ಜಿಲ್ಲಾ ಸುದ್ದಿಗಳು
ಅಂಕೋಲಾ
ಅಂಕೋತಾಲೂಕಿನ ಮೊಗಟಾ ಗ್ರಾಮದಲ್ಲಿ ವೀಣಾ ಗಾಂವ್ಕರ್ ಅವರ ಮನೆಯಲ್ಲಿ ಮಗಳಿಗಾಗಿ ತಂದೆ ತಾಯಿ ಕಣ್ಣೀರಿಡುತ್ತಿದ್ದರು. ತಂದೆ ಹಾಸಿಗೆ ಹಿಡಿದಿದ್ದರೆ ತಮ್ಮಅಕ್ಕನಿಗಾಗಿ ಊಟ ಬಿಟ್ಟಿದ್ದ. ಈ ಮನೆಯ ಹೆಣ್ಣು ಮಗಳು ಕಳೆದ ಒಂದು ವರ್ಷದ ಹಿಂದೆ ಹೊನ್ನಾವರದ ವ್ಯಕ್ತಿಯೊಬ್ಬ ರೊಂದಿಗೆ ಪ್ರೀತಿ ಮಾಡಿ ವಿವಾಹವಾಗಿದ್ದಳು. ಮಗಳು ಮನೆ ಬಿಟ್ಟು ಹೋದ ಘಟನೆಯಿಂದ ಮನ ನೊಂದ ಇಡೀ ಕುಟುಂಬ ಮಾಸಿಕವಾಗಿ ಕುಗ್ಗಿ ಹೋಗಿ ಕುಟುಂಬದ ಒಬ್ಬೊಬ್ಬರೇ ಅನಾರೋಗ್ಯಕ್ಕೆ ಒಳಗಾಗಿ ಹಾಸಿಗೆ ಹಿಡಿದಿರುವ ಘಟನೆ ನಡೆದಿತ್ತು. ಈ ಕುಟುಂಬದ ಶೋಚನೀಯ ಸ್ಥಿತಿಯನ್ನು ಅಖಂಡ ಕರ್ನಾಟಕ ಸೇವಾದಳದ ಕರಾವಳಿ ಭಾಗದ ಉಸ್ತುವಾರಿಗಳಾದ ಉಲ್ಲಾಸ್ ಪರಮೇಶ್ವರ ನಾಯ್ಕ್ ರವರು ನಮ್ಮ ಪಾರ್ಟಿಯ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾದ ನಾಗರಾಜ ನಾಯ್ಕರ ಗಮನಕ್ಕೆ ತಂದಿದ್ದರು ಮತ್ತು ಈ ಕುಟುಂಬಕ್ಕೆ ಮಗಳನ್ನು ಬೇಟಿ ಮಾಡಿಸಬೇಕೆಂದು ಕೇಳಿಕೊಂಡಿದ್ದರು
ದಿನಾಂಕ 13 – 10 – 2021ರಂದು ಸಮಾಜವಾದಿ ಪಾರ್ಟಿಯ ಮಹಿಳಾ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಮತಾ ನಾಯ್ಕ ಹಾಗೂ ಸಮಾಜವಾದಿ ಪಾರ್ಟಿಯ ಕಾರ್ಮಿಕ ವಿಭಾಗದ ರಾಜ್ಯ ಅಧ್ಯಕ್ಷರಾದ ನಾಗರಾಜ ನಾಯ್ಕರವರು ವೀಣಾ ಗಾಂವಕರ್ ರವರ ಕುಟುಂಬಕ್ಕೆ ಭೇಟಿ ನೀಡಿ ಸಮಾಧಾನ ಹೇಳಿದ್ದರು. ನಿಮ್ಮ ಮಗಳನ್ನು ನಿಮಗೆ ಭೇಟಿ ಮಾಡಿಸುವುದಾಗಿ ಬರವಸೆ ನೀಡಿದ್ದರು. ಹಾಗೂ ಹೊನ್ನಾವರದ ಪೊಲೀಸ್ ಅಧಿಕಾರಿಗಳ ಜೊತೆ ದೂರವಾಣಿಯಲ್ಲಿ ಸಂಪರ್ಕ ಮಾಡಿ ಈ ಕುಟುಂಬಕ್ಕೆ ಆ ಮಗಳನ್ನು ಭೇಟಿ ಮಾಡಿಸುವಂತೆ ವಿನಂತಿಸಿದ್ದರು. ಮಾಧ್ಯಮದೊಡನೆ ಮಾತನಾಡಿದ ಮಮತಾ ನಾಯ್ಕ ಕೂಡಲೇ ಅಂಕೋಲಾ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯವರು ಮಾನವೀಯತೆಯ ದೃಷ್ಟಿಯಿಂದ ವೀಣಾ ಗಾವ್ಕರ್ ಕುಟುಂಬಕ್ಕೆ ವೈದ್ಯಕೀಯ ನೆರವು ಹಾಗೂ ಕಾನೂನು ನೆರವನ್ನು ನೀಡಬೇಕೆಂದು ಆಗ್ರಹಿಸಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಪ್ರಶಾಂತ್ ಶಶಿಧರ್ ಗಾವಂಕರ್ ಹಾಗೂ ಅಖಂಡ ಕರ್ನಾಟಕ ಸೇವಾದಳದ ಕರಾವಳಿ ಭಾಗದ ಉಸ್ತುವಾರಿಗಳಾದ ಉಲ್ಲಾಸ್ ಪರಮೇಶ್ವರ ನಾಯ್ಕ್ ಉಪಸ್ಥಿತರಿದ್ದರು. ನಂತರದ ಬೆಳವಣಿಗೆಯಲ್ಲಿ ಮೊಗಟಾ ಗ್ರಾಮ ಪಂಚಾಯತ್ ಸದಸ್ಯರುಗಳು ಹಾಗೂ ಹೊನ್ನಾವರದ ಪೊಲೀಸ್ ಅಧಿಕಾರಿಗಳಾದ ಸಿಪಿಐ ಶ್ರೀಧರ್ ರವರು ಮುತುವರ್ಜಿವಹಿಸಿ ನೊಂದ ತಂದೆ, ತಾಯಿ ಹಾಗೂ ಮಗಳನ್ನು ಒಂದು ಮಾಡಿದ್ದಾರೆ. ಇದರಿಂದ ನಮಗೆ ಸಂತೋಷವಾಗಿದ್ದು ಇವರನ್ನು ಒಂದುಗೂಡಿಸಲು ಸಹಕರಿಸಿದ ಎಲ್ಲರಿಗೂ ಸಮಾಜವಾದಿ ಪಾರ್ಟಿಯ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಈ ಕುಟುಂಬ ಯಾವಾಗಲೂ ಒಂದಾಗಿ ಸಂತೋಷ, ಸಮಾಧಾನ ಹಾಗೂ ಆರೋಗ್ಯವಾಗಿ ಜೀವಿಸಲಿ ಎಂದು ಹಾರೈಸುತ್ತೇವೆ.
Be the first to comment