ಉತ್ತರಕನ್ನಡ ಜಿಲ್ಲೆಯ ಮೊದಲ ಮಹಿಳಾ ಉಪ ಆಯುಕ್ತರಾಗಿ (ಡಿಸಿ) ಯಲ್ಲಾಪುರದ ಸಹನಾ ಬಾಳ್ಕಲ್ ಅಧಿಕಾರ ಸ್ವೀಕಾರ…

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಯಲ್ಲಾಪುರ

ಯಲ್ಲಾಪುರದ ಸಹನಾ ಬಾಳ್ಕಲ್ ಬೆಂಗಳೂರಿನ ಕೋರಮಂಗಲ ಸರಕು ಮತ್ತು ಸೇವಾ ವಿಭಾಗದಲ್ಲಿ ಸಹಾಯಕ ಆಯುಕ್ತ ಳಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಪಟ್ಟಣದ ಚೇತನಾ ಪ್ರಿಂಟರ್ಸ ನ ರಾಮಕೃಷ್ಣ ಬಾಳ್ಕಲ್ ಮತ್ತು ಶ್ರೀಮತಿರಾಮಕೃಷ್ಣ ಬಾಳ್ಕಲ್ ಅವರಪುತ್ರಿ ಸಹನಾ ಕರ್ನಾಟಕ ಆರ್ಥಿಕ ಮಂತ್ರಾಲಯದ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾಗಿ(ಡಿಸಿ) ಅಧಿಕಾರ ಸ್ವೀಕರಿಸಿದ್ದಾರೆ.

CHETAN KENDULI

ಅತೀ ಚಿಕ್ಕ ವಯಸ್ಸಿನಲ್ಲಿ ಮತ್ತು ಕಡಿಮೆ ಅವಧಿಯಲ್ಲಿ ಉನ್ನತ ಸ್ಥಾನಕ್ಕೇರಿದ ಉತ್ತರಕನ್ನಡ ಜಿಲ್ಲೆಯ ಮೊದಲ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಇವರು ಹಿಂದೆ ಕರ್ನಾಟಕ ಲೋಕಸೇವಾ ಆಯೋಗದ ೨೦೧೪ ನೇ ಸಾಲಿನ ಗೆಜೆಟೆಡ್ ಪ್ರೊಭೆಷನರ್ಸ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಗಳಿಸಿ ೨೦೧೭ ರಲ್ಲಿ ಸೇವೆಗೆ ಸೇರಿದ್ದರು. ದೂರಸಂಪರ್ಕ ಇಂಜನೀಯರಿಂಗ್ ನಲ್ಲಿ ಪಧವಿ ಮತ್ತು ಸಾರ್ವಜನಿಕಾಡಳಿತ ಮತ್ತುಪರಿಸರ ಕಾನೂನಿನಲ್ಲಿ ಉನ್ನತ ಪಧವಿ ಪಡೆದಿರುವ ಇವರು ತಮ್ಮ ಪತಿ ಅಶ್ವಿನಿಕುಮಾರ್ನಿರ್ದೇಶನದ ಅಂತರಾಷ್ಟಿಯ ಮನ್ನಣೆ ಪಡೆದ ಅಘನಾಶಿನಿ ಸಾಕ್ಷ್ಯ ಚಿತ್ರದ ಸಂಯೋಜನೆಮಾಡಿ ಕನ್ನಡದ ಅವತರಣಿಕೆಗೆ ಧ್ವನಿ ನೀಡಿದ್ದನ್ನು ಇಲ್ಲಿಸ್ಮರಿಸಬಹುದಾಗಿದೆ.

Be the first to comment

Leave a Reply

Your email address will not be published.


*