ರಾಜ್ಯ ಸುದ್ದಿಗಳು
ದೇವನಹಳ್ಳಿ
ದೇವನಹಳ್ಳಿ ಪಟ್ಟಣದ ಹಳೇ ಮಸೀದಿ ರಸ್ತೆಯಲ್ಲಿರುವ ಜಾಮೀಯ ಮಸೀದಿ (ಅಹಲೇ ಹದೀಸ್) ಆವರಣದಲ್ಲಿ ೭೩ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಮುಸ್ಲಿಂ ಸಮುದಾಯದ ಮುಖಂಡರು ರಾಷ್ಟ್ರೀಯ ಧ್ವಜಾರೋಹಣ ನೆರವೇರಿಸಿದರು. ಜಾಮೀಯ ಮಸೀದಿಯ ಅಧ್ಯಕ್ಷ ಅಬ್ದುಲ್‌ಖುದ್ದೂಸ್‌ಪಾಷ ಮಾತನಾಡಿ, ಬ್ರಿಟೀಷರು ಈ ದೇಶವನ್ನು ಬಿಟ್ಟು ಹೋದಾಗ ನಾವೇ ಸ್ವಾತಂತ್ರವನ್ನು ಕೊಡುತ್ತೇವೆಂದು ಬ್ರಿಟಿಷರು ಕಾನೂನು ತಂದುಕೊಡುತ್ತೇವೆಂದು ಹೇಳಿದ ಸಂದರ್ಭದಲ್ಲಿ ಮಹಾತ್ಮ ಗಾಂಧಿಜಿಯವರು ನಮ್ಮ ದೇಶಕ್ಕೆ ನಾವೇ ಕಾನೂನು ರೂಪಿಸಿಕೊಳ್ಳುತ್ತೇವೆ ಎಂದು ಹೇಳಿದಾಗ ದೇಶದಲ್ಲಿ ಕರಡು ಸಮಿತಿಯನ್ನು ರಚನೆ ಮಾಡಿ, ಆ ಸಮಿತಿಯಲ್ಲಿ ಸದಸ್ಯರೆಲ್ಲರೂ ಸೇರಿ ಕಾನೂನಾತ್ಮಕವಾಗಿ ಡಾ.ಬಿ.ಆರ್.ಅಂಬೇಡ್ಕರ್‌ರವರು ನೇತೃತ್ವದಲ್ಲಿ ಸಂವಿಧಾನವನ್ನು ರಚಿಸಿದ್ದರು. ಅದನ್ನು ಈ ದಿನದಲ್ಲಿ ಜ.೨೬, ೧೯೫೦ರಲ್ಲಿ ಜಾರಿಗೆ ತಂದು ದೇಶದ ಜನರಿಗೆ ಸಮರ್ಪಣೆ ಮಾಡಿದ ದಿನವೇ ಗಣರಾಜ್ಯೋತ್ಸವ ದಿನವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕರಾಟೆ ಮೌಲ ನೇತೃತ್ವದಲ್ಲಿ ನಡೆದ ಕರಾಟೆ ಮಕ್ಕಳಿಂದ ಕರಾಟೆ ಪ್ರದರ್ಶನ ಗಮನಸೆಳೆಯಿತು. ಈ ವೇಳೆಯಲ್ಲಿ ದೇವನಹಳ್ಳಿ ಸಾಹಿತಿ ಬಿ.ಜಿ.ಗುರುಸಿದ್ದಯ್ಯ, ಸಾರ್ವಜನಿಕ ಸಂಪರ್ಕ ಕೇಂದ್ರದ ಅಧ್ಯಕ್ಷ ಸಹದೇಶ್, ಜಾಮೀಯ ಮಸೀದಿಯ ಪಂಡಿತ ಹಜರತ್ ಅಬ್ದುಲ್ ಜಬ್ಬಾರ್, ಮುಸ್ಲಿಂ ಮುಖಂಡರು, ಮಕ್ಕಳು ಹಾಗೂ ನಾಗರೀಕರು ಇದ್ದರು.
Be the first to comment