ರಾಜ್ಯ ಸುದ್ದಿಗಳು
ದೇವನಹಳ್ಳಿ
ವಿಕಲ ಚೇತನರು ಸಮಾಜದಲ್ಲಿ ಇತರರಂತೆ ಬದಕುಕು ನಡೆಸುವಂತಾಗಬೇಕು. ಸಾಧನೆಗೆ ವಿಕಲಾಂಗ ಕಾರಣವಾಗಬಾರದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ತಿಳಿಸಿದರು. ಪಟ್ಟಣದ ತಾಲೂಕು ಆಡಳಿತ ಕಚೇರಿ ಮುಂಭಾಗದಲ್ಲಿ ದೇವನಹಳ್ಳಿ ತಾಲೂಕು ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ವಿಶೇಷ ಚೇತನರ ದಿನಾಚರಣೆಯಲ್ಲಿ ವಿಕಲಚೇತನ ಫಲಾನುಭವಿಗಳಿಗೆ ದಿನಸಿಕಿಟ್ ಮತ್ತು ಬ್ಲಾಂಕೆಟ್ ವಿತರಿಸಿ ಅವರು ಮಾತನಾಡಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದಿಂದ ಸೌಲಭ್ಯವಿದೆ. ಅದನ್ನು ಸದುಪಯೋಗಪಡಿಸಿಕೊಳ್ಳುವಂತಾಗಬೇಕು. ಸರಕಾರದ ಹಂತದಲ್ಲಿ ಮಾಸಾಶನ ಹೆಚ್ಚಳ ಮಾಡಲು ಮುಂದಿನ ದಿನಗಳಲ್ಲಿ ನಾನು ಕ್ಷೇತ್ರದಲ್ಲಿ ಗೆದ್ದುಬಂದಾಗ ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತೇನೆ. ಸಾಧನೆ ಮಾಡುವ ಛಲವನ್ನು ಇಟ್ಟುಕೊಳ್ಳಬೇಕು. ದೇಹದಲ್ಲಿ ಒಂದಲ್ಲಾ ಒಂದು ಅಂಗ ಕಳೆದುಕೊಂಡಿದ್ದರೂ ಸಾಧನೆ ಮಾಡಿ ಸಮಾಜದ ಮುಖ್ಯವಾಹಿನಿಗೆ ಹಲವಾರು ಬಂದಿರುವುದು ತಮಗೆ ತಿಳಿದೇ ಇದೆ. ಪ್ರತಿಯೊಬ್ಬರು ಜೀವನದಲ್ಲಿ ಜಿಗುಪ್ಸೆಯನ್ನು ಬಿಟ್ಟು ಸ್ವಾವಲಂಬಿ ಜೀವನ ನಡೆಸುವಂತಾಗಲಿ. ತಮಗೆ ಏನಾದರೂ ಅನುಕೂಲವಾಗಬೇಕಾದರೆ ಅದನ್ನು ಮುಖಂಡ ಸುರೇಶ್ ಅವರ ಗಮನಕ್ಕೆ ತರುವುದರ ಮೂಲಕ ಶಾಶ್ವತ ಪರಿಹಾರವನ್ನು ಮಾಡಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.
ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಸಿ.ಜಗನ್ನಾಥ್ ಮಾತನಾಡಿ, ವಿಕಲಚೇತನರು ಯಾರಿಗೂ ತಲೆಬಾಗಬಾರದು. ಸಮಾಜದಲ್ಲಿ ಎಲ್ಲರಂತೆ ಇರಬೇಕೆಂಬ ದೃಷ್ಠಿಯಿಂದ ವಿಶ್ವವಿಕಲಚೇತನರ ದಿನಾಚರಣೆಯನ್ನು ಪ್ರತಿ ವರ್ಷ ಸರಕಾರ ಆಚರಿಸುತ್ತದೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ವಿಕಲ ಚೇತನರಿಗೆ ಸರಕಾರದಿಂದ ಇಂತಿಷ್ಟು ಸೌಲಭ್ಯಗಳಿವೆ ಅದನ್ನು ತಿಳಿದಿರುವ ವಿದ್ಯಾವಂತರ ಸಹಾಯದಿಂದ ತಮ್ಮ ಹಕ್ಕನ್ನು ಪಡೆಯುವಂತಾಗಬೇಕು ಎಂದು ಸಲಹೆ ಮಾಡಿದರು.
ಇದೇ ಸಂದರ್ಭದಲ್ಲಿ ವಿಕಲ ಚೇತನ ಫಲಾನುಭವಿಗಳಿಗೆ ದಿನಸಿಕಿಟ್ ಮತ್ತು ಬ್ಲಾಂಕೆಟ್ ವಿತರಿಸಲಾಯಿತು. ನೆರೆದಿದ್ದ ಗಣ್ಯರಿಗೆ ಸನ್ಮಾನಿಸಲಾಯಿತು. ಈ ವೇಳೆಯಲ್ಲಿ ಪುರಸಭಾ ಅಧ್ಯಕ್ಷೆ ರೇಖಾವೇಣುಗೋಪಾಲ್, ಮುಖಂಡರಾದ ಚಂದ್ರಶೇಖರ್, ಅಪ್ಪಯ್ಯಣ್ಣ, ಅಣಯ್ಯಪ್ಪ, ಸರೇಶ್, ಕಲಾವಿದ ಬಾಬು, ಸೇರಿದಂತೆ ಹಲವಾರು ಇದ್ದರು.
Be the first to comment