ಶಾಸಕರಿಂದ ವಿವಿಧ ಗ್ರಾಮಗಳಲ್ಲಿ ಸಿಸಿ ರಸ್ತೆ ಉದ್ಘಾಟನೆ ಮತ್ತು ಹೈಮಾಸ್ಕ್ ಲೈಟ್ ಅಳವಡಿಕೆ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

 ದೇವನಹಳ್ಳಿ

ದೇವನಹಳ್ಳಿ ತಾಲೂಕಿನ ದಾಸರಹಳ್ಳಿ, ಮಾಯಸಂದ್ರ, ಮನಗೊಂಡನಹಳ್ಳಿ, ಶ್ಯಾನಪ್ಪನಹಳ್ಳಿ, ದೊಡ್ಡಗೊಲ್ಲಹಳ್ಳಿ, ಸೀಕಾಯನಹಳ್ಳಿ, ಸೋಲೂರು, ಬ್ಯಾಡರಹಳ್ಳಿ, ಬಿದಲೂರು, ಅಣೇಘಟ್ಟ ಗ್ರಾಮಗಳಲ್ಲಿ ಸಿಸಿ ರಸ್ತೆಗೆ ಗುದ್ದಲಿ ಪೂಜೆ ಮತ್ತು ಹೈಮಾಸ್ಕ್ ಲೈಟ್ ಉದ್ಘಾಟನೆಯನ್ನು ಶಾಸಕ ಎಲ್.ಎನ್.ನಾರಾಯಣಸ್ವಾಮಿ ನೆರವೇರಿಸಿದರು.

CHETAN KENDULI

ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಪಂ ವ್ಯಾಪ್ತಿಯ ದಾಸರಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮಗಳಲ್ಲಿ ರಸ್ತೆ ಸರಿಯಾಗಿದ್ದರೆ, ಸಂಪರ್ಕ ಬೆಳೆಯುತ್ತದೆ. ಹದಗೆಟ್ಟ ರಸ್ತೆಗಳಲ್ಲಿ ಓಡಾಟ ಮಾಡುವುದು ಕಷ್ಟವಾಗುತ್ತದೆ. ಊರಿನ ಮುಖಂಡರ ಮನವಿಯಂತೆ ಸುಮಾರು ಕುಂದಾಣ ಮತ್ತು ಕಸಬಾ ಹೋಬಳಿಯ ೧೧ ಹಳ್ಳಿಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗ್ರಾಮದ ರಸ್ತೆಗಳು ಶಾಶ್ವತವಾಗಿರಲು ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಸುಮಾರು ೫೦ಲಕ್ಷ ರೂ.ವೆಚ್ಚದಲ್ಲಿ ಕಾಮಗಾರಿಯನ್ನು ಮಾಡಲಾಗುತ್ತಿದೆ. ಮನಗೊಂಡನಹಳ್ಳಿ ಗ್ರಾಮದಲ್ಲಿ ಹೈಮಾಸ್ಕ್ ಲೈಟ್ ಉದ್ಘಾಟನೆ ಮಾಡಲಾಗುತ್ತಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ತಾಲೂಕಿನ ಸಮಗ್ರ ಅಭಿವೃದ್ಧಿಯೇ ನನ್ನ ಅಜೆಂಡವಾಗಿದೆ. ಊರಿನ ಗ್ರಾಮಸ್ಥರು ಮತ್ತು ಮುಖಂಡರು ರಸ್ತೆ ಗುಣಮಟ್ಟವನ್ನು ಖುದ್ದು ಪರಿಶೀಲಿಸಬೇಕು ಎಂದು ಹೇಳಿದರು. 

ಈ ವೇಳೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಕುಂದಾಣ ಹೋಬಳಿ ಜೆಡಿಎಸ್ ಅಧ್ಯಕ್ಷ ಚಂದ್ರೇಗೌಡ, ಕಾರಹಳ್ಳಿ ಗ್ರಾಪಂ ಅಧ್ಯಕ್ಷೆ ಚಂದ್ರಿಕಾ.ಎನ್.ರವಿ, ಗ್ರಾಪಂ ಸದಸ್ಯರು, ಪಿಡಿಒ ಎಸ್.ಕವಿತಾ, ಊರಿನ ಮುಖಂಡರು, ಗ್ರಾಮಸ್ಥರು ಇದ್ದರು. 

Be the first to comment

Leave a Reply

Your email address will not be published.


*