ಹೊನ್ನಾವರ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸಹಾಯಕ ಆಯುಕ್ತರಿಗೆ ಮನವಿ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಹೊನ್ನಾವರ

ಕೊರೋನಾ ಕಾರಣ ನೀಡಿ ಕರ್ನಾಟಕ ವಿಶ್ವವಿದ್ಯಾಲಯ ಪದವಿ ೧,೩,೫ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮಾರ್ಚನಲ್ಲಿ ನಡೆಸದೇ ಮುಂದೂಡಿತ್ತು. ನಂತರ ಏಪ್ರೀಲ್‌ನಲ್ಲಿ ಪರೀಕ್ಷೆ ನಡೆಸದೇ ಮುಂದಿನ ಸೆಮಿಸ್ಟರ್ ತರಗತಿಯನ್ನು ಆನಲೈನ್ ಮೂಲಕ ಆರಂಭಿಸಿ ಅಗಸ್ಟ ೧೪ರವರೆಗೆ ತರಗತಿ ಎಂದು ಆದೇಶ ಹೊರಡಿಸಿತ್ತು. ಬಹು ಆಯ್ಕೆಯ ಮಾದರಿಯಲ್ಲಿ ಪರೀಕ್ಷೆ ನಡೆಸಿ ೫ನೇ ಸೆಮಿಸ್ಟರ್ ಪ್ರಮೋಟ್ ಮಾಡಿ ೬ನೇ ಸೆಮಿಸ್ಟರ್ ಪರೀಕ್ಷೆ ಎಂದು ಅಧಿಕೃತ ಆದೇಶ ಹೊರಡಿಸಲಾಗಿತ್ತು. ಇದೀಗ ಆದೇಶ ರದ್ದು ಮಾಡಿ ಅಗಸ್ಟ ೭ರಂದು ತರಗತಿ ಪೂರ್ಣಗೊಳಿಸಿ ೫ನೇ ಸೆಮಿಸ್ಟರ ಪರೀಕ್ಷೆ ಅಗಸ್ಟ ೧೬ ರಿಂದ ಮತ್ತು ಸಪ್ಟೆಂಬರ್ ೧೫ರಿಂದ ೬ನೇ ಸೆಮಿಸ್ಟರ್ ಪರೀಕ್ಷೆ ಎಂದು ಆದೇಶ ಹೊರಡಿಸಿದೆ. ಇದು ವಿದ್ಯಾರ್ಥಿಗಳಿಗೆ ಆತಂಕ ಮೂಡಿಸಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ೫ರಿಂದ ೬ ಬಾರಿ ಆದೇಶವನ್ನು ಬದಲಿಸುತ್ತಾ ಗೊಂದಲಮಯ ಮಾಡಿದೆ. ವಿದ್ಯಾರ್ಥಿಗಳ ಭವಿಷ್ಯದೊಡನೆ ವಿಶ್ವವಿದ್ಯಾಲಯ ಚೆಲ್ಲಾಟವಾಡುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಈ ಹಿಂದಿನಂತೆ ೫ ನೇ ಸೆಮಿಷ್ಟರ್ ಪರೀಕ್ಷೆ ಪ್ರಮೋಟ್ ಮಾಡಿ ತರಗತಿ ಪೂರ್ಣಗೊಳಿಸಿ ೬ನೇ ಸೆಮಿಸ್ಟರ್ ಪರೀಕ್ಷೆ ಬಹು ಆಯ್ಕೆ ಮಾದರಿ ನಡೆಸುವಂತೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ವಿದ್ಯಾರ್ಥಿಗಳ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸಹಾಯಕ ಆಯುಕ್ತೆ ಮಮತಾದೇವಿ ಬಿ.ಎಸ್. ತಹಶೀಲ್ದಾರ ವಿವೇಕ ಶೇಣ್ವಿ ಜಂಟಿಯಾಗಿ ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಎಸ್.ಡಿ.ಎಂ. ಮತ್ತು ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಹಾಜರಿದ್ದರು.

Be the first to comment

Leave a Reply

Your email address will not be published.


*