ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
2021-22ನೇ ಸಾಲಿನಲ್ಲಿ ಕೃಷಿ ಇಲಾಖೆಯ ಸಂಸ್ಕರಣ ಘಟಕದ ಯೋಜನೆಯಡಿಯಲ್ಲಿ ರೈತರಿಗೆ ರಿಯಾಯತಿ ದರದಲ್ಲಿ ನೀಡುವ ತಾಡಪಾಲಗಳು ಮುದ್ದೇಬಿಹಾಳ ಕೃಷಿ ಇಲಾಖೆಗೆ ಬಂದಿದ್ದು ಜು.28ರೊಳಗೆ ತಾಲೂಕಿನ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಗದಿತ ನಮೂನೆ ಅರ್ಜಿಯನ್ನು ಮುದ್ದೇಬಿಹಾಳ ರೈತರ ಸಂಪರ್ಕ ಕೇಂದ್ರದಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ರೈತರು ಕೆ.ಕಿಸಾನನಲ್ಲಿ ನೊಂದಾಯಿತರಾಗುವುದು ಕಡ್ಡಾಯವಾಗಿದ್ದು ರೈತರು ಪಹಣೆ ಉತಾರೆ, ಆಧಾರ ಕಾರ್ಡ ಝರಾಕ್ಸ್, ಫೋಟೊ, ಬ್ಯಾಂಕ್ ಪಾಸಬುಕ್ ಝರಾಕ್ಸ್, ಪ.ಜಾ ಹಾಗೂ ಪ.ಪಂ ವರ್ಗದ ರೈತರು ತಮ್ಮ ಆರ್.ಡಿ. ನಂಬರ ಇರುವ ಜಾತಿ ಪ್ರಮಾಣ ಪತ್ರ ದಾಖಲೆಗಳನ್ನು ಒದಗಿಸಬೇಕು. ಜು.30 ರಂದು ಲಾಟರಿ ಮುಖಾಂತರ ಫಲಾನುಭವಿಗಳಿ ತಾಡಪಲ ವಿತರಣೆ ಮಾಡಲಾಗುವುದು ಎಂದು ಕೃಷಿ ಅಧಿಕಾರಿ ಬಸವರಾಜ ಟಕ್ಕಳಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment