ್ರವಾಗುವುದರಲ್ಲಿ ಸಂಶಯವಿಲ್ಲವೆAದು ಅವರು ಹೇಳುತ್ತಾ, ಸರಕಾರದ ವೈಫಲ್ಯದ ಕುರಿತು ಹೋರಾಟಗಾರರ ವೇದಿಕೆಯು ಉಚ್ಛ ಮತ್ತು ಸರ್ವೋಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು. ಸರ್ವೋಚ್ಛ ನ್ಯಾಯಾಲಯದಲ್ಲಿ ಜುಲೈ ೨೦೧೯ ರಂದು ಪ್ರಮಾಣ ಪತ್ರ (ಅಫಿಡಾವಿಟ್) ಸಲ್ಲಿಸಿ ಮುಂದಿನ ೧೮ ತಿಂಗಳುಗಳಲ್ಲಿ ಅರ್ಜಿಗಳನ್ನು ಪುನರ್ ಪರಿಶೀಲಿಸಲಾಗುವುದೆಂದು ಹೇಳಿದ ಅವಧಿ ಪ್ರಸಕ್ತ ವರ್ಷದ ಜನವರಿಯಲ್ಲಿ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ ಕಾಲಮಾನ ಮುಗಿದರೂ ರಾಜ್ಯ ಸರಕಾರದಲ್ಲಿ ಅರ್ಜಿ ವಿಲೇವಾರಿಯಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗದಿರುವದು ಖೇದಕರ.ಮಂಜೂರಿ ಪ್ರಕ್ರೀಯೆಗೆ ಗ್ರಹಣ:
ಅರಣ್ಯ ಹಕ್ಕು ಕಾಯಿದೆ ೨೦೦೬ ರಲ್ಲಿ ನಿಯಮಾವಳಿ ೨೦೦೮ ಜಾರಿಗೆ ಬಂದು ೧೫ ವರ್ಷಗಳಾದರೂ, ಕರ್ನಾಟಕ ರಾಜ್ಯದಲ್ಲಿ ಮಂಜೂರಿ ಪ್ರಕ್ರೀಯೆಗೆ ಗ್ರಹಣ ಹಿಡಿದಂತಾಗಿದೆ. ಬಂದಿರುವAತಹ ಅರ್ಜಿಗಳಲ್ಲಿ ಇಂದಿಗೂ ಶೇ ೩೨.೧೫ ರಷ್ಟು ಅರ್ಜಿಗಳು ವಿಚಾರಣೆಗೆ ಬಾಕಿ ಇದೆ. ಮಂಜೂರಿ ಪ್ರಕ್ರೀಯೆಗೆ ಸರಕಾರದ ಇಚ್ಛಾಶಕ್ತಿ ಕೊರತೆ ಹಾಗೂ ಜನಪ್ರತಿನಿಧಿಗಳಿಗೆ ಕಾಯಿದೆ ಅನುಷ್ಟಾನದಲ್ಲಿನ ಆಸಕ್ತಿ ಕಡಿಮೆ ಇರುವುದೇ ಕಾರಣವಾಗಿದೆ.ದೇಶದಲ್ಲಿ ಕರ್ನಾಟಕ ೧೫ ನೇ ಸ್ಥಾನ:
ಅರಣ್ಯ ಪ್ರದೇಶ ಮತ್ತು ಅರಣ್ಯ ಅವಲಂಭಿತವಾಗಿರುವ ಅರಣ್ಯವಾಸಿಗಳ ಸಂಖ್ಯೆಯಲ್ಲಿ ಕರ್ನಾಟಕ ೫ ನೇ ಸ್ಥಾನದಲ್ಲಿದ್ದರೇ, ಅರಣ್ಯ ಹಕ್ಕು ಕಾಯಿದೆ ಪ್ರಗತಿಯಲ್ಲಿ ದೇಶದಲ್ಲಿ ೧೬ ನೇ ಸ್ಥಾನದಲ್ಲಿರುವುದು ವಿಷಾದಕರ.ಅತೀ ಹೇಚ್ಚು ಹಕ್ಕು ಪತ್ರ ಉತ್ತರ ಕನ್ನಡ: ರಾಜ್ಯದಲ್ಲಿ ಅತೀ ಹೇಚ್ಚು ಹಕ್ಕು ಪತ್ರ ವಿತರಣೆ ಆಗಿರುವದು ಉತ್ತರ ಕನ್ನಡ(೨೮೫೫). ನಂತರದ ಸ್ಥಾನದಲ್ಲಿ ಶಿವಮೊಗ್ಗ(೨೪೪೪), ಚಾಮರಾಜನಗರ(೨೧೩೬), ಕೊಡಗು(೨೦೧೮) ಹಾಗೂ ಚಿಕ್ಕಮಂಗಳೂರು(೧೯೧೧)- ಹೀಗೆ ರಾಜ್ಯದ ಅತೀ ಹೇಚ್ಚು ಹಕ್ಕು ಪತ್ರ ವಿತರಣೆ ಆಗಿರುವ ೫ ರಾಜ್ಯಗಳು.
Be the first to comment