ಹೊನ್ನಾವರದಲ್ಲಿ ಚಿಕ್ಕ ಮಗು ನದಿಯಲ್ಲಿ ಬಿದ್ದು ಸಾವು

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಹೊನ್ನಾವರ

ನದಿಯ ದಡದಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ತಾಯಿಯ ಜೋತೆ ಹೋದ ಒಂದುವರೆ ವರ್ಷ ವಯಸ್ಸಿನ ಮಗು ಕಾರ್ತಿಕ ರಮೇಶ ನಾಯ್ಕ ಆಕಸ್ಮಿಕವಾಗಿ ನದಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದು, ಮಗುವಿನ ಮೃತದೇಹಕ್ಕಾಗಿ ಸ್ಥಳೀಯರ ಸಹಕಾರದೊಂದಿಗೆ ಪೊಲೀಸ್ ಮತ್ತು ಅಗ್ನಿಶಾಮಕ ದಳದಿಂದ ಜಂಟಿಯಾಗಿ ಶೋಧನಾ ಕಾರ್ಯಾಚರಣೆ ನಡೆಸಿದೆ.

CHETAN KENDULI

ನದಿ ತೀರದ ನಿವಾಸಿ ಶ್ರೀಮತಿ ಶೃತಿ ರಮೇಶ ನಾಯ್ಕ, ಹುಡಗೋಡ, ಹೊನ್ನಾವರ ತಾಲೂಕು ಇವರು ಇಂದು (ರವಿವಾರ) ತನ್ನ ಮನೆ ಹತ್ತಿರದಲ್ಲಿರುವ ನದಿಯ ದಡದಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ಈ ಘಟಣೆ ಸಂಬವಿಸಿದೆ.
ಮಗುವಿನ ಮೃತದೇಹಕ್ಕಾಗಿ ಸ್ಥಳೀಯರ ಸಹಕಾರದೊಂದಿಗೆ ಪೊಲೀಸ್ ಮತ್ತು ಅಗ್ನಿಶಾಮಕ ದಳದಿಂದ ಜಂಟಿಯಾಗಿ ಶೋಧನಾ ಕಾರ್ಯಾಚರಣೆ ನಡೆಯುತ್ತಿದೆ.


ಮಗು ನದಿಯಲ್ಲಿ ಬಿದ್ದು ಕಾಣೆಯಾದ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಮಗು ಕಾಣೆ ಪ್ರಕರಣ ದಾಖಲಾಗಿದೆ.

Be the first to comment

Leave a Reply

Your email address will not be published.


*