ನಕಲಿ ವೈದ್ಯರಿಗೆ ಮಧುಗಿರಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಶ್ರೀರಕ್ಷೆ 

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಮಧುಗಿರಿ ತಾಲ್ಲೂಕಿನಲ್ಲಿ ಅತೀ ಹೆಚ್ಚು ನಕಲಿ ವೈದ್ಯರ ಹಾವಳಿ ವ್ಯಾಪಿಸಿದ್ದು ಅದನ್ನು ತಪ್ಪಿಸುವಂತೆ ಅನೇಕ ಬಾರಿ ಮನವಿಯನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ನೀಡಿದ್ದು, ಆದರೆ ಆರೋಗ್ಯಾಧಿಕಾರಿಗಳು ನೆಪ ಮಾತ್ರಕ್ಕೆ 4-5 ನಕಲಿ ವೈದ್ಯರನ್ನು ಭೇಟಿ ಮಾಡಿ ನೋಟಿಸ್ ಕೊಟ್ಟು ಕಾನೂನು ಕ್ರಮ ಜರುಗಿಸಿದ್ದಾರೆ. ಇನ್ನುಳಿದ ನಕಲಿ ವೈದ್ಯರಿಗೆ ಅಭಯ ನೀಡಿ ಪೋಷಿಸುತ್ತಿರುವ ತಾಲ್ಲೂಕು ಆರೋಗ್ಯಾಧಿಕಾರಿಗಳು ಎಂದು ಸಾರ್ವಜನಿಕರೂ ನಮಗೆ ಮಾಹಿತಿ ನೀಡಿದ್ದಾರೆ, ಈ ವಿಚಾರವಾಗಿ ಮೇಲ್ನೋಟಕ್ಕೆ ನಮ್ಮಗಳಿಗೂ ಇದು ಸತ್ಯವೆನಿಸುತ್ತಿದೆ ಆದ ಕಾರಣ ಇಂದು ಮಧುಗಿರಿ ತಾಲ್ಲೂಕು ತಹಸೀಲ್ದಾರ್ ರವರು ರಜೆಯಲ್ಲಿ ಇರುವ ಕಾರಣ ಗ್ರೇಡ್ 2 ತಹಸೀಲ್ದಾರ್ ರಾದ ಪಿ.ಎಂ ಕಮಲಮ್ಮ ರವರನ್ನು ಭೇಟಿ ಮಾಡಿ ತಾಲ್ಲೂಕು ಆರೋಗ್ಯಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಹಾಗೂ ನಕಲಿ ವೈದ್ಯರ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದೇವೆ ಹಾಗೂ ಮುಂದಿನ ದಿನದಲ್ಲಿ ರಾಜ್ಯಾದ್ಯಂತ ನಕಲಿ ವೈದ್ಯರ ವಿರುದ್ಧ ಕ್ರಮ ಜರುಗಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಬೃಹತ್ ಮಟ್ಟದ ಹೋರಾಟ ಮಾಡುತ್ತೇವೆ ಎಂದು ಕರ್ನಾಟಕ ರಣಧೀರರ ವೇದಿಕೆ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು.ಕೆ. ಆರ್ ಹೇಳಿದರು.

CHETAN KENDULI

 ಕರ್ನಾಟಕ ರಣಧೀರರ ವೇದಿಕೆಯ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು.ಕೆ.ಆರ್ ಹಾಗೂ ಸಂಘಟನೆಯ ಪದಾಧಿಕಾರಿಗಳು ಮಾಡಿದ ಮನವಿಯನ್ನು ಪರಿಶೀಲಿಸಿ ಸದರಿ ಅಧಿಕಾರಿಗೆ ಇಂದೇ ನೋಟಿಸ್ ನೀಡಿ ಕ್ರಮವಹಿಸುತ್ತೇವೆ ಹಾಗೂ ಅವರ ಮಾತೃ ಇಲಾಖೆಯಾದ ಆರೋಗ್ಯ ಇಲಾಖೆಗೆ ಶಿಸ್ತುಕ್ರಮ ಜರುಗಿಸುವಂತೆ ಶಿಫಾರಸು ಮಾಡುತ್ತೇವೆ ಮತ್ತು ನಕಲಿ ವೈದ್ಯರ ವಿರುದ್ಧ ಅತೀ ಶೀಘ್ರದಲ್ಲಿ ಸೂಕ್ತ ರೀತಿಯ ಕ್ರಮ ಜರುಗಿಸುತ್ತೇವೆ. ನಕಲಿ ವೈದ್ಯರ ಮುಕ್ತ ಮಧುಗಿರಿಯನ್ನಾಗಿ ಮಾಡುತ್ತೇವೆ ಎಂದು ಮಧುಗಿರಿ ತಾಲ್ಲೂಕಿನ ಗ್ರೇಡ್ 2 ತಹಸೀಲ್ದಾರ್ ರಾದ ಪಿ.ಎಂ.ಕಮಲಮ್ಮ ತಿಳಿದರು.ಇದೆ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಕೆ.ಎನ್.ದೇವರಾಜು, ಕೊರಟಗೆರೆ ತಾಲ್ಲೂಕು ಅಧ್ಯಕ್ಷರಾದ ಮಂಜುಸ್ವಾಮಿ, ಮಧುಗಿರಿ ತಾಲ್ಲೂಕು ಗೌರವಾಧ್ಯಕ್ಷರಾದ ಕೃಷ್ಣೆಗೌಡ ಮತ್ತಿತರರು ಹಾಜರಿದ್ದರು

Be the first to comment

Leave a Reply

Your email address will not be published.


*