ಕೊಯಿರ ಗ್ರಾಪಂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರವಾಗಿದೆ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪಧಿಸಿರುವ ಎಸ್.ರವಿ ಪರವಾಗಿ ಮತದಾನ ಮಾಡಲಾಗಿದೆ ಎಂದು ಕೊಯಿರ ಗ್ರಾಪಂ ಅಧ್ಯಕ್ಷೆ ರಮ್ಯ.ವಿ.ಶ್ರೀನಿವಾಸ್ ತಿಳಿಸಿದರು. ದೇವನಹಳ್ಳಿ ತಾಲೂಕಿನ ರಾಜೀವನಗರ ಸಮೀಪದ ಶಿವಾಜಿಗೌಡ ನಿವಾಸದ ಆವರಣದಲ್ಲಿ ಮಾತನಾಡಿದರು. ಕೊಯಿರ ಗ್ರಾಪಂನಲ್ಲಿ ಒಟ್ಟು ೧೮ ಸದಸ್ಯರಿದ್ದು, ಅದರಲ್ಲಿ ೧೦ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಮತಗಟ್ಟೆ ಕೇಂದ್ರಕ್ಕೆ ತೆರಳಿ ಎಸ್.ರವಿ ಅವರಿಗೆ ಮತದಾನ ಮಾಡಲಾಗುತ್ತಿದೆ ಎಂದರು. 

CHETAN KENDULI

ಈ ವೇಳೆಯಲ್ಲಿ ಕೊಯಿರ ಗ್ರಾಪಂ ಉಪಾಧ್ಯಕ್ಷ ವಿಜಯ್‌ಕುಮಾರ್, ಸದಸ್ಯರಾದ ಸಿ.ಎನ್.ಮುನಿಆಂಜಿನಪ್ಪ, ಎಂ.ಎನ್.ಶೇಖರ್, ಮಮತಶಿವಾಜಿ, ಸಂಕೇತ್, ಜಗದೀಶ್, ಬಿಂದು.ಕೆ.ಎಸ್, ಆಂಜಿನಮ್ಮ, ರಾಜಾರಾವ್, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಸಂಪಂಗಿಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಪ್ರಸನ್ನ.ಸಿ, ಕೆಹೊಸೂರು ನಂಜೇಗೌಡ, ಶ್ರೀನಿವಾಸ್ (ಎಚ್‌ವಿಎಸ್), ರಬ್ಬನಹಳ್ಳಿ ಮುನಿರಾಜ್, ರಾಹುಲ್ ಇತರರು ಇದ್ದರು.

Be the first to comment

Leave a Reply

Your email address will not be published.


*