ಶಂಕರ್ ನಾಗ್ ಜನ್ಮ ದಿನಾಚರಣೆ ಆಚರಣೆ : ಹೊನ್ನಾವರದಲ್ಲಿ ಸ್ಮಾರಕ ನಿರ್ಮಾಣದ ತೀರ್ಮಾನ.. 

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಹೊನ್ನಾವರ

ಶಂಕರ್ ನಾಗ್ ಅಭಿಮಾನಿ ಬಳಗ (ರಿ) ಉತ್ತರ ಕನ್ನಡ ಇದರ ಗುಣವಂತೆಯ ಕಚೇರಿಯಲ್ಲಿ ಶಂಕರ್ ನಾಗ್ ಅವರ ಜನ್ಮ ದಿನಾಚರಣೆಯನ್ನು ಶ್ರೀ ಕ್ಷೆತ್ರ ಭಂಡೂರಿನ ಧರ್ಮದರ್ಶಿಗಳಾದ ಶ್ರೀ ಪ್ರಶಾಂತ್ ಅವರು , ಹೊನ್ನಾವರದ ಶ್ರೀ ರಾಮ್ ಹಾಗೂ ಎಲ್ಲಾ ಶಂಕರ್ ನಾಗ್ ಅಭಿಮಾನಿಗಳೆಲ್ಲ ಸೇರಿ ಶಂಕರ್ ನಾಗ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಹಾಗೂ ದೀಪ ಬೆಳಗಿ ಕೇಕ್ ಕತ್ತರಿಸುವುದರ ಮೂಲಕ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. 

CHETAN KENDULI

ಕನ್ನಡ ಚಿತ್ರ ರಂಗಕ್ಕೆ ಶಂಕರ್ ನಾಗ್ ಅವರ ಕೊಡುಗೆ ಅಪಾರವಾಗಿದ್ದು ಅವರು ನಮ್ಮ ಹೊನ್ನಾವರದವರು ಎಂಬುವುದು ನಮಗೆ ಹೆಮ್ಮೆಯ ವಿಚಾರ, ಕಾರಣ ಅವರ ಹುಟ್ಟುರಾದ ಹೊನ್ನಾವರದಲ್ಲಿ ಅವರ ಪ್ರತಿಮೆ ನಿರ್ಮಾಣ ಹಾಗೂ ಅವರ ಸಾಧನೆ ತೋರುವ ಸ್ಮಾರಕ ನಿರ್ಮಾಣ ಮಾಡುವ ಕುರಿತು ಅಭಿಮಾನಿಗಳೆಲ್ಲ ಚರ್ಚಿಸಿ ಪ್ರತಿಮೆ ನಿರ್ಮಾಣ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು.

ಹೊನ್ನಾವರದ ಶರಾವತಿ ಸರ್ಕಲ್ ಅಲ್ಲಿ ಶಂಕರ್ ನಾಗ್ ಅಭಿಮಾನಿ ಬಳಗ, ಕರ್ನಾಟಕ ಕರಾವಳಿ ವೇದಿಕೆ, ಕರುನಾಡ ವಿಜಯ ಸೇನೆ, ಕನ್ನಡ ರಕ್ಷಣಾ ವೇದಿಕೆಯ ಎಲ್ಲಾ ಕಾರ್ಯಕರ್ತರು ಹಾಗೂ ಎಲ್ಲಾ ಶಂಕರ್ ನಾಗ್ ಅಭಿಮಾನಿಗಳೆಲ್ಲ ಸೇರಿ ಒಟ್ಟಾಗಿ ಶಂಕರ್ ನಾಗ್ ಜನ್ಮ ದಿನಾಚರಣೆಯನ್ನು ಆಚರಿಸಿದ್ದು ವಿಶೇಷವಾಗಿತ್ತು. ಎಲ್ಲಾ ಕನ್ನಡ ಪರ ಸಂಘಟನೆಗಳು ಹಾಗೂ ಶಂಕರ್ ನಾಗ್ ಅಭಿಮಾನಿಗಳೆಲ್ಲ ಒಂದಾಗಿ ಶಂಕರ್ ನಾಗ್ ಪ್ರತಿಮೆ ನಿರ್ಮಾಣ ಹಾಗೂ ಸ್ಮಾರಕ ನಿರ್ಮಾಣ ಮಾಡುವ ತೀರ್ಮಾನ ಕೈಗೊಳ್ಳಲಾಯಿತು.

Be the first to comment

Leave a Reply

Your email address will not be published.


*