ರಾಜ್ಯ ಸುದ್ದಿಗಳು
ದೇವನಹಳ್ಳಿ
ಗ್ರಾಮೀಣ ಭಾಗದಲ್ಲಿ ಸ್ವಚ್ಛ ಸುಂದರ ಪರಿಸರ ನಿರ್ಮಾಣ ಮಾಡಬೇಕಾದರೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಕೊಯಿರ ಗ್ರಾಪಂ ಸದಸ್ಯೆ ಮಮತಾ ಶಿವಾಜಿಗೌಡ ತಿಳಿಸಿದರು.ದೇವನಹಳ್ಳಿ ತಾಲೂಕಿನ ಕೊಯಿರ ಗ್ರಾಪಂ ವ್ಯಾಪ್ತಿಯ ಜ್ಯೋತಿಪುರ ಗ್ರಾಮದಲ್ಲಿ ಗ್ರಾಪಂ ವತಿಯಿಂದ ಉಚಿತ ಡಸ್ಟ್‌ಬಿನ್ ವಿತರಣೆ ಕಾರ್ಯಕ್ರಮದಲ್ಲಿ ಗ್ರಾಮದ ಮಹಿಳೆಯರಿಗೆ ಡಸ್ಟ್‌ಬಿನ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ಗ್ರಾಪಂನಿಂದ ನೀಡುತ್ತಿರುವ ಡಸ್ಟ್‌ಬಿನ್‌ಗಳಲ್ಲಿ ಮನೆಯಲ್ಲಿ ಉತ್ಪತ್ತಿಯಾಗುವ ಒಣ ಮತ್ತು ಹಸಿ ತ್ಯಾಜ್ಯಗಳನ್ನು ಬೇರ್ಪಡಿಸಿ ಡಸ್ಟ್‌ಬಿನ್‌ನಲ್ಲಿ ತುಂಬಿಡಬೇಕು. ಗ್ರಾಪಂನಿಂದ ಬರುವ ಸ್ವಚ್ಛತಾ ವಾಹನಕ್ಕೆ ಸುರಿಯಬೇಕು. ಎಲ್ಲೆಂದರಲ್ಲಿ ಮನೆಯ ಅಕ್ಕಪಕ್ಕ, ಚರಂಡಿಗಳಲ್ಲಿ ಕಸವನ್ನು ಸುರಿಯುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಕಸವು ಚರಂಡಿ ಸೇರಿ ನೀರು ಹರಿಯದೆ ಅಲ್ಲಿ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಿಂದ ಅನಾರೋಗ್ಯಕ್ಕೆ ತುತ್ತಾಗುವಂತೆ ಆಗುತ್ತದೆ. ಪ್ಲಾಸ್ಟಿಕ್ ಉಪಯೋಗಿಸುವುದರಿಂದ ಕ್ಯಾನ್ಸರ್‌ನಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಆದಷ್ಟು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಎಲ್ಲರೂ ಪಣತೊಡಬೇಕು. ಪ್ರತಿ ಜನರು ಸ್ವಚ್ಛತೆಗೆ ಮೊದಲ ಆದ್ಯತೆಯನ್ನು ನೀಡಬೇಕು ಎಂದು ಸಲಹೆ ಮಾಡಿದರು. ಈ ವೇಳೆಯಲ್ಲಿ ಕೊಯಿರ ಗ್ರಾಪಂ ಸದಸ್ಯ ರಾಜಾರಾವ್, ಜ್ಯೋತಿಪುರ ಗ್ರಾಮದ ಮುಖಂಡರಾದ ರಾಮಾಂಜಿನಪ್ಪ, ಮಂಜುನಾಥ್, ರಾಜಣ್ಣ, ಜ್ಯೋತಿಪುರ ಗ್ರಾಮಸ್ಥರು ಇದ್ದರು.
Be the first to comment