ರಾಜ್ಯ ಸುದ್ದಿಗಳು
ದೇವನಹಳ್ಳಿ
ಜಿಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ಜಿಪಂ ಸದಸ್ಯರಾಗಿ ಕಳೆದ ಐದು ವರ್ಷಗಳಿಂದ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವುದು ಸಹಿಸದ ಕೆಲವು ಕಾಣದ ಕೈಗಳು ನಮ್ಮನ್ನು ತೇಜೋವದೆ ಮಾಡುತ್ತಿರುವುದು ಸತ್ಯಕ್ಕೆ ದೂರದ ಮಾತಾಗಿದೆ ಎಂದು ಜಿಪಂ ಮಾಜಿ ಸದಸ್ಯ ಕೆ.ಸಿ.ಮಂಜುನಾಥ್ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಜಿಲ್ಲಾಡಳಿತ ಭವನದಲ್ಲಿ ಮಾತನಾಡಿದ ಅವರು ನನ್ನ ಐದು ವರ್ಷದ ಅವಧಿಯಲ್ಲಿ ಕುಂದಾಣ ಜಿಪಂ ವ್ಯಾಪ್ತಿಯಲ್ಲಿ ಸಮಸ್ಯೆ ಎಂದು ಬರುವ ಜನರಿಗೆ ಬಗೆ ಹರಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ.
ಯಾವುದೇ ಕಪ್ಪು ಚುಕ್ಕೆ ಇಲ್ಲದೆ, ನಿಷ್ಪಕ್ಷವಾಗಿ ಪ್ರತಿ ಜನರೊಂದಿಗೆ ಬರೆತು ಕೆಲಸ ಮಾಡಿದ್ದೇನೆ. ಅಭಿವೃದ್ಧಿ ಕೆಲಸಗಳು ಮತ್ತು ಪಕ್ಷ ಸಂಘಟನೆಯನ್ನು ಸಹಿಸದೆ ಈ ರೀತಿ ಮಸಿ ಬಳಿಯುವ ಕೆಲಸಕ್ಕೆ ಕೆಲವು ವಿರೋಧ ಪಕ್ಷದವರು ಮುಂದಾಗಿದ್ದಾರೆ. ತಾಲೂಕಿನ ಕನ್ನಮಂಗಲ ಗ್ರಾಪಂ ವಿಚಾರವಾಗಿ ನನಗೆ ಸಂಬಂಧವಿಲ್ಲ. ಆದರೂ ಸಹ ಎಲ್ಲೋ ಒಂದು ಕಡೆ ಚುನಾವಣೆ ಬರುತ್ತದೆ ಎಂಬುವುದನ್ನು ಅರಿತು ತೊಂದರೆ ನೀಡುವ ಉದ್ದೇಶದಿಂದ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಹಾಗೂ ನನ್ನ ಹೆಸರಿಗೆ ಮಸಿಬಳಿಯುವ ಹುನ್ನಾರವನ್ನು ಹಾಕಿಕೊಂಡಿದ್ದಾರೆ. ಇದಕ್ಕೆಲ್ಲ ಜಗ್ಗುವವನಲ್ಲ. ಏನೇ ಆದರೂ ನಾನು ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬರುವ ಹಾಗೇ ನಡೆದುಕೊಂಡಿಲ್ಲ. ನಡೆದುಕೊಳ್ಳುವುದಿಲ್ಲ. ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಕೆ.ಸಿ.ಮಂಜುನಾಥ್ ಪ್ರಭಾವಿ ಮುಖಂಡ ಕೆಲಸ ಮಾಡುತ್ತಾನೆ. ಕೆಟ್ಟ ಹೆಸರು ಬರುವಂತೆ ಮಾಡಿದರೆ, ಮುಂಬರುವ ಚುನಾವಣೆಗೆ ದಾರಿಯಾಗುತ್ತದೆ ಎಂದು ಕಾಣದ ಕೆಲ ವ್ಯಕ್ತಿಗಳ ಷಡ್ಯಂತ್ರವಾಗಿದೆ. ಏನೇ ಆಗಲಿ ಈ ಬಾರಿ ಜಿಪಂ, ತಾಪಂ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಯಾರೇ ಅಭ್ಯರ್ಥಿಯಾಗಲೀ ಗೆಲ್ಲಿಸಿಕೊಂಡು ಬರಲಾಗುತ್ತದೆ. ಜತೆಗೆ ನನ್ನ ಹೆಸರು ಕೆಡಿಸಲು ಮುಂದಾಗಿರುವ ಕಾಣದ ಕೈಗಳಿಗೆ ಮುಂದಿನ ದಿನಗಳಲ್ಲಿ ನಾನು ನಂಬಿರುವ ಭಗವಂತನೇ ತಕ್ಕಪಾಠವನ್ನು ಕಲಿಸುತ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Be the first to comment