ಜಿಲ್ಲಾ ಸುದ್ದಿಗಳು
ಧರ್ಮಸ್ಥಳ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಪಟ್ಟಧಾರಿಯಾಗಿ 53 ವರ್ಷಗಳ ಸುದೀರ್ಘ ಜನಸೇವೆ ಗೈದವರು. ಜೀವನದ ಸಾರ್ಥಕ್ಯದ ಅನುಭೂತಿ ಪಡೆವಷ್ಟು ತಪಸ್ಸಿನಂತಹಾ ಜನ ಕಲ್ಯಾಣ ಯೋಜನೆಗಳನ್ನು ರೂಪಿಸಿದರು. ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ರಾಂತಿಯಿಂದ ತನ್ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ವಿಶ್ವಮಾನ್ಯವಾಗಿಸಿದವರು ಪೂಜ್ಯಶ್ರೀಡಿ.ವೀರೇಂದ್ರಹೆಗ್ಗಡೆಯವರು.ಧರ್ಮಾಧಿಕಾರಿ ಪಟ್ಟಕ್ಕೆ ಹೊಸ ಅರ್ಥ ಕೊಟ್ಟವರು, ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಬಹು ವಿಸ್ತಾರವಾಗಿ ಜಗತ್ತಿಗೆ ಪರಿಚಯಿಸಿದವರು. ’ಶ್ರೀ ಕ್ಷೇತ್ರದ ಪಟ್ಟವು ಹೆಗ್ಗಡೆಯವರ ಆಗಮನಕ್ಕಾಗಿ ಕಾದಿತ್ತೇನೋ ಎನ್ನುವಷ್ಟರ ಮಟ್ಟಿಗೆ ಪಟ್ಟಕ್ಕೊಂದು ವಿಶ್ವರೂಪ ಕೊಟ್ಟವರು ಪೂಜ್ಯ ಖಾವಂದರು.
19ನೇ ವರ್ಷದ ಎಳೆಯ ಹೆಗಲಲ್ಲಿ ’ಧರ್ಮಾಧಿಕಾರಿ’ ಪಟ್ಟದ ಮಹತ್ತರ ಜವಾಬ್ದಾರಿ ಹೊತ್ತರು. ತಂದೆ ಶ್ರೀ ಡಿ. ರತ್ನವರ್ಮ ಹೆಗ್ಗಡೆಯವರ ಬಳಿಕ ಹೆಗ್ಗಡೆ ಪರಂಪರೆಯನ್ನು ಮುಂದುವರೆಸಿದರು. ತಂದೆಯ ಹಾದಿಯಲ್ಲಿ ನಡೆದು ಕ್ಷೇತ್ರದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದರು.
ಪೂಜ್ಯರಿಗೆ ಪಟ್ಟವೇರಿ 53 ವರ್ಷ ತುಂಬಿದೆ. ಚೌಕಟ್ಟು ಹಾಕಿಕೊಳ್ಳದೆ ಸದಾ ಕಲಿಕಾ ಮನೋಭಾವದಿಂದ ಹೊಸ ವಿಚಾರದೆಡೆ ಮನಸ್ಸು ತೆರೆದಿಟ್ಟರು. ಕಷ್ಟ, ಅಡೆ-ತಡೆಗಳನ್ನು ದಿಟ್ಟವಾಗಿ ಎದುರಿಸಿದರು. ಎಳ್ಳಷ್ಟು ಎದೆಗುಂದಲಿಲ್ಲ. ಎಲ್ಲಾ ಗಡಿಗಳನ್ನು ಮೀರಿದರು, ಬಹುಮಾನ್ಯರಾಗಿ ಬೆಳೆದರು. ಜನ ಮಾನಸದಲ್ಲಿ ಪ್ರೀತಿಯ ಖಾವಂದರಾದರು. ಭಾರತದ ಪದ್ಮವಿಭೂಷಣರಾಗಿ ಸನ್ಮಾನಿತರಾದರು. ನಮ್ಮೆಲ್ಲರ ಪ್ರೀತಿಯ ಧರ್ಮಾಧಿಕಾರಿಗಳಾದ ಪೂಜ್ಯ ಖಾವಂದರ ಪಟ್ಟಾಭಿಷೇಕದ 54ನೇ ವಾರ್ಷಿಕೋತ್ಸವವನ್ನು ಗೌರವ ಹಾಗೂ ಅಭಿಮಾನದಿಂದ ಆಚರಿಸುತ್ತಿದ್ದೇವೆ. ಈ ಮೂಲಕ ಅವರ ಸೇವೆಗೆ ಹೃತ್ಪೂರ್ವಕ ಭಕ್ತಿಯ ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇವೆ.
Be the first to comment