ಟಗ್ ಬೋಟ್ ನಲ್ಲಿ ಸಿಲುಕಿದ್ದ 9 ಜನರ ರಕ್ಷಣೆ ಅರಬ್ಬಿ ಸಮುದ್ರದಲ್ಲಿ ದುರಂತಕ್ಕೀಡಾಗಿದ್ದ ಬೋಟ್

 

ಅಂಬಿಗ ನ್ಯೂಸ್‌ ಸುದ್ದಿ; ಮಂಗಳೂರು: ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಅರಬ್ಬಿ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಎನ್ ಎಂಪಿಟಿ ಟಗ್ ಬೋಟ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೋಟ್ ನಲ್ಲಿದ 9 ಜನರನ್ನು ರಕ್ಷಣೆ ಮಾಡಲಾಗಿದೆ.

ಚಂಡಮಾರುತದಿಂದಾಗಿ ಅಲೆಗಳ ಅಬ್ಬರಕ್ಕೆ ಸಿಲುಕಿ ಟಗ್ ಬೋಟ್ ಶನಿವಾರ ಅರಬ್ಬಿ ಸಮುದ್ರದಲ್ಲಿ ಮಗುಚಿಬಿದ್ದಿತ್ತು. ಕಾಪುವಿನ ದೀಪಸ್ತಂಭದಿಂದ 13 ನಾಟಿಕಲ್ ಮೈಲಿ ದೂರದಲ್ಲಿ ಈ ದುರಂತ ಸಂಭವಿಸಿತ್ತು. ಇಬ್ಬರು ಈಜಿ ದಡ ಸೇರಿದ್ದರೆ ಬೋಟ್ ನಲ್ಲಿದ್ದ 9 ಜನರು ಸಂಕಷ್ಟಕ್ಕಿಡಾಗಿದ್ದರು. ಬೋಟ್ ನಲ್ಲಿದ್ದವರ ರಕ್ಷಣೆಗಾಗಿ ಕೋಸ್ಟ್ ಗಾರ್ಡ್ ನಿನ್ನೆಯಿಂದ ಹರಸಾಹಸಪಟ್ಟಿತ್ತು. ಅಂತಿಮವಾಗಿ ಇಂದು ಕೊಚ್ಚಿಯ ನೇವಿ ಹೆಲಿಕಾಪ್ಟರ್ ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿದ್ದು, ಇದೀಗ 9 ಜನರನ್ನು ರಕ್ಷಿಸಲಾಗಿದೆ.

Be the first to comment

Leave a Reply

Your email address will not be published.


*