ರಾಯಚೂರಿಗೆ ವಿಧಾನ ಪರಿಷತ್ ಸ್ಥಾನ ನೀಡುವಂತೆ ಶೇಖರಗೌಡ ಮಾಲಿಪಾಟೀಲ ಸುದ್ದಿ ಗೋಷ್ಠಿ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾಸುದ್ದಿಗಳು 

ಮಸ್ಕಿ

ಶುಕ್ರವಾರ ಮಧ್ಯಾಹ್ನ ಪಟ್ಟಣದ ಬಸವೇಶ್ವರ ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಾಯಲದಲ್ಲಿ ಸನ್ಮಾನ್ಯ ಶ್ರೀ ಪ್ರತಾಪ್ ಗೌಡ ಪಾಟೀಲ್ ಅವರಿಗೆ ವಿಧಾನಪರಿಷತ್ ಸ್ಥಾನವನ್ನು ನೀಡಬೇಕು ಎಂದು ಒತ್ತಾಯಿಸಿ ಸುದ್ದಿ ಗೋಷ್ಠಿ ನಡೆಸಲಾಯಿತು.ಬಿಜೆಪಿ ಎಸ್ಟಿ ಮೋರ್ಚಾ ತಾಲೂಕಾ ಅಧ್ಯಕ್ಷರಾದ ಶೇಖರಗೌಡ ಮಾಲಿಪಾಟೀಲ್ ಕಾಟಗಲ್ ರವರು ಮಾತನಾಡುತ್ತ ಸರಳ ಸಜ್ಜಿಕೆಯ, ಪ್ರಾಮಾಣಿಕ ರಾಜಕಾರಣಿ ಆದಂತಹ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್ ರವರಿಗೆ ವಿಧಾನ ಪರಿಷತ್ ಸ್ಥಾನವನ್ನು ನೀಡಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. ಕೇಂದ್ರದ ಬಿಜೆಪಿ ನಾಯಕರಿಗೂ, ರಾಜ್ಯದ ನಾಯಕರಿಗೂ ನಾನೂ ಮನವಿ ಮಾಡುವುದೇನೆಂದರೆ ಈಗೇನು ನಮ್ಮ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ ಎಂದರೇ ಅದಕ್ಕೇ ಮೂಲ ಕಾರಣಿಭೂತರಾದವರೇ ಅದೇ ಮಾಜಿ ಶಾಸಕ ಪ್ರತಾಪ ಗೌಡ ಪಾಟೀಲ್ ಎಂಬುದನ್ನು ಮರೆಯದಿರಿ ಹಾಗೇಯೇ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್ ಯಡಿಯೂರಪ್ಪ ಸಾಹೇಬ್ರು ಶ್ರೀ ಪ್ರತಾಪ್ ಗೌಡ ಪಾಟೀಲ್ ಮಾಜಿ ಶಾಸಕರಿಗೆ ಕೊಟ್ಟ ಮಾತಿನಂತೆ ನಡೆದು ಕೊಳ್ಳಬೇಕು ನಾನೂ ಏನೇ ಆಗಲಿ ಪ್ರತಾಪ ಗೌಡ ಪಾಟೀಲ್ ರನ್ನು ಸಚಿವರನ್ನಾಗಿ ಮಾಡೆ ಮಾಡುತ್ತೇನೆ ಎಂಬ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ಭರವಸೆ ನನಗೆ ಇದೆ.

CHETAN KENDULI

ಕೇಂದ್ರದ ಹಾಗೂ ರಾಜ್ಯದ ನಾಯಕರಲ್ಲಿ ನಾನು ಪತ್ರಿಕಾ ಗೋಷ್ಠಿಯ ಮೂಲಕ ಒತ್ತಾಯ ಮಾಡುವುದು ಇಷ್ಟೇ ಇದೇ ಜೂನ್ ತಿಂಗಳಿನಲ್ಲಿ ಏಳು ವಿಧಾನ ಪರಿಷತ್ ಸದಸ್ಯರು ಗಳ ಸ್ಥಾನ ಕಾಲಿಯಾಗಲಿದ್ದು ಆ ಸ್ಥಾನಗಳಲ್ಲಿ ಒಂದನ್ನು ನಮ್ಮ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್ ರಿಗೆ ನೀಡಲೇ ಬೇಕು ಎಂದು ಬಿಜೆಪಿ ಎಸ್ಟಿ ಮೋರ್ಚಾ ತಾಲೂಕಾ ಘಟಕದ ವತಿಯಿಂದ ನಾನೂ ನಿಮ್ಮಲ್ಲಿ ಒತ್ತಾಯಿಸುತ್ತೇನೆ. ಹಾಗೆಯೇ 17 ಶಾಸಕರು ರಾಜಿನಾಮೆ ನೀಡಿ ಬಿಜೆಪಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಾಯಿತೋ ರಾಜೀನಾಮೆಯ ಶಾಸಕರಲ್ಲಿ ಮೊದಲಿಗರೇ ನಮ್ಮ ಪ್ರತಾಪ ಗೌಡ ಪಾಟೀಲರು ಎಂಬುದನ್ನು ಮರೆಯದಿರಿ. ಉಪ ಚುನಾವಣೆಯಲ್ಲಿ ಸೋತ ಹಾಗೂ ಶಾಸಕರಲ್ಲದ ಎಚ್. ವಿಶ್ವನಾಥ ಹಾಗೂ ಎಂಟಿಬಿ ನಾಗರಾಜ ಇಬ್ಬರು ನಾಯಕರಿಗೆ ಎಂಎಲ್ಸಿ ಸ್ಥಾನವನ್ನು ನೀಡಿದ್ದೀರಿ ಅದರಂತೆ ಮಸ್ಕಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಿಗೂ ಎಂಎಲ್ಸಿ ಸ್ಥಾನವನ್ನು ನೀಡಬೇಕು ಎಂದು ಬಿಜೆಪಿ ಎಸ್ಟಿ ಮೋರ್ಚಾ ತಾಲೂಕಾ ಅಧ್ಯಕ್ಷರು ಪತ್ರಿಕಾ ಹೇಳಿಕೆ ನೀಡುವ ಮೂಲಕ ಒತ್ತಾಯಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ರವಿಕುಮಾರ,ಯಂಕಪ್ಪ, ಎಸ್. ನಝೀರ್ ಸೇರಿದಂತೆ ಪತ್ರಿಕಾ ಮಿತ್ರರು ಇದ್ದರು.

 

Be the first to comment

Leave a Reply

Your email address will not be published.


*