ರಾಜ್ಯ ಸುದ್ದಿಗಳು
ದೇವನಹಳ್ಳಿ
ಎಂಎಲ್ಸಿ ಚುನಾವಣೆ ಹಿನ್ನಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಎಂ.ರಮೇಶ್ಗೌಡ ಪರವಾಗಿ ಮತದಾನಕ್ಕಾಗಿ ಚುನಾಯಿತ ಸದಸ್ಯರುಗಳು ಒಟ್ಟಾಗಿ ಮತದಾನಕ್ಕೆ ಮುಂದಾದರು. ದೇವನಹಳ್ಳಿ ತಾಲೂಕಿನ ಆಲೂರುದುದ್ದನಹಳ್ಳಿ ಜೆಡಿಎಸ್ ಅಭ್ಯರ್ಥಿ ಎಚ್.ಎಂ.ರಮೇಶ್ಗೌಡ ಮತದಾನದ ಕರಪತ್ರವನ್ನು ಹಿಡಿದುಕೊಂಡು ಮತಗಟ್ಟೆ ಕೇಂದ್ರಕ್ಕೆ ತೆರಳಿದರು.
ಕುಂದಾಣ ವಿಎಸ್ಎಸ್ಎನ್ ಅಧ್ಯಕ್ಷ ರಾಮಣ್ಣ ಮಾತನಾಡಿ, ಆಲೂರುದುದ್ದನಹಳ್ಳಿ ಗ್ರಾಪಂಯಲ್ಲಿ ಒಟ್ಟು ೧೨ ಸದಸ್ಯಬಲವಿದ್ದು, ೧೧ಸದಸ್ಯರು ಜೆಡಿಎಸ್ ಅಭ್ಯರ್ಥಿ ಎಚ್.ಎಂ.ರಮೇಶ್ಗೌಡ ಪರವಾಗಿ ಮತಹಾಕಲಿದ್ದಾರೆ. ಈ ಬಾರಿ ಎಚ್.ಎಂ.ರಮೇಶ್ ಗೌಡ ಅವರಿಗೆ ಹೆಚ್ಚಿನ ಬಹುಮತಗಳನ್ನು ನೀಡುವುದರ ಮೂಲಕ ಗೆಲ್ಲಿಸಿಕೊಳ್ಳಲಾಗುತ್ತದೆ ಎಂದರು.
ಈ ವೇಳೆಯಲ್ಲಿ ಆಲೂರುದುದ್ದನಹಳ್ಳಿ ಗ್ರಾಪಂ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷೆ ಕಾಂತ.ವಿ.ಮುನಿರಾಜು, ಸದಸ್ಯರಾದ ಡಿ.ಆರ್.ರಘು, ಬಿ.ಎಂ.ಬೈರೇಗೌಡ, ಮುನಿಆಂಜಿನಪ್ಪ, ಕೇಬಲ್ ಮೂರ್ತಿ, ಅಂಬಿಕಪ್ರಭು, ಜಯಲಕ್ಷ್ಮಮ್ಮಮುನಿರಾಜು, ಕೃಷ್ಣ ಯಲ್ಲಪ್ಪ, ಮುನಿರಾಜು, ಚಿಕ್ಕಮುನಿಶಾಮಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಪಟೇಲಪ್ಪ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ಬೀರಪ್ಪ, ವಿಎಸ್ಎಸ್ಎನ್ ನಿದೇಶಕ ಮಧು, ಇದ್ದರು.
Be the first to comment