ಯೋಧರಿಗೆ ಕಾಡುತ್ತಿರುವ ಕೊರೊನಾ, ಕ್ಯಾಂಪಸ್ ಸ್ಥಳಕ್ಕೆ ಅಧಿಕಾರಿಗಳ ಭೇಟಿ 83ಕ್ಕೆ ಏರಿಕೆಯಾದ ಕೊರೊನಾ ಕೇಸ್ | ಏಕ ದಿನದಲ್ಲಿ 21 ಕೇಸ್ ಪತ್ತೆ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಬಿಎಸ್‌ಎಫ್) ಯೋಧರ ತರಬೇತಿ ಶಿಬಿರದಲ್ಲಿ ಒಟ್ಟು 830 ಯೋಧರು ಇದ್ದು, ಈಗಾಗಲೇ ಶಿಲಾಂಗ್ ಮತ್ತು ಮೇಘಾಲಯದಿಂದ ಸೆ.೧೪ರಂದು ಬಿಎಸ್‌ಎಫ್ ಕಾರಹಳ್ಳಿ ಮತ್ತು ಚಿಕ್ಕಜಾಲ ಶಿಬಿರಗಳಿಗೆ ಬಂದಿರುತ್ತಾರೆ. ಅದರಲ್ಲಿ ಕಳೆದ ದಿನ ಕೊರೊನಾ ತಪಾಸಣೆಗೆ ಒಳಪಡಿಸಿದಾಗ ಕೆಲವರಿಗೆ ಪಾಸಿಟೀವ್ ಬಂದಿದ್ದರಿಂದ ಎಲ್ಲಾ ಯೋಧರಿಗೂ ತಪಾಸಣೆಗೆ ಒಳಪಡಿಸಲಾಗಿದೆ. ಇದೀಗ ಏಕ ದಿನದಲ್ಲಿ 21 ಕೇಸ್ ಪಾಸಿಟೀವ್ ಕೇಸ್ ಏರಿಕೆಯಾಗಿರುತ್ತದೆ. 

CHETAN KENDULI

ಯೋಧರಿಗೆ ಬೆಂಬಿಡದ ಕೊರೊನಾದಿಂದಾಗಿ ದಿನೇ ದಿನೇ ಪ್ರಕರಣಗಳು ಏರುತ್ತಿರುವುದನ್ನು ನಿಯಂತ್ರಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಅಧಿಕಾರಿಗಳು ಕಾರಹಳ್ಳಿ ಬಿಎಸ್‌ಎಫ್ ಕ್ಯಾಂಪಸ್‌ಗೆ ಭೇಟಿ ನೀಡಿ ಅಲ್ಲಿನ ವಾಸ್ತವ ಮತ್ತು ಮುಂಜಾಗೃತಾ ಕ್ರಮಗಳನ್ನು ಅನುಸರಿಸುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಬಿಎಸ್‌ಎಫ್ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚಿಸಿದ್ದಾರೆ.ಮುಂಜಾಗೃತ ಕ್ರಮಗಳು: ಜಿಲ್ಲಾಧಿಕಾರಿಗಳು ಸ್ಥಳ ಬೇಟಿ ಮಾಡಿ, ಈಗ ಅಲ್ಲಿರುವ ಯೋಧರ ಆರೋಗ್ಯ ತಪಾಸಣೆ ನಡೆಸುವಂತೆ, ಒಂದೊಂದು ಟೆಂಟ್‌ಗೆ 4-5 ಜನರನ್ನು ಹಾಕಿ ಆದಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಎಲ್ಲಾ ರೀತಿಯ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲಿನ ಹಿರಿಯ ಅಧಿಕಾರಿಗಳು ಕೋವಿಡ್ ನಿಯಮಗಳನ್ನು ಪಾಲಿಸಲು ಮುಂದಾಗಿದ್ದಾರೆ. 

ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಉಪಾವಿಭಾಗಾಧಿಕಾರಿ ಅರುಳ್‌ಕುಮಾರ್, ದೇವನಹಳ್ಳಿ ತಾಲೂಕು ತಹಶೀಲ್ದಾರ್ ಅನಿಲ್‌ಕುಮಾರ್ ಅರೋಲಿಕರ್, ಕಾರಹಳ್ಳಿ ಪಿಎಚ್‌ಸಿ ವೈದ್ಯ ಡಾ.ಧನಂಜಯ್, ಆರ್.ಐ. ಚಿದಾನಂದ್, ಪಿಡಿಒ ಕವಿತಾ.ಎಸ್, ಬಿಎಸ್‌ಎಫ್ ಹಿರಿಯ ಅಧಿಕಾರಿಗಳು, ಯೋಧರು ಇದ್ದರು. ಈಗಾಗಲೇ ಶಿಲಾಂಗ್‌ನಿಂದ 753 ಜನ ಬಿಎಸ್‌ಎಫ್ ಸಿಬ್ಬಂದಿಗಳು 3 ದಿನದ ಹಿಂದ ಬಂದಿರುತ್ತಾರೆ. ಅವರಲ್ಲಿ ಮೊದಲ ದಿನದಲ್ಲಿ 13 ಜನಕ್ಕೆ ಕೋವಿಡ್ ಪಾಸಿಟೀವ್ ಕಾಣಿಸಿಕೊಂಡಾಗ ಶೀಘ್ರವಾಗಿ ಅವರನ್ನು ಯಲಹಂಕ ಕ್ಯಾಂಪ್‌ಗೆ ಶಿಫ್ಟ್ ಮಾಡಿ, ಇಲ್ಲಿರುವವರಿಗೆಲ್ಲಾ ಕೋವಿಡ್ ಟೆಸ್ಟ್ ಮಾಡಿಸಿದಾಗ 83 ಜನ ಇದುವರೆಗೂ ಪಾಸಿಟೀವ್ ಆಗಿದೆ. ಪಾಸಿಟೀವ್ ಆದವರಿಗೆಲ್ಲ ಸ್ಥಳೀಯ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗಿದೆ. ಎಲ್ಲರಿಗೂ ಮುಂಜಾಗೃತ ಕ್ರಮವಾಗಿ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. – ಕೆ.ಶ್ರೀನಿವಾಸ್ | ಜಿಲ್ಲಾಧಿಕಾರಿ

ಈಗಾಗಲೇ 830 ಯೋಧರನ್ನು ಕೊರೊನಾ ತಪಾಸಣೆ ಮಾಡಿಸಲಾಗಿದೆ. 43 ಜನಕ್ಕೆ ಪಾಸಿಟೀವ್ ಬಂದಿದೆ. ಆ ೮೩ ಜನರನ್ನು ಆಡ್ಮಿಟ್ ಮಾಡಲಾಗಿದೆ. 43 ಜನರನ್ನು ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. 20 ಜನರಿಗೆ ಆಕಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. 14 ಜನರಿಗೆ ಯಲಹಂಕ ಕೋವಿಡ್ ಕೇರ್ ಸೆಂಟರ್‌ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಆರೋಗ್ಯವಾಗಿದ್ದಾರೆ. ಎ.ತಿಪ್ಪೇಸ್ವಾಮಿ | ಡಿಎಚ್‌ಒ, ಬೆಂ.ಗ್ರಾ.ಜಿಲ್ಲೆ

Be the first to comment

Leave a Reply

Your email address will not be published.


*