ಕೆಲೂರಿನಲ್ಲಿ ತೀವ್ರಗೊಂಡ ವಿದ್ಯುತ್ ಸಮಸ್ಯೆ! ಕರೆಂಟ್ ಕೇಳಿದ್ರೆ ಲೈನ್ ಪಾಲ್ಟ: ಇದು ಅಮೀನಗಡ ವಿದ್ಯುತ್ ಸರಬರಾಜು ಉಪ ವಿಭಾಗದ ಗೋಳು:ಪಟ್ಟಣಗಳಿಗಿಲ್ಲದ ಲೈನ್ ಪಾಲ್ಟ ಗ್ರಾಮಿಣ ಭಾಗಕ್ಕೇಕೆ?

ಅಂಬಿಗ್ ನ್ಯೂಸ್

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:

CHETAN KENDULI

ಕರೆಂಟ್ ಯಾವಾಗ ಬರುತ್ತದೆ? ಕರೆಂಟ್ ಯಾವಾಗ ಬರುತ್ತದೆ? ಇದು ಇತ್ತೀಚಿನ ಕೆಲ ದಿನಗಳಲ್ಲಿ ಇಳಕಲ್ಲ ತಾಲೂಕಿನ ಕೆಲೂರ ಗ್ರಾಮದಲ್ಲಿ ಸಾರ್ವಜನಿಕರ ಬಾಯಲ್ಲಿರುವ ಪ್ರಶ್ನೆ ಆದರೆ ಕರೆಂಟ್ ಯಾವಾಗ ಬರುತ್ತದೆ ಎಂದು ಗೊತ್ತಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ವಿದ್ಯುತ್ ಅಭಾವದಿಂದ ಕೃಷಿಕರು, ವಿದ್ಯಾರ್ಥಿಗಳು, ವ್ಯಾಪಾರಸ್ಥರು ಸೇರಿದಂತೆ ಸಾರ್ವಜನಿಕರು ಹೈರಾಣಾಗಿದ್ದಾರೆ ಈಗಾಗಲೇ ವಾರದಲ್ಲಿ ಎರಡು ಮೂರು ದಿನ ಹಗಲಿನ ವೇಳೆಯಲ್ಲಿ ಮಾರ್ಗಗಳ ದುರಸ್ತಿಗೆ ವಿದ್ಯುತ್ ಕಡಿತ ಮಾಡುತ್ತಿದ್ದು ಓವರ್ಲೋಡ್ ಜಂಪರ್ ಕಟ್ ಮೊದಲಾದ ಸಮಸ್ಯೆಗಳು ಉದ್ಭವವಾಗುತ್ತದೆ.ಈ ಸಮಸ್ಯೆಗಳನ್ನು ಹುಡುಕಿ ಸರಿಮಾಡುವ ವೇಳೆ ಆ ಭಾಗಕ್ಕೆ ಕನಿಷ್ಟ 5 ರಿಂದ 6 ಗಂಟೆಗಳ ಕಾಲ ಕರೆಂಟಿರಲ್ಲ.

ಒಂದೆಡೆ ದಿನದ ಪವರ್ ಕಟ್ ಮತ್ತೊಂದೆಡೆ ವಿದ್ಯುತ್ ಮಾರ್ಗದಲ್ಲಿ ಉಂಟಾಗುವ ಅಡಚಣೆಗಳಿಂದ ಜನರು ಮಾತ್ರ ತೊಂದರೆ ಅನುಭವಿಸುತ್ತಲೇ ಇದ್ದಾರೆ.ಕೆಲೂರಿನ ವಿದ್ಯುತ್ ಸಮಸ್ಯೆಯ ಬಗ್ಗೆ ಹೇಳತೀರದು ಕೆಲೂರಿನ ಜನ ಕಳೆದ ತಿಂಗಳುಗಳಿಂದ ಪದೇ ಪದೇ ವಿದ್ಯುತ್ ಕೈ ಕೊಡುವುದರಿಂದ ಈಗಾಗಲೇ ಮಕ್ಕಳಿಗೆ ಪರೀಕ್ಷೆಗಳು ಹತ್ತಿರ ಬರುತ್ತಿರುವುದರಿಂದ ಅವರ ಶಿಕ್ಷಣಕ್ಕೆ ತೊಂದರೆಯಾಗುತ್ತದೆ.

ದಯವಿಟ್ಟು ಜನಪ್ರತಿನಿಧಿಗಳು ಸಮಸ್ಯೆಗೆ ಪರಿಹಾರ ಕಲ್ಪಿಸಿ

ಭರವಸೆಗಳಿಂದ ಬಲ್ಬು ಉರಿಯುವುದಿಲ್ಲ, ಆರೋಪಗಳಿಂದ ಪ್ಯಾನ್ ತಿರುಗುವುದಿಲ್ಲ, ಘೋಷಣೆ, ಭಾಷಣಗಳಿಂದ ಪಂಪು ಚಾಲು ಆಗುವುದಿಲ್ಲ ಪರೀಕ್ಷೆ ಸಮಯದಲ್ಲಿ ಕರೆಂಟ್ ತೆಗೆದರೆ ನಿಮ್ಮನ್ನು ಕ್ಷಮಿಸುವುದಿಲ್ಲ.ದಯವಿಟ್ಟು ಈ ಸಮಸ್ಯೆಗೆ ಪರಿಹಾರ ಒದಗಿಸಿ.

ರಾತ್ರಿವೇಳೆ ಕರೆಂಟ್ ಹೋದ್ರೆ ದೇವರೆಗತಿ.

ಹಗಲಿನಲ್ಲಂತು ದಿನಕ್ಕೆ ಕನಿಷ್ಠ 5 ರಿಂದ 6 ಸಲ ಕರೆಂಟ್ ಹೋಗುವುದು ಬರುವುದು ಕೆಲೂರ ಗ್ರಾಮಕ್ಕೆ ಸಾಮಾನ್ಯವಾಗಿದೆ ಕೇಳಿದ್ರೆ ಲೈನ್ ಪಾಲ್ಟ ಆಗಿದೆ,ಇಲ್ಲವಾದ್ರೆ ಡ್ರಿಪ್ ಆಗಿದೆ,ಇಲ್ಲವಾದರೆ ಎಲ್ ಸಿ ತಗೊಂಡಿದ್ದಾರೆ ಎನ್ನುತ್ತಾರೆ ಕೆಇಬಿ ಯವರು. ಇದನ್ನು ಕೇಳಿ ಕೇಳಿ ಜನ ಬೇಸತ್ತಿದ್ದಾರೆ.ಸಾಯಂಕಾಲ ಆದ್ರೆ ಸಾಕು ಮನೆಯಲ್ಲಿ ದೀಪ ಹಚ್ಚುವುದಕ್ಕೂ ಸೀಮೆ ಎಣ್ಣಿ ಇರುವುದಿಲ್ಲ.ಅಂತದರಲ್ಲಿ ರಾತ್ರಿವೇಳೆ ಬರೊಬ್ಬರಿ 2 ರಿಂದ 3 ಸಲ ಕರೆಂಟ್ ಹೋಗುತ್ತವೆ ರಾತ್ರಿ ಯಾರಾದ್ರು ಕರೆ ಮಾಡಿದ್ರೆ ಕರೆಂಟ್ ಹೋದಬಗ್ಗೆ ಹೆಸ್ಕಾಂನಲ್ಲಿರುವವರಿಗೆ ಗೊತ್ತಿರುವುದಿಲ್ಲ.ಇದಕ್ಕೆಲ್ಲ ಪರಿಹಾರ ಯಾವಾಗ?


ನಾನು ಈ ಮೊದಲು ಗ್ರಾಮಕ್ಕೆ ಬೆಳಿಗ್ಗೆ ಬಂದು ಸಾಯಂಕಾಲ ಮರಳಿ ಊರಿಗೆ ಹೋಗುತ್ತಿದ್ದೆ ಕರೆಂಟ್ ಸಮಸ್ಯೆಯನ್ನು ನಾನು ಗಮನಿಸಿರಲಿಲ್ಲ.ಆದರೆ ಈಗ ಗ್ರಾಮ ಪಂಚಾಯತಿ ಅಧ್ಯಕ್ಷನಾದ ಮೇಲೆ ಗ್ರಾಮದಲ್ಲಿ ವಾಸ್ತವ್ಯ ಇದ್ದಾಗ ನಿರಂತರ ವಿದ್ಯುತ್ ಸಮಸ್ಯೆ ನನ್ನ ಗಮನಕ್ಕೂ ಬಂದಿದ್ದು ನಾನು ಕೂಡಾ ಒಂದು ದಿನ ಕತ್ತಲೆಯಲ್ಲಿ ಸೊಳ್ಳೆಗಳ ಮಧ್ಯೆ ರಾತ್ರಿ ಜಾಗರಣೆ ಮಾಡಿರುತ್ತೇನೆ ಹಾಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸರಿಪಡಿಸಲು ಶೀಘ್ರವಾಗಿ ತಿಳಿಸುವೆ.
ಕೆಲೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾಲಿಂಗೇಶ ನಾಡಗೌಡರ


ಇನ್ನು ಮುಂದೆ ಈ ಸಮಸ್ಯೆ ಬರದ ಹಾಗೆ ನೋಡಿಕೊಳ್ಳುತ್ತೇವೆ ಸಿ.ಇ.ಇ ಮತ್ತು ಎ.ಇ.ಇ

ನಮಗೆ ಇದರ ಬಗ್ಗೆ ಮಾಹಿತಿ ಗೊತ್ತಿದ್ದಿಲ್ಲ ಮಳೆ ಬಂದಾಗ ವಿದ್ಯುತ್ ಅಭಾವ ಉಂಟಾಗುವುದು ಸರ್ವೇಸಾಮಾನ್ಯ ಆದರೆ ನಿಮ್ಮಲ್ಲಿ ನಿರಂತರ ಲೈನ್ ಪಾಲ್ಟ ಬಗ್ಗೆ SO ಅವರ ಜೊತೆ ಮಾತನಾಡಿ ಇನ್ನು ಮುಂದೆ ಇಂತಹ ಸಮಸ್ಯೆಗಳು ಉದ್ಬವ ವಾಗದಹಾಗೆ ನೋಡಿಕೊಳ್ಳಲು ತಿಳಿಸುತ್ತೇವೆ ಎಂದು ಅಂಬಿಗ ನ್ಯೂಸ್ ವರದಿಗಾರರ ಜೊತೆ ಸಿ.ಇ.ಇ ಮತ್ತು ಎ.ಇ.ಇ ಅವರು ಮಾತನಾಡಿದರು.

Be the first to comment

Leave a Reply

Your email address will not be published.


*