ರಾಜ್ಯ ಸುದ್ದಿಗಳು
ಭಟ್ಕಳ:
ಭಟ್ಕಳ್ ತಾಲೂಕಿನ ಪುರಸಭೆಯಲಿ 2016-2017 ಸಾಲಿನಲ್ಲಿ ನಡೆದ 109 ಅಂಗಡಿಯ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ಅಂಗಡಿಕಾರರಿಗೆ ನ್ಯಾಯ ಒದಗಿಸುವ ಸಲುವಾಗಿ , ಹರಾಜು ಪ್ರಕ್ರಿಯೆ ವಿರುದ್ಧ ಪ್ರತಿಭಟಿಸಿ ರಾಮಚಂದ್ರ ನಾಯ್ಕ ಎನ್ನುವು ಅಂಗಡಿಕಾರರು ಪ್ರಾಣ ಕೂಡ ಕಳೆದು ಕೊಂಡಿರುತ್ತಾರೆ, ಬಹುತೇಕ ಹೆಚ್ಚಿನ ಪಾಲು ನಾಮಧಾರಿ ಸಮಾಜದ ಬಡ ಕುಟುಂಬದ ಜನರು ಪುರಸಭೆ ಅಂಗಡಿ ಬಾಡಿಗೆ ಪಡೆದಿದ್ದು ,ನಾಮಧಾರಿ ಸಮಾಜದ ಬಡ ಅಂಗಡಿಕಾರರಿಗೆ ಆಗುವ ಅನ್ಯಾಯ ವಿರೋಧಿಸಿ ಪುರಸಭೆಯ ಅವೈಜ್ಞಾನಿಕ ಟೆಂಡರ್ ಹರಾಜು ಪ್ರಕ್ರಿಯೆ ವಿರೋಧಿಸಿ ನಾಮಧಾರಿ ಸಮಾಜದ ಹೆಚ್ಚಿನ ಯುವಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು, ನಮ್ಮ ಸಮಾಜದ 85 ಜನರ ಮೇಲೆ ಪುರಸಭೆ ಅಧಿಕಾರಿಗಳು ಅಂದು ಭಟ್ಕಳ್ ಜೆ.ಎಂ.ಏಫ.ಸಿ ಕೋರ್ಟ್ ಲಿ ಕ್ರಿಮಿನಲ್ ಪ್ರಕರಣ ಧಾಖಲಿಸಿದರು, ಕಳೆದ 5 ವರುಷಗಳಿಂದ 85 ಯುವಕರು ಕೋರ್ಟ್ ಅಲೇಯುತ್ತಿದ್ಫಾರೆ.
ಇದ್ರಿಂದ ಯುವಕರು ಮಾಸಿಕವಾಗಿ ಕುಗ್ಗಿ ಹೋಗಿದ್ದಾರೆ ಆದ ಕಾರಣ ನಾಮಧಾರಿ ಸಮಾಜದ ಅಧ್ಯಕ್ಷರು ಸಮಾಜದ ಯುವಕರ ಭವಿಶ್ಯ ದ್ರಷ್ಟಿಯಿಂದ ನಾಮಧಾರಿ ಸಮಾಜದ ಶಾಸಕ ಸುನಿಲ್ ನಾಯ್ಕ ಮೂಲಕ ಸರಕಾರಕ್ಕೆ ಒತ್ತಡ ಹಾಕಿ 85 ಯುವಕರ ಮೇಲಿರುವ ಕ್ರಿಮಿನಲ್ ಪ್ರಕರಣ ಸರಕಾರವು ಹಿಂಪಡೆಯುವಂತೆ ಮಾಡಬೇಕು ಎಂದು ಆಗ್ರಹಿಸಿ ಯುವ ಮುಖಂಡ ಶ್ರೀನಿವಾಸ ನಾಯ್ಕ ಹನುಮಾನ ನಗರ ನೇತೃತ್ವದಲ್ಲಿ ನಾಮಧಾರಿದಾರಿ ಸಮಾಜದ ಯುವಕರು ನಾಮದಾರಿ ಸಮಾಜದ ತಾಲೂಕ ಅಧ್ಯಕ್ಷ ಕೃಷ್ಣ ನಾಯ್ಕ ಅವರಿಗೆ ಮನವಿ ನೀಡಿದರು.
Be the first to comment