ಲಾಲ್‌ ಬಹದ್ದೂರ ಶಾಸ್ತ್ರೀ ಜಯಂತಿ ಆಚರಣೆ ಮರೆತ ಅಧಿಕಾರಿಗಳು…!!! ತಡವಾಗಿ ಬೆಳಕಿಗೆ ಬಂದ ಘಟನೆ…!

ವರದಿ:ಗ್ಯಾನಪ್ಪ ದೊಡ್ಡಮನಿ ಮಸ್ಕಿ

ರಾಜ್ಯ ಸುದ್ದಿಗಳು

CHETAN KENDULI

ಮಸ್ಕಿ:

ಪಟ್ಟಣದಲ್ಲಿ ಹಾಗೂ ಬಳಗಾನೂರ ಪಟ್ಟಣದಲ್ಲಿ ಶನಿವಾರ ಬಹುತೇಕ ಸರಕಾರಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಲಾಲ್‌ ಬಹದ್ದೂರ ಶಾಸ್ತ್ರೀ ಅವರ ಜಯಂತೋತ್ಸವ ಆಚರಿಸದೆ ಅವಮಾನ ಮಾಡಿದ ಪ್ರಸಂಗ ಮಸ್ಕಿ ತಾಲೂಕಿನ ಬಳಗಾನೂರ ಪಟ್ಟಣ ಪಂಚಾಯಿತಿಯಲ್ಲಿ, ಮಸ್ಕಿಯ ಸರ್ಕಾರಿ ಆಸ್ಪತ್ರೆ,ಮಸ್ಕಿ ಬಸ್ ನಿಲ್ದಾಣದ ಕಚೇರಿಯಲ್ಲಿ, ಕಾಟಾಚಾರಕ್ಕೆ ಗಾಂಧೀಜಿ ಜಯಂತೋತ್ಸವ ಆಚರಿಸಿದ ಘಟನೆ ಬೆಳಕಿಗೆ ಬಂದಿದೆ.
ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ಹಲವು ಮಹನೀಯರ ಜಯಂತಿಗಳನ್ನು ಆಚರಿಸಲು ಸರಕಾರವೇ ವೆಚ್ಚ ಮಾಡುತ್ತಿದ್ದು, ಅದಕ್ಕಾಗಿ ತಹಶೀಲ್ದಾರರ ನೇತೃತ್ವದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ರಚನೆ ಮಾಡಿದೆ. ಆದರೆ ಜಯಂತಿಗಳಿಗೆ ಸರಕಾರ ಹಣ ಪೋಲು ಮಾಡುತ್ತದೆ ಎಂಬ ಶಂಕೆ ಇಂದಿನ ಗಾಂಧೀಜಿ ಜಯಂತಿ ಹಾಗೂ ಲಾಲ್‌ ಬಹದ್ದೂರ ಶಾಸ್ತ್ರೀಯವರ ಜನ್ಮ ದಿನಾಚರಣೆಯಲ್ಲಿ ಹಾಜರಿದ್ದ ಅಧಿಕಾರಿಗಳನ್ನು ಗಮನಿಸಿದರೆ ತಿಳಿಯುತ್ತದೆ.

                                                ಬಳಗಾನೂರ ಪಟ್ಟಣ ಪಂಚಾಯತಿಯಲ್ಲಿ ಕೇವಲ ಗಾಂದಿಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿರುವುದು.
                   ಸರಕಾರಿ ಆಸ್ಪತ್ರೆಯಲ್ಲಿಯೂ ಕೇವಲ ಗಾಂಧಿಜಿ ಅವರ ಜಯಂತ್ಯೋತ್ಸವವನ್ನು ಆಚರಣೆ ಮಾಡಿರುವುದು.

ಶಾಸ್ತ್ರೀಜಿಗೆ ಅಪಮಾನ:
ಆರೋಗ್ಯ ಇಲಾಖೆ ಮಸ್ಕಿ, ಪಟ್ಟಣ ಪಂಚಾಯತ ಬಳಗಾನೂರು, ಮಸ್ಕಿ ಬಸ್ ನಿಲ್ದಾಣದಲ್ಲಿ ಗಾಂಧೀಜಿ ಜಯಂತಿ ಮಾತ್ರ ಆಚರಿಸಿದ್ದು, ಉಳಿದಂತೆ ದೇಶ ಕಂಡ ಅಪ್ರತಿಮ ಪ್ರಧಾನಿ ಲಾಲ್‌ ಬಹದ್ದೂರ ಶಾಸ್ತ್ರೀ ಅವರ ಜಯಂತಿ ಆಚರಣೆ ಮಾಡದೆ ಅವರನ್ನು ಅವಮಾನಿಸಲಾಗಿದೆ. ಕರೆಯ ಮೂಲಕ ಮಸ್ಕಿಯ ಕೆಕೆ ಆರ್ ಟಿಸಿ ಘಟಕದ ವ್ಯವಸ್ಥಾಪಕರಲ್ಲಿ ಮಾತನಾಡಿ ಕೇಳಿದರೆ ಅವರು ಹೇಳುವುದು ಇಷ್ಟೇ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ಕಛೇರಿ ರಾಯಚೂರು ಇವರ ಆದೇಶ ಪತ್ರದಲ್ಲಿ ಇರುವಂತೆ ಗಾಂಧೀಜಿ ರವರ ಜಯಂತಿಯ ಬಗ್ಗೆ ಪ್ರಸ್ತಾವನೆ ಇದ್ದ ಕಾರಣ ಗಾಂಧೀಜಿಯನ್ನು ಮಾತ್ರ ಮಾಡಿದ್ದೇವೆ. ಮುಂದಿನ ದಿನಮಾನಗಳಲ್ಲಿ ಏನಾದರೂ ಲಾಲ್ ಬಹದ್ದೂರ ಶಾಸ್ತ್ರಿ ರವರ ಜಯಂತಿ ಆಚರಣೆ ಮಾಡಲು ಆದೇಶ ಬಂದರೆ ಮಾಡುತ್ತೇವೆ ಎಂದರು. ಹಾಗೆಯೇ ಮಸ್ಕಿಯ ಸರಕಾರಿ ಆಸ್ಪತ್ರೆ ಯಲ್ಲಿಯೂ ಕೂಡಾ ಲಾಲ್ ಬಹದ್ದೂರ ಶಾಸ್ತ್ರೀ ರವರ ಜಂತಿಯನ್ನು ಆಚರಣೆ ಮಾಡದೆ ಸರಕಾರದ ಆದೇಶವನ್ನು ಗಾಳಿಗೆ ತೂರಲಾಗಿದೆ.

ಕಾಟಾಚಾರ ಆಚರಣೆ:

ಪಟ್ಟಣದ ಬಹುತೇಕ ಸರಕಾರಿ ಕಚೇರಿಯಲ್ಲಿ ಕೇವಲ ಗಾಂಧಿ ಜಯಂತಿ ಮಾತ್ರ ಆಚರಿಸಿದ್ದು, ಲಾಲ್‌ ಬಹದ್ದೂರ ಶಾಸ್ತ್ರೀ ಜಯಂತಿ ಆಚರಣೆ ಮಾಡಿಲ್ಲ. ಈಗಲಾದರೂ ತಾಲೂಕ ಮತ್ತು ಜಿಲ್ಲಾಡಳಿತ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆಯೇ ಎಂದು ಕಾದುನೋಡಬೇಕಾಗಿದೆ.

ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಮಾಡದೆ ಅಪಮಾನ ಮಾಡಿದ್ದಾರೆ ಇಂಥ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕು. ನಾವು ಗಮನಕ್ಕೆ ತಂದರೂ ಕೂಡ ಫೋಟೋ ಇಲ್ಲ ನಮ್ಮ ಬಳಿ ಮತ್ತು ಸರ್ಕಾರ ಆದೇಶ ಕೂಡ ಬಂದಿಲ್ಲ. ಎಂದು ಉಡಾಫೆ ಉತ್ತರ ನೀಡುತ್ತಾರೆ.
-ಮೌನೇಶ್ ಬಿ.ಬಳಗಾನೂರು, ದಲಿತ ಸಂರಕ್ಷ ಸಮಿತಿ ಜಿಲ್ಲಾ ಉಪಾಧ್ಯಕ್ಷರು

ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಬಗ್ಗೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಆದ್ದರಿಂದ ಮಹಾತ್ಮ ಗಾಂಧಿ ಜಯಂತಿ ಮಾತ್ರ ಆಚರಣೆ ಮಾಡಿದ್ದೇನೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಸರ್ಕಾರ ಆದೇಶ ಇದ್ದರೆ ಮುಂದಿನ ದಿನಗಳಲ್ಲಿ ಆಚರಿಸುತ್ತೇನೆ.

– ಶರಣಬಸಯ್ಯ, ಬಳಗಾನೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

 

 

Be the first to comment

Leave a Reply

Your email address will not be published.


*