ಜಿಲ್ಲಾ ಸುದ್ದಿಗಳು
ಹಬ್ಬದ ಮುಂಗಡ ಹೆಚ್ಚಳದ ಪ್ರಯೋಜನ
* ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಟ್ಟು 5.25 ಲಕ್ಷ ಖಾಯಂ ನೌಕರರಿದ್ದು, ಎಲ್ಲಾ ವೃಂದದ ಅಧಿಕಾರಿ/ನೌಕರರು ಹಬ್ಬಗಳ ಸಂದರ್ಭದಲ್ಲಿ ಬಡ್ಡಿರಹಿತವಾಗಿ ಮುಂಗಡವನ್ನು ಪಡೆಯಬಹುದಾಗಿದೆ.
* ಈ ಮುಂಗಡವನ್ನು 10 ಸಮ ಕಂತುಗಳಲ್ಲಿ ಮರುಪಾವತಿಸುವ ಅವಕಾಶ ಕಲ್ಪಿಸಲಾಗಿದೆ.
* ಬಡ್ಡಿರಹಿತ ಹಬ್ಬದ ಮುಂಗಡದ ಹೆಚ್ಚಳದಿಂದ ‘ಡಿ’ ಮತ್ತು ‘ಸಿ’ ದರ್ಜೆ ನೌಕರರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.
ಬಾಗಲಕೋಟೆ:ರಾಜ್ಯ ಸರ್ಕಾರಿ ನೌಕರರ ಇತಿಹಾಸದಲ್ಲೇ ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರಮಾಣದ ಹಬ್ಬದ ಮುಂಗಡ ಮೊತ್ತವನ್ನು ಹೆಚ್ಚಳ ಮಾಡಿರುವುದು ಇದೇ ಮೊದಲು ಹಾಗಾಗೀ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಯುತ ಬಸವರಾಜ ಬೊಮ್ಮಾಯಿರವರಿಗೆ, ಸಚಿವ ಸಂಪುಟದ ಸಚಿವರು ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳಿಗೆ,ಇದಕ್ಕಾಗಿ ಶ್ರಮವಹಿಸಿದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ಹಾಗೂ ಸಮಸ್ತ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ ಇಳಕಲ್ಲ ತಾಲೂಕಾ ನೌಕರರ ಸಂಘದ ಅಧ್ಯಕ್ಷ ಪಿ.ಎಸ್.ಪಮ್ಮಾರ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ.”
ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿದ್ದ ಹಬ್ಬದ ಮುಂಗಡವನ್ನು ಹೆಚ್ಚಳ ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸನ್ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದರ ಮೇರೆಗೆ, ಸರ್ಕಾರವು ಆದೇಶ ಸಂಖ್ಯೆ: ಆ.ಇ 8 ಮ.ಕ.ಮು. ದಿನಾಂಕ:14-12-2021 ರಂತೆ ರಾಜ್ಯ ಸರ್ಕಾರಿ ನೌಕರರ ಹಬ್ಬದ ಮುಂಗಡವನ್ನು ರೂ. 10,000-00 ಗಳಿಂದ ರೂ. 25,000/ಗಳಿಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿರುತ್ತದೆ.
ಹಬ್ಬದ ಮುಂಗಡ ಹೆಚ್ಚಳದ ಸಂಕ್ಷಿಪ್ತ ನೋಟ
Be the first to comment