ರಾಜ್ಯ ಸುದ್ದಿಗಳು
ಅಂಬಿಗ್ ನ್ಯೂಸ್:
ಕೋವಿಡ್ ಲಾಕಡೌನ್ ಹಿನ್ನೆಲೆ ಗ್ರಾಮೀಣ ಪ್ರದೇಶ ಸೇರಿದಂದೆ ಪಟ್ಟಣ ಪ್ರದೇಶದಲ್ಲಿ ಕೆಲವರು ಜನ್ಮದಿನ , ಗೃಹಪ್ರವೇಶ, ನೆಪ ಹೊಡ್ಡಿ ಪಾರ್ಟಿ ಮಾಡುತ್ತಿದ್ದು ಇದಕ್ಕೆ ಜನರೇ ಸ್ವಯಂ ಪ್ರೇರಿತವಾಗಿ ಕಡಿವಾಣ ಹಾಕಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಈ ಕುರಿತು ರಾಮನಗರದ ಸಿಪಿಐ ಟಿ.ಟಿ.ಕೃಷ್ಣ ಸುದ್ದಿಗರರೊಂದಿದೆ ಮಾತನಾಡಿ, ಕೊರೊನಾ ತಡೆಗೆ ರಾಜ್ಯ ಸರ್ಕಾರ ಲಾಕ್‌ಡೌನ್‌ಜಾರಿ ಮಾಡಿದ್ದು ಕೆಲವರು ಪಾರ್ಟಿ ಮಾಡುವುದಕ್ಕೆ ಇಂತಹ ನೆಪ ಒಡ್ಡಿ ನಿಯಮ ಉಲ್ಲಂಘಿಸಿ ತೋಟಗಳಲ್ಲಿ ಗುಂಪುಗೂಡಿ ಮದ್ಯಪಾನ ಮಾಡುವುದು, ಜನ್ಮದಿನ ಆಚರಿಸುವುದು, ಗೃಹಪ್ರವೇಶ ಇತ್ಯಾದಿಗಳ ಹೆಸರಿನಲ್ಲಿ ಗುಂಪು ಸೇರುತ್ತಿರುವುದು ಕಂಡುಬಂದಿದೆ. ಈ ಸಂಬಂಧ ಪ್ರಕರಣ ದಾಖಲಾದರೆ ಕನಿಷ್ಠ 50 ಸಾವಿರದಿಂದ 5 ಲಕ್ಷದವರೆಗೆ ದಂಡ ಮತ್ತು ಜೈಲುಶಿಕ್ಷೆಗೆ ಗುರಿಪಡಿಸಲು ಅವಕಾಶವಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
Be the first to comment