ಭಟ್ಕಳ:
ತಾಲೂಕಾ ಕ್ರೀಡಾಂಗಣದಲ್ಲಿ 73 ನೇ ಗಣರಾಜ್ಯೋತ್ಸವ ಅಂಗವಾಗಿ ಭಟ್ಕಳ ಸಹಾಯಕ ಆಯುಕ್ತೆ ಮಮತಾ ದೇವಿಯವರು ಧ್ವಜಾರೋಹಣವನ್ನು ನೆರವೇರಿಸಿದರು. ನಂತರ ಮಾತನಾಡಿದ ಅವರು ಈದಿನವು ನಮ್ಮ ಭಾರತದ ಸಂವಿಧಾನವನ್ನು ನೆನಪಿಸುವ ದಿನವಾಗಿದೆ. ಭಾರತವು ಜಾತ್ಯಾತಿತ ರಾಷ್ಟವಾಗಿದೆ ಎಂದರು. ಅಧ್ಯಕ್ಷತೆಯನ್ನ ವಹಿಸಿ ಮಾತನಾಡಿದ ಶಾಸಕ ಶ್ರೀ ಸುನಿಲ್ ನಾಯ್ಕರವರು ಎಲ್ಲರಿಗೂ ಶುಭಾಷಯ ಕೋರಿದರು.
ಕರೋನಾ ಸಮಯ ವಾಗಿರುವುದರಿಂದ ಸರಳವಾಗಿ ಕಾರ್ಯಕ್ರಮವನ್ನು ಆಚರಿಸುತಿದ್ದೇವೆ. ಎಂದರು ನಂತರ ಶಾಸಕರು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ ತಮ್ಮ್ ಕಚೇರಿಗಳಿಗೆ ಯಾವುದೇ ಸಾರ್ವಜನಿಕರು ಬಂದರು ಅವರಿಗೆ ಆಸನ ನೀಡಿ ಸೌಜನ್ಯತೆಯಿಂದ ಮತನಾಡಿ ಅವರಿಂದ ಯಾವದೇ ರಿತಿ ಪ್ರತಿಫಲ ಅಪೇಕ್ಷೀಸದೆ ಸರ್ಕಾರಿ ಕೆಲಸವನ್ನು ದೇವರ ಕೆಲಸವೆಂದು ತಿಳಿದುಮಾಡಿ ಸಾರ್ವಜನಿಕರ ಕೆಲಸ ಮಾಡಿಕೊಡುವಂತೆ ಕಿವಿಮಾತು ಹೇಳಿದರು.
ಈ ಸಂಧರ್ಭದಲ್ಲಿ ವೀವಿಧ ಕ್ಷೇತ್ರದಲ್ಲಿ ವಿಷೇಶ ಸಾದನೆ ಮಾಡಿದಂತಹ ಗಣ್ಯರು, ವಿಧ್ಯಾರ್ಥಿಗಳು, ಸರ್ಕಾರಿ ನೌಕರರನ್ನು ತಾಲೂಕಾ ಆಡಳಿತದ ಪರವಗಿ ಶಾಸಕರು ಸ್ನಾನಿಸಿದರು. ತಹಶಿಲ್ದಾರ ರವಿಚಂದ್ರ ಎಲ್ಲರನ್ನು ಸ್ವಾಗತಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೋಗೆರ ವಂದಿಸಿದರು. ಶಿಕ್ಷಕ ಶ್ರೀಧರ ಶೇಟ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಪುರಸಭಾಧ್ಯಕ್ಷ ಪರ್ವೇಜ ಖಾಸಿಂಜಿ, ಪುರಸಭಾ ಮುಖ್ಯಾಧಿಕಾರಿ ರಾಧಿಕಾ ಎಸ್ , ಜಾಲಿ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ರಾಮಚಂದ್ರ ವರ್ಣೇಕರ್, ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ್ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.
Be the first to comment