ಸಾದಹಳ್ಳಿ ಗ್ರಾಮದಲ್ಲಿ ಪ್ರಾಚೀನ ಕಾಲದ ಶಾಸನ ಪತ್ತೆ

ವರದಿ ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ತಾಲ್ಲೂಕಿನ ಕಸಬಾ ಹೋಬಳಿಯ ಸಾದಹಳ್ಳಿ ಗ್ರಾಮದ ಎಸ್. ಮಂಗಳ ಕೋಂ ಲೇಟ್ ಎಸ್.ಡಿ. ನಾಗರಾಜ್‍ರವರ ಮನೆಯ ಹಿಂಭಾಗ ಸರ್ವೆ ನಂ. 2 ರ ಜಮೀನಿನಲ್ಲಿ ಸುಮಾರು 40 ಇಂಚು ಉದ್ದ, 29 ಇಂಚು ಅಗಲ, 5 ಇಂಚು ದಪ್ಪವುಳ್ಳ ಗ್ರಾನೈಟ್ ಶಿಲೆಯ ಪ್ರಾಚೀನ ಕಾಲದ ಶಿಲಾ ಶಾಸನವನ್ನು ಪತ್ತೆ ಹಚ್ಚಿದ ಸಾಹಿತಿ – ಇತಿಹಾಸ ಸಂಶೋಧಕ ಬಿಟ್ಟಸಂದ್ರ ಗುರುಸಿದ್ದಯ್ಯ ಮಾಹಿತಿಯನ್ನು ಕಲೆ ಹಾಕಲು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮೈಸೂರಿನ ಶಾಸನ ತಜ್ಞ ಡಾ|| ಎಸ್. ನಾಗರಾಜಪ್ಪ ಅವರಿಗೆ ಶಾಸನದ ಪೋಟೋಗಳನ್ನು ಕಳುಹಿಸಿದ್ದರು.

CHETAN KENDULI

ಶಾಸನದ ಪಾಠ:-1 [ಸ್ವಸ್ತಿ] ಶ್ರೀ ಎಲಿತ್ತೊರೆ-

ಯ ಮಹಾಜನದ ಪ-

3.ರೆಯಾಳು ಊಳ್ದನ್ ಪಿಟ್ಟು

4.ಕಮ್ಮರ ತೋರುಗೊಳು-

5.ಳ್ ಸತ್ತನ್ ಇದಿರ್ದು ತಡೆ-

6.ದು ಪಲ್ಲವಮ್ಮೊಣ್ಣು ನರಿ-

7.ಗೆಯ ಕಿ[ರ್ತು ನೆಟ) ನಡೆದು

8.[ತಾ] ಬಿರ್ದು ಸ್ವಗ್ರ್ಗಕ್ಕೆ ಪೋ[ದನ್] [||]

ಎಲಿತೊರೆಯ ಮಹಾಜನರ ಆಳು ಪಿಟ್ಟಕಮ್ಮರನು ತುರುಗೊಳನ್ನು ನಡೆಸಿ, ಎದಿರು ಬಂದ ಹಲವರನ್ನು ಕೊಂದು, ತಾನೂ ಸಹ ಬಿದ್ದು ಸರ್ಗಕ್ಕೆ ಸೇರಿದ ವಿಷಯವನ್ನು ಶಾಸನವು ತಿಳಿಸುತ್ತದೆ. ಕಾಲದ ಉತ್ತೀಖವಿಲ್ಲ. ಲಿಪಿಯ ಲಕ್ಷಣಗಳ ಆಧಾರದ ಕ್ರಿ.ಶ 8ನೆಯ ಶತಮಾನದ ಶಾಸನ ಎನ್ನಬಹುದು. ಎಂದು ಶಾಸನತಜ್ಞ ಡಾ|| ಎಸ್. ನಾಗರಾಜಪ್ಪ ಓದಿ ಅಧ್ಯಯನ ಮಾಡಿ ವಿವರಣೆಯನ್ನು ತಿಳಿಸಿರುತ್ತಾರೆ. ದೇವನಹಳ್ಳಿ ತಾಲ್ಲೂಕಿನಾದ್ಯಾಂತ ಸುಮಾರು 3-4 ವರ್ಷಗಳಿಂದ 50 ಹೆಚ್ಚು ಕನ್ನಡ, ತಮಿಳು ಗ್ರಂಥಲಿಪಿ, ಸಂಸ್ಕÀೃತ ಭಾಷೆಗಳ ಅಪ್ರಕಟಿತ ಶಾಸನಗಳು ಹಾಗೂ 100 ಹೆಚ್ಚು ಮಾಸ್ತಿಗಲ್ಲು – ವೀರಗಲ್ಲುಗಳನ್ನು ಪತ್ತೆಹಚ್ಚಲಾಗಿದೆ.

ಈಗಾಗಲೇ ಹಲವು ಶಾಸನಗಳನ್ನು ಶಾಸನ ತಜ್ಞರು ಹಾಗೂ ಇತಿಹಾಸ ಸಂಶೋಧಕರನ್ನು ಸ್ಥಳಕ್ಕೆ ಕರೆಹಿಸಿ ಅಧ್ಯಯನ ಮಾಡಿ ಓದಿಸಲಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಯವರು ತಾಲ್ಲೂಕಿನಲ್ಲಿ ದೊರೆತಿರುವ ಎಲ್ಲಾ ಅಪ್ರಕಟಿತ ಶಾಸನಗಳನ್ನು ಸಮಗ್ರ ಅಧ್ಯಯನಮಾಡಿ ಓದಿ ದಾಖಲುಮಾಡಿ, ಇವುಗಳ ಸಂರಕ್ಷಣೆಯನ್ನು ಮಾಡಬೇಕು ಎಂದು ಇತಿಹಾಸ ಸಂಶೋಧಕ ಬಿಟ್ಟಸಂದ್ರ ಗುರುಸಿದ್ದಯ್ಯ ಮನವಿ ಮಾಡಿದರು.

Be the first to comment

Leave a Reply

Your email address will not be published.


*