ಜಿಲ್ಲಾ ಸುದ್ದಿಗಳು
ವಿಜಯಪುರ
ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಹಾಗೂ ವಿಜಯೋತ್ಸವದ ಕಾರ್ಯಕ್ರಮವನ್ನು ಹೋಬಳಿ ಮಟ್ಟದಲ್ಲಿ ಆಯೋಜಿಸುವ ಕುರಿತು ಚರ್ಚಿಸಲು ಶುಕ್ರವಾರ ಸಂಜೆ ಶ್ರೀ ಶರಣ ವೀರೇಶ್ವರರ ಮಹಾ ಮನೆಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.ಸಮಾಜದ ಮುಖಂಡರು ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ
ಇದೇ 23 ಶನಿವಾರ 9 ಕ್ಕೆ ಶ್ರೀ ಶರಣ ವೀರೇಶ್ವರರ ಮಹಾಮನೆಯಲ್ಲಿ ಸಾಂಕೇತಿಕವಾಗಿ ಚೆನ್ನಮ್ಮ ಜಯಂತಿ ಆಚರಿಸಲಾಗುತ್ತದೆ.ನಂತರ 28 ಗುರುವಾರ ಬೆಳಗ್ಗೆ 9 ಕ್ಕೆ ಶ್ರೀ ಶರಣ ವೀರೇಶ್ವರರ ಮಹಾ ಮನೆಯಿಂದ ನಡೆಯುವ ಕಾರ್ಯಕ್ರಮದಲ್ಲಿ ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಚೆನ್ನಮ್ಮನ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೂರ್ಣ ಕುಂಭದೊಂದಿಗೆ ಕರಡಿ ಮಜಲಿನೊಂದಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ಹೊರಟು, ಎಪಿಎಂಸಿ ತಲುಪಿ ಸಮಾವೇಶ ಗೊಂಡು ಮೆರವಣಿಗೆ ಸಂಪನ್ನಗೊಳಿಸಲು ನಿರ್ಧರಿಸಲಾಯಿತು.
ಪಂಚಮಸಾಲಿ ಸಮಾಜದ ಹಿರಿಯರಾದ ಗುರುಪ್ರಸಾದ್ ದೇಶಮುಖ,ಎಂ.ಎಸ್.ಪಾಟೀಲ ಬಸಣ್ಣ ವಡಿಗೇರಿ ಮಾಂತೇಶ.ಎ.ಗಂಗನಗೌಡ್ರ ಬಸವರಾಜ ಗಂಗನಗೌಡ್ರ ಸಂಗಪ್ಪ ಹಂಪನಗೌಡ್ರ ಪರಸಪ್ಪ ಕಸೆಬೆಗೌಡರ ಶರಣಪ್ಪ ಗಂಗನಗೌಡ್ರ ಸುಭಾಸ ಗಡ್ಡಿ ವಿ.ಎಸ್ ಹಂಪನಗೌಡ್ರ ಶಶಿ ಬಂಗಾರಿ. ಸಂಗಣ್ಣ ಕುಳೆಗೆರಿ ಬಾಬು ಹಾದಿಮನಿ ಚಂದ್ರು ಗಂಗನಗೌಡ್ರ ಗೂಲಪ್ಪ ಗಂಗನಗೌಡ್ರ ವೀರೆಶ ಅವಾಜಿ ಮುದ್ದಪ್ಪ ಮಸ್ಕಿ ಆದಪ್ಪ ಮಸ್ಕಿ ಕಾಶಿನಾಥ ಬಿರದರಾ ಸೇರಿದಂತೆ ಮುಖಂಡರು,ಯುವಕರು,ಚೆನ್ನಮ್ಮ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.
Be the first to comment