ಜಿಲ್ಲಾ ಸುದ್ದಿಗಳು
ಕುಂದಾಪುರ
ಭಟ್ಕಳದಲ್ಲಿ ಕೋಮುಗಲಭೆ ಸೃಷ್ಠಿಸಿದ್ದ ಮುರುಡೇಶ್ವರದಲ್ಲಿ 2010 ರಲ್ಲಿ ನಡೆದ ಯಮುನಾ ನಾಯ್ಕರೇಪ್ ಅ್ಯಂಡ್ ಮರ್ಡರ್ ಕೇಸಿನ ಆರೋಪಿ ವೆಂಕಟೇಶ್ ಹರಿಕಾಂತ್ ಗೆ ನ್ಯಾಯಲಯ ನಿರ್ದೋಷಿ ಎಂದು ತೀರ್ಪು ನೀಡಿ ಬಿಡುಗಡೆಗೊಳಿಸಿದೆ.
ಧಾರವಾಡದ ಹೈಕೋರ್ಟ್ ಪೀಠ ನ್ಯಾಯಲಯದ ಜಸ್ಟೀಸ್ ಆರ್.ದೇವದಾಸ್ ಮತ್ತು ಜೆ.ಎಮ್. ಕಾಜಿ ಇದ್ದ ನ್ಯಾಯಪೀಠ ವೆಂಕಟೇಶ್ ಹರಿಕಾಂತ್ ನನ್ನು ನಿರ್ದೋಷಿ ಎಂದು ತೀರ್ಪು ಪ್ರಕಟಿಸಿದೆ. ಅಲ್ಲದೆ ಪ್ರಕರಣವನ್ನು ಮರು ತನಿಖೆ ಮಾಡುವಂತೆ ಆದೇಶಿದೆ.
ಹೈದ್ರಾಬಾದ್ ನ ಕೇಂದ್ರಿಯ ಲ್ಯಾಬ್ ನ ತಜ್ಞರು ನೀಡಿದ ವರದಿಯ ಮತ್ತು ಪೊಲೀಸ್ ತನಿಖೆಯಲ್ಲಿ ಒದಗಿಸಿದ ಸಾಕ್ಷ್ಯಗಳು ತಾಳೆ ಆಗದೇ ಇರುವುದು ಆರೋಪಿ ವೆಂಕಟೇಶ್ ನಿರ್ದೋಷಿ ಎಂದು ತೀರ್ಪು ಬರಲು ಮುಖ್ಯ ಆಧಾರವಾಗಿದೆ. ಆರೋಪಿಯ ಪರ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಅವರು ವಾದಿಸಿದ್ದರು.
ಶನಿವಾರ ಕುಂದಾಪುರದ ವಕೀಲ ರವಿಕಿರಣ್ ಮುರುಡೇಶ್ವರ ಅವರ ಕಚೇರಿಗೆ ಕುಟುಂಬ ಸಮೇತರಾಗಿ ಆಗಮಿಸಿದ ವೆಂಕಟೇಶ್ ಹರಿಕಾಂತ್ ವಕೀಲರಿಗೆ ಸನ್ಮಾನ ಮಾಡಿ ಕೃತಜ್ಞತೆ ಸಲ್ಲಿಸಿದರು .ಈ ಸಂದರ್ಭದಲ್ಲಿ ಶ್ರೀ ರಾಮ ಸೇನೆಯ ರಾಜ್ಯ ಉಪಾಧ್ಯಕ್ಷ ಜಯಂತ್ ನಾಯ್ಕ ಮುರುಡೇಶ್ವರ ಉಪಸ್ಥಿತರಿದ್ದರು.
Be the first to comment