ರಾಜ್ಯ ಸುದ್ದಿಗಳು ದೇವನಹಳ್ಳಿ
ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಸ್.ರವಿ ಪರವಾಗಿ ಹೆಚ್ಚು ಮತಗಳನ್ನು ಚುನಾಯಿತ ಸದಸ್ಯರುಗಳು ನೀಡಿರುವುದರಿಂದ ಎಸ್.ರವಿ ಅವರ ಗೆಲುವು ಖಚಿತ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ಭವಿಷ್ಯ ನುಡಿದರು.
ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಪಂ ಆವರಣದಲ್ಲಿ ಚುನಾಯಿತ ಸದಸ್ಯರುಗಳು ಮತಹಾಕಿ ಹೊರಬಂದಾಗ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಾದ್ಯಂತ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹೆಚ್ಚು ಇದ್ದಾರೆ. ಪಕ್ಷೇತರ ಸದಸ್ಯರು ಸಹ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷದ ಪರವಾಗಿರುವ ಅಭ್ಯರ್ಥಿ ಎಸ್.ರವಿ ಹೆಚ್ಚು ಬಹುಮತಗಳನ್ನು ಪಡೆಯುವುದರ ಮೂಲಕ ಜಯಶೀಲರಾಗುತ್ತಾರೆ ಎಂದು ಹೇಳಿದರು. ಈ ವೇಳೆಯಲ್ಲಿ ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಿ.ಪ್ರಸನ್ನಕುಮಾರ್, ಕಾರಹಳ್ಳಿ ಗ್ರಾಪಂ ಸದಸ್ಯ ಜಯರಾಮ್, ಕುಂದಾಣ ಹೋಬಳಿ ಅಧ್ಯಕ್ಷ ಕೋದಂಡರಾಮು, ವಿಶ್ವನಾಥಪುರ ಗ್ರಾಪಂ ಸದಸ್ಯರು, ಮುಖಂಡರು, ಇದ್ದರು.
Be the first to comment