ಕಾಮಧೇನು ಸಂಸ್ಥೆ ಯಿಂದ 73ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ನಗರದ ಕಾಮಧೇನು ಸಂಸ್ಥೆಯ ವತಯಿಂದ ಭಾರತಮಾತೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಂತೋಷ ಹೋಕ್ರಾಣಿ,ಅರುಣ ಲೊಕಾಪೂರ ಇವರು ಧ್ವಜಾರೋಹಣ ನೆರವೆರಿಸಿದರು.

ಕಾಮಧೇನು ಸಂಸ್ಥೆ ಕಾರ್ಯದರ್ಶಿ ವಿಜಯ ಸುಲಾಖೆ ಮಾತನಾಡಿ ಜಗತ್ತಿನಲ್ಲಿ ಸರ್ವಶ್ರೇಷ್ಠ ಸಂವಿಧಾನ ಹಾಗೂ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದು.ಡಾಕ್ಟರ ಬಾಬಾ ಸಾಹೇಬ್ ಅಂಬೇಡ್ಕರ್ ನಮ್ಮ ದೇಶಕ್ಕೆ ಸಂವಿಧಾನವನ್ನು 1950 ರಲ್ಲಿ ಜಾರಿಗೆ ಬರುವಂತೆ ಸಮರ್ಪಿಸಿದರು.ಸಂವಿಧಾನ ಶಿಲ್ಪಿ ಯವರಿಗೆ ಶತ ನಮನಗಳನ್ನು ತಿಳಿಸಿದರು.

ಕಾಮಧೇನು ಸಂಸ್ಥೆ ಕಳೆದ ಮೂರು ವರ್ಷಗಳಿಂದ ಅನೇಕ ಸೇವಾ ಚಟುವಟಿಕೆ ಯಲ್ಲಿ ತೊಡಗಿಕೊಂಡಿದೆ ಬರುವ ದಿನಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಪೆನ್ನು, ನೊಟಬುಕ್ಕ ವಿತರಣೆ ಹಾಗೂ ಐದು ಸಾವಿರ ಮಾಸ್ಕ್ ವಿತರಣೆ ಮಾಡುವ ಯೋಜನೆ ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ರಾಜು ಗೌಳಿ,ಅಶೋಕ ಮಹಿಂದ್ರಕರ, ರಾಘು ಯಾದಗಿರಿ,ಮಲ್ಲು ಸಜ್ಜನ ಹರಿಶ ಲೋಹಿಯಾ, ಶಿವರಾಜ್ ಬಾಲಪ್ಪನವರ, ಶಂಕರ ಗಣೆಕಲ, ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*