ಅರಣ್ಯ ಅಧಿಕಾರಿಗಳ ದೌರ್ಜನ್ಯ: ಭೂಮಿ ಹಕ್ಕಿಗೆ ಅಗ್ರಹಿಸಿ; ಡಿ. ೨೨ ಕ್ಕೆ ‘ಅರಣ್ಯವಾಸಿಗಳಿಂದ ಬೆಳಗಾಂವ ಚಲೋ’

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಶಿರಸಿ

ಅರಣ್ಯ ಅಧಿಕಾರಿಗಳಿಂದ ಅರಣ್ಯವಾಸಿಗಳ ಮೇಲಾಗುತ್ತಿರುವ ದೌರ್ಜನ್ಯ ಮತ್ತು ಅರಣ್ಯವಾಸಿಗಳ ಪ್ರಮುಖ ೧೦ ಸಮಸ್ಯೆಗೆ ಸ್ಪಂಧಿಸಿ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಬೆಳಗಾಂವದಲ್ಲಿ ಜರಗುತ್ತಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಡಿಸೆಂಬರ್ ೨೨ ರಂದು ‘ಅರಣ್ಯವಾಸಿಗಳಿಂದ ಬೆಳಗಾಂವ ಚಲೋ’ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.  ಇಂದು ಶಿರಸಿಯ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಬೆಳಗಾಂವ ಚಲೋ ಕಾರ್ಯಕ್ರಮದ ಮಾಹಿತಿಯನ್ನು ಬಿಡುಗಡೆಗೊಳಿಸುತ್ತಾ ಅವರು ತಿಳಿಸಿದರು.

CHETAN KENDULI

   ನಿರಂತರ ಅರಣ್ಯವಾಸಿಗಳ ಮೇಲೆ ಅರಣ್ಯ ಅಧಿಕಾರಿಗಳಿಂದ ಉಂಟಾಗುತ್ತಿರುವ ದೌರ್ಜನ್ಯ, ಸಕಾರಣ ವಿಲ್ಲದೇ ಅಭಯಾರಣ್ಯ ಪ್ರದೇಶ ವಿಸ್ತರಿಸುವುದು, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿ ಸಂದರ್ಭದಲ್ಲಿ ಅಸಮರ್ಪಕ ಜಿಪಿಎಸ್ ನ್ನು ಸರಿದೂಗಿಸುವುದು, ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದಲ್ಲಿ ವೈಫಲ್ಯ, ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿ-ವಿಧಾನ ಅನುಸರಿಸದೇ ಜರಗುತ್ತಿರುವ ಮಂಜೂರಿ ಪ್ರಕ್ರೀಯೆ, ಅರಣ್ಯವಾಸಿಗಳಿಗೆ ಅತೀವೃಷ್ಟಿಯಿಂದ ಬರಗಾಲ ಸಂದರ್ಭದಲ್ಲಿ ಪರಿಹಾರ ನಿಡದೇ ಇರುವುದು, ವನ್ಯಪ್ರಾಣಿಗಳಿಂದ ಅರಣ್ಯವಾಸಿಗಳಿಗೆ ವಿಮೆ ಮತ್ತು ಬೆಳೆಸಾಲ ನೀಡುವುದು, ಅತೀವೃಷ್ಟಿಯಿಂದ ಉಂಟಾಗಿರುವ ವಾಸ್ತವ್ಯದ ಇಮಾರತ್ತು ರಿಪೇರಿಗೆ ಕಿರುಕುಳ ನೀಡುವುದು ಎಂಬ ಪ್ರಮುಖ ೧೦ ಬೆಡೆಕೆಗಳನ್ನು ಸರಕಾರದ ಗಮನ ಸೆಳೆಯಲು ನಿರ್ಧರಿಸಲಾಗಿದೆ ಎಂದು ರವೀಂದ್ರ ನಾಯ್ಕ ತಿಳಿಸಿದರು.ಮಂಜೂರಿ ಪ್ರಕ್ರೀಯೆಗೆ ಗ್ರಹಣ:

   ಅರಣ್ಯ ಹಕ್ಕು ಕಾಯಿದೆ ೨೦೦೬ ರಲ್ಲಿ ನಿಯಮಾವಳಿ ೨೦೦೮ ಜಾರಿಗೆ ಬಂದು ೧೬ ವರ್ಷಗಳಾದರೂ, ಕರ್ನಾಟಕ ರಾಜ್ಯದಲ್ಲಿ ಮಂಜೂರಿ ಪ್ರಕ್ರೀಯೆಗೆ ಗ್ರಹಣ ಹಿಡಿದಂತಾಗಿದೆ. ದೇಶದಲ್ಲಿ ಅರಣ್ಯ ಪ್ರದೇಶ ಮತ್ತು ಅರಣ್ಯ ಅವಲಂಭಿತವಾಗಿರುವ ಅರಣ್ಯವಾಸಿಗಳ ಸಂಖ್ಯೆಯಲ್ಲಿ ಕರ್ನಾಟಕ ೫ ನೇ ಸ್ಥಾನದಲ್ಲಿದ್ದರೇ, ಅರಣ್ಯ ಹಕ್ಕು ಕಾಯಿದೆ ಪ್ರಗತಿಯಲ್ಲಿ ದೇಶದಲ್ಲಿ ೧೬ ನೇ ಸ್ಥಾನದಲ್ಲಿರುವುದು ವಿಷಾದಕರ ಎಂದು ಅವರು ಹೇಳಿದರು.೫ ವರ್ಷ ಒಂದು ಲಕ್ಷ ಮರ ಕಡಿತ: ತನಿಖೆಗೆ ಅಗ್ರಹ   ಅರಣ್ಯ ಇಲಾಖೆಯು ಅರಣ್ಯ ಕ್ಷೇತ್ರದಲ್ಲಿ ಕಾಮಗಾರಿ ನೆಪದಲ್ಲಿ ಇತ್ತೀಚಿನ ೫ ವರ್ಷದಲ್ಲಿ ಐದು ಲಕ್ಷಕ್ಕೂ ಮಿಕ್ಕಿ ಮರ ಕಡಿದಿರುವ ಕುರಿತು ಹಾಗೂ ಕಾಮಗಾರಿಯ ಪಾರದರ್ಶಕ್ಕೆ ವಿಶೇಷ ತನಿಖೆಗೆ ಒಳಪಡಿಸಲು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗೆ ಅಗ್ರಹಿಸಲಾಗುವುದು ಎಂದು ರವೀಂದ್ರ ನಾಯ್ಕ ತಿಳಿಸಿದರು.  ವೇದಿಕೆಯ ಮೇಲೆ ಹೋರಾಟಗಾರರ ವೇದಿಕೆಯ ಸಂಚಾಲಕರಾದ ಉದಯ ನಾಯ್ಕ, ರವಿ ಕುಂದರಗಿ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*