ಕಾರವಾರದಲ್ಲಿ ಮೇ 17 ಮತ್ತು 18 ರಂದು ಪತ್ರಕರ್ತರ ಉತ್ತರ ಕನ್ನಡ ಜಿಲ್ಲಾ ಮಟ್ಟದ “ಮೀಡಿಯಾ ಕಪ್” 2022 ಕ್ರಿಕೆಟ್ ಪಂದ್ಯಾವಳಿ 

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಕಾರವಾರ

ಪತ್ರಕರ್ತರ ಜಿಲ್ಲಾ ಮಟ್ಟದ ‘ಮೀಡಿಯಾ ಕಪ್ 2022’ ಕ್ರಿಕೆಟ್ ಪಂದ್ಯಾವಳಿಯು ಮೇ 17, 18 ರಂದು ನಗರದ ಮಾಲಾದೇವಿ ಮೈದಾನದಲ್ಲಿ ನಡೆಯಲಿದೆ.ಜಿಲ್ಲೆಯ ಪತ್ರಿಕಾ ಹಾಗೂ ಟಿವಿ ಮಾಧ್ಯಮ ಪ್ರತಿನಿಧಿಗಳಿಗೆ ಈ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಆಯಾ ತಾಲ್ಲೂಕಾ ವ್ಯಾಪ್ತಿಯ ತಂಡಗಳನ್ನು ಆಹ್ವಾನಿಸಲಾಗಿದೆ. ಒಟ್ಟು 12 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ.ಪಂದ್ಯಾವಳಿಯ ಪ್ರಥಮ ಬಹುಮಾನ 25 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 15 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಇರಲಿದೆ. ಇದರೊಂದಿಗೆ ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸಮನ್, ಆಲ್ ರೌಂಡರ್ ಹಾಗೂ ಉತ್ತಮ ತಂಡಕ್ಕೆ ಪ್ರತ್ಯೇಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಪಂದ್ಯಾವಳಿ ಆಯೋಜನೆಯ ಉಸ್ತುವಾರಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

CHETAN KENDULI

Be the first to comment

Leave a Reply

Your email address will not be published.


*