ಹೆದ್ದಾರಿಯಲ್ಲಿ ಬೀದಿ ದೀಪ ಅಳವಡಿಸಲು ಗ್ರಾಮಸ್ಥರ ಒತ್ತಾಯ..

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಹೊನ್ನಾವರ

ತಾಲೂಕಿನ ಹಳದಿಪುರ ಬಳಿ ರಾಷ್ಟ್ರೀಯ ಹೆದ್ದಾರಿಯು ಅವೈಜ್ಞಾನಿಕ ಕಾಮಗಾರಿ ಹಾಗೂ ಬೀದಿ ದೀಪಗಳಿಲ್ಲದೇ ಇತ್ತೀಚೆಗೆ ಅಪಘಾತ ಹಿಚ್ಚಾಗುತ್ತಿದ್ದು, ಕೂಡಲೇ ಸಮರ್ಪಕವಾಗಿ ಕಾಮಗಾರಿ ನಡೆಸಿ ಅವ್ಯವಸ್ತೆ ಸರಿಪಡಿಸುವಂತೆ ಹಳದಿಪುರ ಗ್ರಾಮಸ್ಥರು ಪಂಚಾಯತ್ ಗೆ ಮನವಿ ಸಲ್ಲಿಸಿದರು.

CHETAN KENDULI

ಬಡಗಣಿ ಸೇತುವೆಯಿಂದ ಸಾಲಿಕೇರಿಯವರೆಗೆ ಬೀದಿ ದೀಪಗಳು ಇಲ್ಲದಿರುವುದರಿಂದ ರಾತ್ರಿಯ ಸಮಯದಲ್ಲಿ ಪಾದಚಾರಿಗಳು , ವಾಹನ ಸವಾರರಿಗೆ ಗೋಚರಿಸದೆ ಅಪಘಾತಗಳು ಸಂಭವಿಸುತ್ತಿದೆ. ಚತುಷ್ಪದ ರಸ್ತೆ ಕಾಮಗಾರಿ ಪಡೆದ ಐಆರ್ಬಿ ಕಂಪನಿಯವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಮಾಡಿದ ಕರಾರಿನ ಪ್ರಕಾರ ಇದರ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಹಳದಿಪುರರ ಬಡಗಣಿಯಿಂದ ಸಾಲಿಕೇರಿಯವರೆಗೆ ದೀಪದ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಒಂದು ವಾರದ ಗಡುವಿನಲ್ಲಿ ದೀಪದ ವ್ಯವಸ್ಥೆಯ ಕಾಮಗಾರಿ ಸಂಪೂರ್ಣ ಮುಕ್ತಾಯವಾಗದೇ ಇದ್ದಲ್ಲಿ ಹಳದಿಪುರದ ಗ್ರಾಮ ಪಂಚಾಯತ್ ನ ಎಲ್ಲಾ ಪ್ರಜ್ಞಾವಂತ ನಾಗರೀಕರು ಐಆರ್ಬಿ ಕಂಪನಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

Be the first to comment

Leave a Reply

Your email address will not be published.


*