ಪಂಜಾಬ್ ಸರ್ಕಾರದ ನಡೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ; ಕಠಿಣ ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗೆ ಮನವಿ..

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ರಾಜ್ಯ ಸುದ್ದಿಗಳು 

ಹೊನ್ನಾವರ 

ಪಂಜಾಬ್ ರಾಜ್ಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪಂಜಾಬ್‍ನ ಫಿರೋಜ್‍ಪುರ ಪ್ರವಾಸದ ಸಂದರ್ಭದಲ್ಲಿ ನಡೆದ ಭದ್ರತಾ ವೈಫಲ್ಯ ಮತ್ತು ಹತ್ಯೆಯ ಸಂಚಿನ ತನಿಖೆಯನ್ನು ಅತೀ ಶೀಘ್ರ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ಯುವ ಮೋರ್ಚಾ ಹೊನ್ನಾವರ ಘಟಕದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಬಿಜೆಪಿ ಮಂಡಲಾಧ್ಯಕ್ಷ ರಾಜು ಭಂಡಾರಿ ಮಾತನಾಡಿ, ಪ್ರಧಾನಿಯವರ ಪಂಜಾಬ್ ಪ್ರವಾಸದ ವೇಳೆ ದೇಶದ ಯಾವುದೇ ಪ್ರಧಾನ ಮಂತ್ರಿಗೆ ಆಗದ ಅವಮಾನ ಅಲ್ಲಿನ ಸರಕಾರ ಮಾಡಿದೆ. ಪ್ರಧಾನಿ ಮೋದಿಯವರ ಜೀವದ ಜೊತೆ ಚೆಲ್ಲಾಟವಾಡಿದ್ದಾರೆ. ಅವರ ಸಂಚಾರ ತಡೆದು ಅವರ ಪ್ರಾಣ ಅಪಾಯ ಸ್ಥಿತಿಗೆ ತಳ್ಳಿದ್ದಾರೆ. ಇದಕ್ಕೆ ನೇರ ಹೊಣೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಕೃಪೆಯಿಂದ ಆಡಳಿತ ನಡೆಸುತ್ತಿರುವ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚಿನ್ನಿ ಎಂದು ದೂರಿದರು.

CHETAN KENDULI

ಶಿಷ್ಟಾಚಾರದ ಪ್ರಕಾರ ಪಂಜಾಬ್ ಮುಖ್ಯಮಂತ್ರಿ ವಿಮಾನ ನಿಲ್ದಾಣಕ್ಕೆ ಬಂದು ಸ್ವಾಗತಿಸಬೇಕಿತ್ತು. ಅದರ ಬಗ್ಗೆ ಕೇಳಿದಾಗ ತಾನು ಕರೋನಾ ಸೋಂಕಿತನ ಸಂಪರ್ಕಕ್ಕೆ ಬಂದಿದ್ದೆ ಎಂದು ಉತ್ತರಿಸುತ್ತಾರೆ, ಅದೇ ದಿನ ಸಾಯಂಕಾಲ ಪತ್ರಿಕಾಗೋಷ್ಠಿ ನಡೆಸುತ್ತಾರೆ, ಮಾರನೇ ದಿನ ತನ್ನ ಕಾರಿನಲ್ಲಿ ಪತ್ರಕರ್ತನೊಬ್ಬನನ್ನು ಪಕ್ಕದಲ್ಲಿ ಕೂರಿಸಿ ಸಂದರ್ಶನವನ್ನು ನೀಡುತ್ತಾರೆ. ಕಾಂಗ್ರೆಸ್ಸಿನ ಎಲ್ಲರೂ ಬಾಲಿಶತನದ ಹೇಳಿಕೆ ನೀಡುತ್ತಾರೆ, ರಾಷ್ಟ್ರಪತಿಯವರು ಮಧ್ಯಪ್ರವೇಶಿಸಿ ಪಂಜಾಬ್ ಸರಕಾರವನ್ನು ಕಿತ್ತೆಸೆದು ರಾಷ್ಟ್ರಪತಿ ಆಡಳಿತ ಜಾರಿ ತರಬೇಕೆಂದು ಒತ್ತಾಯಿಸಿದರು.

ತಹಶೀಲ್ದಾರ ನಾಗರಾಜ ನಾಯ್ಕಡ್ ಮನವಿ ಸ್ವೀಕರಿಸಿದರು.ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಿವರಾಜ ಮೇಸ್ತ, ಮುಖಂಡರಾದ ಎಂ.ಎಸ್.ಹೆಗಡೆ ಕಣ್ಣಿ, ಯುವಾಮೋರ್ಚಾ ತಾಲೂಕಾಧ್ಯಕ್ಷ ಸಚಿನ್ ಶೇಟ್, ಪ್ರಧಾನ ಕಾರ್ಯದರ್ಶಿ ಕೃಷ್ಣ ಜೋಶಿ, ಕೇಶವ ಗೌಡ, ಪದಾಧಿಕಾರಿಗಳಾದ ಶಿವರಾಜ ನಾಯ್ಕ, ಪ್ರದೀಪ ನಾಯ್ಕ, ಸಂದೇಶ, ಶಿವಾನಂದ್ ಮರಾಠಿ, ವಿನೋದ್ ಗೌಡ, ಶಿವರಾಜ ಗುನಗಾ ಮತ್ತಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*