ರಾಜ್ಯ ಸುದ್ದಿ
ಭಟ್ಕಳ: ತಾಲೂಕಿನ ಜಾಲಿಯ ಬದ್ರಿಯಾ ಕಾಲೋನಿಯಲ್ಲಿ ತೆಂಗಿನಮರವೇರಿ ಕಾಯಿ ಕೊಯ್ಯುತ್ತಿದ್ದ ಕೃಷಿ ಕೂಲಿ ಕಾರ್ಮಿಕನೊಬ್ಬನಿಗೆ ತೆಂಗಿನ ಗರಿಯು ವಿದ್ಯುತ್ ಲೈನ್ ತಗುಲಿದ ಪರಿಣಾಮ ಮರದಿಂದ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮೃತ ಪಟ್ಟ ವ್ಯಕ್ತಿ ಜಾಲಿ ಹಾರುಮಕ್ಕಿಯ ರಾಮ ಸೋಮಯ್ಯ ಗೊಂಡ ಎನ್ನುವವನಾಗಿದ್ದು ಈತನಿಗೆ 30 ವರ್ಷ ವಯಸ್ಸಾಗಿತ್ತು ಈತನು ಶುಕ್ರವಾರ ಮಧ್ಯಾಹ್ನ ಬದ್ರಿಯಾ ಕಾಲೋನಿಯ ಅಬ್ದುಲ್ ರಶೀದ್ ಅವರ ತೋಟದಲ್ಲಿದ್ದ ತೆಂಗಿನ ಮರದ ಕಾಯಿ ಕೊಯ್ಯುತ್ತಿದ್ದ ಸಂದರ್ಭದಲ್ಲಿ ಸನಿಹದಲ್ಲೇ ಇದ್ದ ವಿದ್ಯುತ್ ಲೈನ್‍ಗೆ ಆಕಸ್ಮಿಕವಾಗಿ ತೆಂಗಿನ ಗರಿಗೆ ತಾಗಿ ಈತನಿಗೆ ಶಾಕ್ ಹೊಡೆದಿದೆ. ಶಾಖ್‍ನಿಂದಾಗಿ ಅಸ್ವಸ್ಥಗೊಂಡ ಈತ ಮರದಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ವ್ಯಕ್ತಿ ಕಡು ಬಡವನಾಗಿದ್ದು ಕೃಷಿ ಕಾಯಕವನ್ನು ನಂಬಿ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ಕುರಿತು ಈತನ ಸಹೋದರ ಮಾದೇವ ಸೋಮಯ್ಯ ಗೊಂಡ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.
Be the first to comment