ರಾಜ್ಯ ಸುದ್ದಿಗಳು
ಜೋಯಿಡಾ
ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಬೃಹತ್ ಮೆರವಣಿಗೆ, ಧರಣಿ, ಪ್ರತಿಭಟನೆ, ದೌರ್ಜನ್ಯ ವೆಸಗುವ ಅರಣ್ಯ ಸಿಬ್ಬಂದಿಗಳ ಮೇಲೆ ತೀವ್ರ ಆಕ್ರೋಶ ವ್ಯಕ್ತವಾದವು. ಗೈರಾದ ಅರಣ್ಯ ಅಧಿಕಾರಿಗಳು ಆಗಮಿಸಲು ಧರಣಿ, ಉಪವಿಭಾಗ ಅಧಿಕಾರಿ ವಿಧ್ಯರ್ಶಿ ಚಂದರ್ಗಿ ಮಧ್ಯಸ್ಥಿಕೆಯಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ, ಅರಣ್ಯ ಅಧಿಕಾರಿಗಳ ಸಮ-ಕ್ಷಮ ಸಭೆಯ ದಿನಾಂಕ ಶೀಘ್ರದಲ್ಲಿ ನಿಗದಿಗೊಳಿಸಲಾಗುವುದು ಮತ್ತು ಅಲ್ಲಿಯವರೆಗೆ ಅರಣ್ಯವಾಸಿಗಳಿಗೆ ಆತಂಕಗೊಳಿಸದಂತೆ ಸೂಚಿಸಲಾಗುವುದು ಎಂಬ ಆಶ್ವಾಸನೆ ಮೇರೆಗೆ ಪ್ರತಿಭಟನೆ ಅಂತ್ಯ ಗೊಂಡಿತು.ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಇಂದು ಜೋಯಿಡಾದ ಕುಣಬಿ ಭವನದಿಂದ ತಹಶೀಲ್ದಾರ್ ಕಾರ್ಯಾಲಯ ವರೆಗೂ ಮೆರವಣಿಗೆ ಜರುಗಿಸಿ ಅರಣ್ಯವಾಸಿಗಳ ಸಮಸ್ಯೆಗೆ ಸ್ಫಂದನೆಗೆ ತಹಶೀಲ್ದಾರ್ ಸಂಜಯ್ ಕಾಂಬಳೆ ಅನುಪಸ್ಥಿತಿಯಲ್ಲಿ ಸಭೆ ಜರುಗದೇ ಉಪವಿಭಾಗ ಅಧಿಕಾರಿ ಮಧ್ಯಸ್ಥಿಕೆಯಲ್ಲಿ ಪ್ರತಿಭಟನೆ ತಾತ್ಪೂರ್ತಿಕವಾಗಿ ಸ್ಥಗಿತಗೊಳಿಸಲಾಯಿತು.
ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದು, ಅದರಂತೆ ಮಂಜೂರಿಗೆ ಸಂಬಂಧಿಸಿ ಕಾಯಿದೆ ಅಡಿಯಲ್ಲಿ ನೀರಿಕ್ಷೆಯಲ್ಲಿ ಇರುವಂತಹ ಅರಣ್ಯವಾಸಿಗಳಿಗೆ ಅರಣ್ಯ ಅಧಿಕಾರಿಗಳು ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿ-ವಿಧಾನ ಅನುಸರಿಸದೇ ಮಂಜೂರಿ ಪ್ರಕ್ರೀಯೆ ಜಿಲ್ಲೆಯಲ್ಲಿ ಜರಗುತ್ತಿರುವುದಕ್ಕೆ ಅರಣ್ಯವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಎರಡು ತಾಸು ಧರಣಿ: ಮುಂಚಿತವಾಗಿ ಲಿಖಿತ ರೂಪದಲ್ಲಿ ಅರಣ್ಯ ಅಧಿಕಾರಿಗಳು ಉಪಸ್ಥಿತರಿರಲು ತಾಲೂಕ ದಂಡಾಧಿಕಾರಿ ಸಂಜಯ್ ಕಾಂಬಳೆ ತಿಳಿಸಿದಾಗಿಯೂ ಅರಣ್ಯ ಅಧಿಕಾರಿಗಳ ಬರುವಿಕೆಗಾಗಿ ಅಗ್ರಹಿಸಿ ತಹಶೀಲ್ದಾರ್ ಕಛೇರಿ ಎದುರು ಎರಡು ತಾಸಿಗೂ ಮಿಕ್ಕಿ ತಹಶೀಲ್ದಾರ್ ಕಛೇರಿಯ ಆವರಣದಲ್ಲಿ ಧರಣಿ ಕುಳಿತಿರುವ ಪ್ರಕರಣ ಜರುಗಿತು.
2000 ಕ್ಕೂ ಮಿಕ್ಕಿ ಜಿಪಿಎಸ್ ಪುನರ್ ಪರಿಶೀಲನೆಗೆ ಮೇಲ್ಮನವಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಜಿಪಿಎಸ್ ಕಾರ್ಯ ಅಸಮರ್ಪಕವಾಗಿರುವ ಹಿನ್ನೆಲೆಯಲ್ಲಿ ಇಂದು ತಾಲೂಕಾದ್ಯಂತ ಆಗಮಿಸಿದ ಅರಣ್ಯವಾಸಿಗಳ 2000 ಕ್ಕೂ ಮಿಕ್ಕಿ ಪುನರ್ ಜಿಪಿಎಸ್ ಸರ್ವೇ ಉಲ್ಲೇಖಿಸಿ ಮೇಲ್ಮನವಿಯನ್ನು ಉಚಿತವಾಗಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಮಾಡಿತು.ಕಾರ್ಯಕ್ರಮ ಸಂಘಟಕ ಸುಭಾಷ್ ಗಾವಡಾ ಪ್ರಾಸ್ತವಿಕ ಹಾಗೂ ಸ್ವಾಗತ ಮಾಡಿದರು.ಸಭೆಯಲ್ಲಿ ಶಾಮ್ ಕಾಳೆ, ಶಿವದಾಸ ಕೆ ನಾಯರ್, ದೇವಿದಾಸ ಕೃಷ್ಣ ದೇಸಾಯಿ, ಮಾಬ್ಲು ಪುಂಡಲೀಕ, ಶರಣಪ್ಪ ಗದ್ದಿ, ಮಮತಾಜ ಮುಜಾವರ, ಪ್ರಸನ್ನ ಗಾವಡಾ, ಸುಭಾಷ್ ವೇಳಿಪ, ಪ್ರಭಾಕರ ಜೋಕನಗಾಳಿ, ಅರುಣ ಕುಮಾರ ಗಣೇಶಗುಡಿ, ಸಂತೋಷ ಗಾವಡಾ, ಶರಣಪ್ಪ ದೇವೆಂದ್ರಪ್ಪ ಗದ್ದಿ ಮುಂತಾದವರು ಉಪಸ್ಥಿತರಿದ್ದರು.
Be the first to comment